Asianet Suvarna News Asianet Suvarna News

ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

* ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ ಮತಾಂತರ
* ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ
 * ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಬೌದ್ಧ ಧರ್ಮ ದೀಕ್ಷೆ

103 Peoples hindu religions convert to Buddhism in chitradurga
Author
Bengaluru, First Published Oct 31, 2021, 8:38 PM IST
  • Facebook
  • Twitter
  • Whatsapp

ಚಿತ್ರದುರ್ಗ, (ಅ.31):  ಜಿಲ್ಲೆಯಲ್ಲಿ 40 ರಿಂದ 50 ಕುಟುಂಬಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ  ಮತಾಂತರ (Religious-Conversion) ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಇದೀಗ 103 ಜನರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.

ಹೌದು... ಹಿಂದೂ ಧರ್ಮದ  (Hindu Religion)103 ಜನರು ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಭಾನುವಾರ ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಉಪಾಸಕ ಹಾಗೂ ಉಪಾಸಕಿಯರಾಗಿ ಬುದ್ಧನ ಮಾರ್ಗದಲ್ಲಿ ಸಾಗುವುದಾಗಿ ಪ್ರತಿಜ್ಞೆ ಮಾಡಿದರು.

ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ್ರೆ ಅಭ್ಯಂತರವಿಲ್ಲ: ದತ್ತಾತ್ರೇಯ ಹೊಸಬಾಳೆ

ತರಾಸು ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ ಬೌದ್ಧ ಧರ್ಮ ದೀಕ್ಷೆ ನೀಡಿದರು.

ಪಂಚಶೀಲತತ್ವಗಳನ್ನು ಪಠಿಸುವ ಮೂಲಕ ಹೊಸ ಧರ್ಮಕ್ಕೆ ಪದಾರ್ಪಣೆ ಮಾಡಿದರು. ಇದರಲ್ಲಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯದವರೇ ಹೆಚ್ಚಾಗಿದ್ದರು. ಗೊಲ್ಲ ಹಾಗೂ ಲಿಂಗಾಯತ ಸಮುದಾಯದ ತಲಾ ಒಬ್ಬರು ಬೌದ್ಧ ಧರ್ಮ ದೀಕ್ಷೆ ಪಡೆದುಕೊಂಡರು. 

ಇನ್ನು ಈ ಬಗ್ಗೆ ಆನಂದ ಬಂತೇಜಿ ಪ್ರತಿಕ್ರಿಯಿಸಿದ್ದು, ಇದೊಂದು ಜಾತಿಯಲ್ಲ ಧರ್ಮ. ಜಾತಿಯನ್ನು ಮೀರಿದ ತತ್ವಗಳು ಇಲ್ಲಿವೆ. ಜಾತಿ ಮನೋಭಾವದಿಂದ ಪ್ರತಿಯೊಬ್ಬರು ಹೊರಗೆ ಬರುವ ಅಗತ್ಯವಿದೆ. ಧರ್ಮ ದೀಕ್ಷೆಯನ್ನು ಸಾಮಾಜಿಕ ಪರಿವರ್ತನೆ ಎಂಬಂತೆ ಬಿಂಬಿಸಬೇಡಿ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.

ಮತಾಂತರಗೊಂಡಿದ್ದ 4 ಕುಟುಂಬಗಳು ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಘರ್​ ವಾಪಸಿ

'ಇದು ಮೂಲತಃ ಭಾರತದಲ್ಲಿ ಜನ್ಮತಳೆದ ಧರ್ಮ. ಭಾರತೀಯ ಸಂಸ್ಕೃತಿ, ಆಚಾರ-ವಿಜಾರಗಳು ಇದರಲ್ಲಿ ಬೆಸೆದುಕೊಂಡಿವೆ. ಇದೇ ಉದ್ದೇಶದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು. ಇದರೊಂದಿಗೆ ದೇಶವನ್ನೂ ಉಳಿಸಿದರು. ಅವರು ಬೇರೆ ಧರ್ಮದ ದೀಕ್ಷೆ ಪಡೆದಿದ್ದರೆ ದೇಶದಲ್ಲಿ ಕ್ಷೋಭೆ ಸೃಷ್ಟಿಯಾಗುತ್ತಿತ್ತು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವ-ಇಚ್ಛೆ ಮತಾಂತರಕ್ಕೆ ಅಭ್ಯಂತರವಿಲ್ಲ 
ಸ್ವ-ಇಚ್ಛೆಯಿಂದ ಯಾರಾದರೂ ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಆಮೀಷಗಳನ್ನು ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತ ಸಹ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದ್ದರು.

ಇತ್ತೀಚೆಗೆ ರಾಜ್ಯದಲ್ಲೂ ಸಹ ಮತಾಂತರ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಾಯಿಯನ್ನೇ ಕ್ರಿಶ್ಷಿಯನ್ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಇದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಈ ಬಗ್ಗೆ ಅಧಿವೇಶನದಲ್ಲಿ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿ, ಇದರ ವಿರುದ್ಧವಾಗಿ ಸೂಕ್ತ ಕಾನೂನು ಜಾರಿಗೆ ತರುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಮತಾಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಸುಡುಗಾಡು ಸಿದ್ಧ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ 40-50 ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಜನರಿಂದ ಈ ಬಗ್ಗೆ ದೂರು ಕೂಡ ಬಂದಿದೆ ಎಂದು ಶಾಸಕ ಗೂಳಿಹಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

Follow Us:
Download App:
  • android
  • ios