Covid Update ಕರ್ನಾಟಕದಲ್ಲಿ ಒಂದೇ ದಿನ 30 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ, ಆರೋಗ್ಯ ಇಲಾಖೆ ಎಚ್ಚರಿಕೆ

* ಕರ್ನಾಟಕದಲ್ಲಿ ಕೊರೋನಾ ಸ್ಫೋಟ
* ಒಂದೇ ದಿನ 30 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ
*  ಶೇ.15ಕ್ಕೇರಿದ ಕೊರೋನಾ ಪಾಸಿಟಿವಿಟಿ ದರ

 

32793 New Coronavirus Cases and 7 deaths In Karnataka On Jan 15th rbj

ಬೆಂಗಳೂರು, (ಜ.15): ಕರ್ನಾಟಕ(Karnataka) ರಾಜ್ಯದಲ್ಲಿ ಇಂದು (ಜ.15) ಕೊರೋನಾ (Coronavirus) ಸ್ಫೋಟವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯಿಲ್ಲದೇ ಅನಗತ್ಯವಾಗಿ ಆಸ್ಪತ್ರೆಗಳಿಗೆ ತೆರಳಬೇಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. 

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 32,793 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 31,86,040 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,77,743 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 

Coronavirus ವಿದೇಶದಿಂದ ಬೆಂಗಳೂರಿಗೆ ಬಂದ 15 ಮಂದಿಗೆ ಕೊರೋನಾ, ಆಸ್ಪತ್ರೆಗೆ ಶಿಫ್ಟ್

ರಾಜ್ಯದಲ್ಲಿ ಇಂದು(ಶನಿವಾರ) ಕೊರೊನಾ ಸೋಂಕಿನಿಂದ 7 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಈವರೆಗೆ ಕೊರೋನಾದಿಂದ 38,418 ಜನ ಸಾವನ್ನಪ್ಪಿದ್ದಾರೆ.

ಸದ್ಯ ರಾಜ್ಯದಲ್ಲಿ 1,69,850 ಕೊರೋನಾ ಸಕ್ರಿಯ ಕೇಸ್‌ಗಳಿದ್ದು, ಕೊರೋನಾ ವೈರಸ್ ಪಾಸಿಟಿವಿಟಿ ದರ ಶೇ.15ಕ್ಕೆ ಏರಿಕೆಯಾಗಿದೆ ಎಂದು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಶನಿವಾರ ಒಂದೇ ದಿನ 22,284 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 13,95,736 ಕ್ಕೆ ಏರಿಕೆಯಾಗಿದೆ. 13,95,736 ಸೋಂಕಿತರ ಪೈಕಿ 12,50,175 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೋನಾದಿಂದ ಈವರೆಗೆ 16,448 ಜನ ಮೃತಪಟ್ಟಿದ್ದಾರೆ. ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ 1,29,112 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೊರೋನಾ ಕೇಸ್ 
ಬಾಗಲಕೋಟೆ 106, ಬಳ್ಳಾರಿ 410, ಬೆಳಗಾವಿ 393, ಬೆಂಗಳೂರು ಗ್ರಾಮಾಂತರ 503, ಬೆಂಗಳೂರು ನಗರ 22,284, ಬೀದರ್ 171, ಚಾಮರಾಜನಗರ 93, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 196, ಚಿತ್ರದುರ್ಗ 204, ದಕ್ಷಿಣ ಕನ್ನಡ 792, ದಾವಣಗೆರೆ 153, ಧಾರವಾಡ 648, ಗದಗ 134, ಹಾಸನ 968, ಹಾವೇರಿ 17, ಕಲಬುರಗಿ 384, ಕೊಡಗು 150, ಕೋಲಾರ 541, ಕೊಪ್ಪಳ 93, ಮಂಡ್ಯ 718, ಮೈಸೂರು 729, ರಾಯಚೂರು 109, ರಾಮನಗರ 122, ಶಿವಮೊಗ್ಗ 305, ತುಮಕೂರು 1,326, ಉಡುಪಿ 607, ಉತ್ತರ ಕನ್ನಡ 237, ವಿಜಯಪುರ 76, ಯಾದಗಿರಿ ಜಿಲ್ಲೆಯಲ್ಲಿ 13 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ವಿದೇಶದಿಂದ ಬಂದ 15 ಜನರಿಗೆ ಸೋಂಕು
ಬೇರೆ-ಬೇರೆ ದೇಶದಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ 15 ಜನರಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ. ಹೈರಿಸ್ಕ್ ದೇಶಗಳಿಂದ ಆಗಮಿಸಿದ ಪ್ರಯಾಣಿಕರು. ಯುಎಸ್, ಜರ್ಮನಿ, ಟರ್ಕಿ, ಕೆನಡಾ, ಫ್ರಾನ್ಸ್, ಬ್ರೆಜಿಲ್ ಹಾಗೂ ಸ್ವೀಡಕ್‌ನಿಂದ ಬಂದವರಲ್ಲಿ ಕೊರೋನಾ ಪತ್ತೆಯಾಗಿದೆ.

ವಿಮಾನ ನಿಲ್ದಾಣದಲ್ಲಿ RTPCR ಚೆಕ್ ಮಾಡಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿಯರನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Latest Videos
Follow Us:
Download App:
  • android
  • ios