ಟ್ರಾಫಿಕ್ ನಿಯಮ ಉಲ್ಲಂಘನೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ನೀಡಿದ್ದ ಅವಕಾಶವನ್ನು ಸುದುಪಯೋಗ ಮಾಡಿಕೊಂಡ ವಾಹನ ಸವಾರರು 102 ಕೋಟಿ ರೂ. ಹಣವನ್ನು ದಂಡವಾಗಿ ಪಾವತಿಸಿದ್ದಾರೆ.
ಬೆಂಗಳೂರು (ಫೆ.11): ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಸಾವಿರಾರು ರೂಪಾಯಿ ದಂಡ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಕಳೆದೊಂದು ವಾರದಿಂದ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸಂಚಾರ ಪೊಲೀಸರು ಅವಕಾಶ ನೀಡಿದ್ದರು. ಇದನ್ನು ಸುದುಪಯೋಗ ಮಾಡಿಕೊಂಡ ಜನರು 102 ಕೋಟಿ ರೂ. ಹಣವನ್ನು ದಂಡವಾಗಿ ಪಾವತಿಸಿದ್ದಾರೆ. ಆದರೆ, ಕೊನೆಯ ದಿನ ಸಂಚಾರಿ ಪೊಲೀಸ್ ಠಾಣೆ ಮತ್ತು ಟಿಎಂಸಿ ಕೇಂದ್ರಗಳಲ್ಲಿ ಸಾರ್ವಜನಿಕರ ಸಾಲು ಹೆಚ್ಚಾಗಿದ್ದು, ದಂಡ ಪಾವತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಹೌದು, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರು ದಂಡ ಪಾವತಿಗೆ ಶೇ.50 ರಿಯಾಯಿತಿ ಅವಧಿ ವಿಸ್ತರಿಸಲು ಪಟ್ಟು ಹಿಡಿದಿದ್ದಾರೆ. ಸಂಚಾರ ನಿಯಮಗಳ ರಿಯಾಯಿತಿ ದಂಡ ಪಾವತಿಗೆ ಇಂದು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ವಾಹನ ಸವಾರರು ದಂಡ ಪಾವತಿಗೆ ಕ್ಯೂ ನಿಂತಿದ್ದರು. ಕೊನೆಯ ದಿನ ಎಂದು ದಂಡ ಪಾವತಿಸಲು ಮುಗಿಬಿದ್ದ ವಾಹನ ಸವಾರರು ಟಿಎಂಸಿಯಲ್ಲಿ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟುತ್ತಿದ್ದರು. ಹೀಗಾಗಿ, ಟಿಎಂಸಿ ಕೇಂದ್ರದಲ್ಲಿ ವಾಹನ ಸವಾರರ ಪುಲ್ ರಷ್ ಆಗಿತ್ತು.
ಇನ್ನು ನಕಲಿ ನಂಬರ್ ಪ್ಲೇಟ್‌ಗಳ ಬೇಟೆ; ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್ ಪ್ಲೇಟ್‌ಗಳು ಪತ್ತೆ: ಸಲೀಂ
ಸರ್ವರ್‌ಡೌನ್ ನಡುವೆಯೂ ದಾಖಲೆ ದಂಡ ಸಂಗ್ರಹ: ಇಂದು ದಾಖಲೆಯ ಮಟ್ಟದಲ್ಲಿ ದಂಡ ಪಾವತಿ ಅಗುವ ನಿರೀಕ್ಷೆಯಿದೆ. ಈಗಾಗಲೇ ದಂಡ ಸಂಗ್ರಹ ಮೊತ್ತ ನೂರು ಕೋಟಿ ದಾಟಿದೆ. ಟಿಎಂಸಿಯಲ್ಲಿ ದಂಡ ಪಾವತಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ವಾಹನ ಸವಾರರು ದೂರು ಪರಿಶೀಲನೆ ನಡೆಸಿ ದಂಡ ಕಟ್ಟಿಸಿಕೊಳ್ಳುತ್ತಿರುವ ಪೊಲೀಸರು. ಇಂದು ಸರ್ವರ್ ಡೌನ್ ಸಿಬ್ಬಂದಿಗಳ ಕೊರತೆಯಿಂದ ದಂಡ ಪಾವತಿದಾರರು ಹೈರಾಣು ಆಗಿದ್ದರು. ಮೂರು ಗಂಟೆಗಳಿಂದಲೂ ಕಾಯುತ್ತಿದ್ದರೂ ಸರ್ವರ್ ಡೌನ್ ಎನ್ನುತ್ತಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಸರತಿ ಕ್ಯೂ ಸಂಖ್ಯೆ ಹೆಚ್ಚಾಗಿದ್ದರೂ ದಂಡ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಇನ್ನುನಿಧಾನಗತಿಯಲ್ಲೇ ದಂಡ ಪಾವತಿ ಮಾಡಿಸಿಕೊಂಡ ಪೊಲೀಸರು ರಾತ್ರಿವರೆಗೂ ದಂಡ ಪಾವತಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆ ವೇಳೆಗೆ 12 ಕೋಟಿ ರೂ. ದಂಡ ವಸೂಲಿ ಆಗಿತ್ತು.

ಸಮಯ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ: ಸಂಚಾರ ನಿಯಮ ಉಲ್ಲಂಘನೆಯ ರಿಯಾಯಿ ದಂಡಪಾವತಿಗೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಟಿಎಂಸಿ ಹಾಗೂ ನಗರದ ಎಲ್ಲಾ ಸಂಚಾರಿ ಠಾಣೆಗಳ ಮುಂದೆ ಜನಜಾತ್ರೆಯಂತಾಗಿತ್ತು. ರಿಯಾಯಿ ದಂಡ ಪಾವತಿ ಮಾಡಲು ತಾ ಮುಂದು ನಾ ಮುಂದು ಅಂತ ಸರತಿ ಸಾಲಿನಲ್ಲಿ ನಿಂತು ಜನರು ಕಾಯುತ್ತಿದ್ದರು. ಆದರೆ, ವಿವಿಧ ಕಾರಣಗಳಿಂದ ದಂಡ ಪಾವತಿಗೆ ಹಣವನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದ ಹಲವರು ಸಾಲ ಮಾಡಲು ಮುಂದಾಗಿದ್ದಾರೆ. ಇನ್ನು ಕೆಲಸವರು ಸಮಯ ವಿಸ್ತರಣೆ ಮಾಡುವ ಭರವಸೆಯಲ್ಲಿದ್ದರೂ ಪೊಲೀಸರು ನಿರಾಕರಣೆ ಮಾಡಿದ್ದಾರೆ. ಹೀಗಾಗಿ, ರಿಯಾಯಿತಿ ದಂಡ ಪಾವತಿ ದಿನಾಂಕವನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.
Aero India-2023: ನಾಲ್ಕು ದಿನ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್: ಮಾರ್ಗ ಬದಲಾವಣೆ ವಿವರ ಇಲ್ಲಿದೆ
ಒಂದೇ ದಿನ 10 ಲಕ್ಷ ಪ್ರಕರಣ ದಂಡ ಪಾವತಿ ದಾಟುವ ನಿರೀಕ್ಷೆ: ನಿನ್ನೆ ಸಂಜೆಯ ವೇಳೆಗೆ 31 ಲಕ್ಷ ಪ್ರಕರಣಗಳಿಗೆ ದಂಡ ಪಾವತಿ ಮಾಡಿದ್ದರು. ಇನ್ನು ನಿನ್ನೆಯವರೆಗೆ ಬರೋಬ್ಬರಿ 85 ಕೋಟಿ ದಂಡ ಪಾವತಿ ಆಗಿತ್ತು. ಈ ದಂಡವು ಒಟ್ಟು 1.20 ಕೋಟಿ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಇನ್ನು ಇಂದು ಕೊನೆಯ ದಿನ ಹತ್ತು ಲಕ್ಷ ಪ್ರಕರಣಗಳಲ್ಲಿ ದಂಡ ಪಾವತಿ ಅಗುವ ನಿರೀಕ್ಷೆಯಿದೆ ಎಂದು ಪೊಲೀಸರು ನಿರೀಕ್ಷೆ ಮಾಡಿದ್ದರು.
