Corona ಸೋಂಕಿತರ ನಿಗಾಕ್ಕೆ 10 ಸಾವಿರ ವೈದ್ಯ ವಿದ್ಯಾರ್ಥಿಗಳು: ಡಾ.ಸುಧಾಕರ್
* ಶೇ.93 ಸೋಂಕಿತರು ಹೋಂ ಐಸೋಲೇಶನ್‌ನಲ್ಲಿ
* ಸೋಂಕಿತರ ಮೇಲೆ ಎಂಬಿಬಿಎಸ್, ಆಯುಷ್ ವಿದ್ಯಾರ್ಥಿಗಳ ನಿಗಾ
* ಟೆಸ್ಟ್ ರಿಸಲ್ಟ್ ಬರುವ ತನಕ ಮನೆಯಲ್ಲಿರಿ
ಬೆಂಗಳೂರು(ಜ.16): ಕೊರೋನಾ(Coronavirus) ಹೋಂ ಐಸೋಲೇಷನ್‌ನಲ್ಲಿರುವ(Home Isolation) ನಿಗಾಕ್ಕೆ 10 ಸಾವಿರ ವೈದ್ಯಕೀಯ ಹಾಗೂ ಆಯುಷ್ ವಿದ್ಯಾರ್ಥಿಗಳನ್ನು(Medical Students) ನಿಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(Dr K Sudhakar) ತಿಳಿಸಿದರು.
‘ಸ್ಟೆಪ್ ಒನ್’(Step One) ಸಂಸ್ಥೆಯ ಸಹಯೋಗದಲ್ಲಿ ಕೊರೋನಾ ಸೋಂಕಿತರ ಹೋಂ ಐಸೋಲೇಷನ್ ನಿಗಾ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ(Training) ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಹೆಚ್ಚು ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಅವರ ಆರೋಗ್ಯ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ. ಇದಕ್ಕಾಗಿ ಸುಮಾರು 10 ಸಾವಿರ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಇನ್ನೂ 10 ಸಾವಿರ ವಿದ್ಯಾರ್ಥಿ/ಸಿಬ್ಬಂದಿ ನಿಯೋಜಿಸುವ ಉದ್ದೇಶವಿದೆ. ಜತೆಗೆ 500 ತಜ್ಞ ವೈದ್ಯರು(Doctors) ಈ ವ್ಯವಸ್ಥೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
Covid Crisis: ರಾಜ್ಯದಲ್ಲಿ 230 ದಿನಗಳ ಗರಿಷ್ಠ ಕೇಸ್: ಪಾಸಿಟಿವಿಟಿ ಪ್ರಮಾಣ ಶೇ.15ಕ್ಕೆ ಏರಿಕೆ
ಮೂರನೇ ಅಲೆಯಲ್ಲಿ(Covid 3rd Wave) 2-3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ ತೀವ್ರತೆ ಕಡಿಮೆ ಇದೆ. ಶೇ.93 ರೋಗಿಗಳು ಮನೆ ಐಸೋಲೇಶನ್‌ನಲ್ಲೇ ಇದ್ದಾರೆ. ಶೇ.6ರಷ್ಟು ರೋಗಿಗಳು(Patients) ಆಸ್ಪತ್ರೆ ಹಾಗೂ ಶೇ.1ರಷ್ಟು ಕೊರೋನಾ ಆರೈಕೆ ಕೇಂದ್ರದಲ್ಲಿದ್ದಾರೆ. ಸೋಂಕು ಹೆಚ್ಚಳವಾಗುತ್ತಿದ್ದಂತೆ ಭಯಕ್ಕೆ ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಅಗತ್ಯವಿರುವವರಿಗೆ ಹಾಸಿಗೆ ಒದಗಿಸಲು ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯ. ದೂರವಾಣಿ ಕರೆ ಮಾಡಿ ಮಾರ್ಗದರ್ಶನ ನೀಡುವುದರಿಂದ ಅನೇಕರ ಜೀವ ಉಳಿಸಲು ಸಹಾಯಕವಾಗುತ್ತದೆ. ಎರಡನೇ ಅಲೆಯಲ್ಲಿ ರೋಗಿಗಳಿಗೆ 1.33 ಕೋಟಿ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಲಾಗಿತ್ತು. 42.57 ಲಕ್ಷ ವೈದ್ಯ ಸಮಾಲೋಚನೆ, 36 ಸಾವಿರ ರೋಗಿಗಳಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತಂತ್ರಜ್ಞಾನ ಪರಿಣಾಮಕಾರಿ ಬಳಕೆ:
ಕೊರೋನಾ ಮೊದಲ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಹೊಸ ಸೋಂಕು ನಿರ್ವಹಣೆ ಕುರಿತು ತರಬೇತಿ ನೀಡಬೇಕಿತ್ತು. ಆದರೆ, ಲಾಕ್‌ಡೌನ್, ಸೋಂಕು ಹೆಚ್ಚಿದ್ದ ಹಿನ್ನೆಲೆ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಲ್ಲಿ ತಂತ್ರಜ್ಞಾನ ಬಳಸಿ 2.5 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಇದು ಉಳಿದ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಸಾಮಾನ್ಯ ರೋಗಿಗಳು ಆಸ್ಪತ್ರೆಗೆ ಹೋಗಬೇಡಿ
ರಾಜ್ಯದಲ್ಲಿ(Karnataka) ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಬಹುದಾದ ಸಾಮಾನ್ಯ, ಸೌಮ್ಯ ಕಾಯಿಲೆ ಇರುವವರು, ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಮುಂದಿನ ಎರಡು ವಾರ ಆಸ್ಪತ್ರೆಗಳಿಗೆ ಭೇಟಿ ನೀಡಬಾರದೆಂದು ರಾಜ್ಯ ಸರ್ಕಾರ(Government of Karnataka) ಸಾರ್ವಜನಿಕರಿಗೆ ಮನವಿ ಮಾಡಿದೆ.
Covid Update ಕರ್ನಾಟಕದಲ್ಲಿ ಒಂದೇ ದಿನ 30 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ, ಆರೋಗ್ಯ ಇಲಾಖೆ ಎಚ್ಚರಿಕೆ
ಗಂಭೀರ ಆರೋಗ್ಯ ಸಮಸ್ಯೆಗಳಿದ್ದು ತುರ್ತು ಚಿಕಿತ್ಸೆಯ ಅವಶ್ಯಕ ಇದ್ದರೆ ಮಾತ್ರ ಆಸ್ಪತ್ರೆಗಳಿಗೆ(Hospital) ಭೇಟಿ ನೀಡಬೇಕು, ಖಾಸಗಿ ಆಸ್ಪತ್ರೆಗಳು ಕೂಡ ಇದನ್ನು ಪಾಲಿಸುವಂತೆ ಸರ್ಕಾರ ಹೇಳಿದೆ. ಒಮಿಕ್ರೋನ್(Omicron) ಪ್ರೇರಿತ ಸೋಂಕು ತೀವ್ರ ವೇಗವಾಗಿ ಹರಡುತ್ತಿದ್ದು, ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಜನ ದಟ್ಟಣೆ ತಪ್ಪಿಸಲು ಸರ್ಕಾರ ಈ ಸೂಚನೆ ನೀಡಿದೆ.
ಟೆಸ್ಟ್ ರಿಸಲ್ಟ್ ಬರುವ ತನಕ ಮನೆಯಲ್ಲಿರಿ
ಬೆಂಗಳೂರು: ಕೋವಿಡ್-19(Covid-19) ಪರೀಕ್ಷೆಗೆ ಮಾದರಿ ಕೊಟ್ಟವರು ಫಲಿತಾಂಶ ಬರುವವರೆಗೆ ಐಸೋಲೇಷನ್ ಅಥವಾ ಹೋಮ್ ಕ್ವಾರಂಟೈನ್‌ನಲ್ಲಿ ಇರುಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ(Department of Health) ಸೂಚಿಸಿದೆ. ಕೋವಿಡ್ ಪರೀಕ್ಷೆಗಾಗಿ(Covid Test) ಮಾದರಿ ಕೊಟ್ಟವರಲ್ಲಿ ಸೋಂಕು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಪರೀಕ್ಷೆಗೆ ಮಾದರಿ ನೀಡಿ ಬಳಿಕ ಹೊರಗೆ ಹೋಗುವುದು, ಕೆಲಸಕ್ಕೆ ಹೋಗುವುದು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಅದನ್ನು ಬೇಜವಾಬ್ದಾರಿಯ ನಡವಳಿಕೆ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.