ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆ : 10 ಲಕ್ಷ ಅರಿಶಿಣ ಗಣಪತಿ ಅಭಿಯಾನ
- ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆಯಾದ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ಅಭಿಯಾನ
- ಅರಿಶಿನ ಗಣಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್
ಬೆಂಗಳೂರು (ಆ.26) : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಛೇರಿಯಲ್ಲಿ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಆನಂದ್ ಸಿಂಗ್ ಇಲಾಖೆ ಸಂಬಂಧಿಸಿದ ಮಾಹಿತಿ ಪಡೆದು ಅಧಿಕಾರಿಗಳಿಗೆ ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು
ಬಿಎಸ್ ವೈ ಸರ್ಕಾರದಲ್ಲಿ ಪರಿಸರ ಇಲಾಖೆ ವಹಿಸಿದ ಸಚಿವರಿಗೆ ಅವರು ಪ್ರಾರಂಭ ಮಾಡಿದ ಕೆಲಸ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾಹಿತಿ ಪಡೆದ ಸಚಿವರು ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಮಾಲಿನ್ಯ ಮಂಡಳಿಗೆ ವಿಶೇಷ ಅಸ್ತ್ರ ಇಲ್ಲ ಹೇಗೆ ಪೋಲಿಸ್ ಠಾಣೆಗಳಲ್ಲಿ ಎಫ್ ಐ ಆರ್ ಆಗುತ್ತದೆ ಅದೇ ರೀತಿ ಮಾಲಿನ್ಯ ಮಾಡಿದವರಿಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.
10 ಲಕ್ಷ ಅರಿಶಿನ ಗಣಪತಿಗೆ ಮೆಚ್ಚುಗೆ
ಈ ಬಾರಿ ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆಯಾದ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಹಿಂದೂ ಧರ್ಮದಲ್ಲಿ ಭಾವನಾತ್ಮಕವಾಗಿ ಹತ್ತಿರ ಹಬ್ಬ ಅದರಲ್ಲಿ ಅರಿಶಿನ ಶ್ರೇಷ್ಠವಾದದ್ದು ಹಾಗೂ ಅರಿಶಿನ ಮಾಲಿನ್ಯವನ್ನು ಮಾಡುವುದಿಲ್ಲ ಹೆಚ್ಚಿನ ಜನ ಅರಿಶಿನ ಗಣಪತಿ ಮಾಡಲು ಬೇಕಾದ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗಣೇಶ ಹಬ್ಬಕ್ಕೂ ಕೊರೋನಾ ಸ್ಟ್ರಿಕ್ಟ್ ರೂಲ್ಸ್ ?
ಕುಡಿವ ನೀರಿಗೆ ವಿಷ ಹಾಕುವವನಿಗೆ ಮರ್ಡರ್ ಕೇಸ್ ಹಾಕಿ
ಕುಡಿವ ನೀರಿಗೆ ವಿಷ ಹಾಕುವವನಿಗೆ ಮರ್ಡರ್ ಕೇಸ್ ಹಾಕಬೇಕು ಎಷ್ಟು ಜನ, ಪ್ರಾಣಿ ಜಲಚರಗಳ ಸಾವು ಆಗುತ್ತದೆ ಮಾಲಿನ್ಯ ಇಲಾಖೆಯ ಅಧಿಕಾರಿಗಳು ಬಂದ್ರೆ ಹಣಕ್ಕಾಗಿ ಬರುತ್ತಾರೆ ಎಂಬ ಜನರ ಭಾವನೆ ತೆಗೆದುಹಾಕಬೇಕು ಕೇಸ್ ಹಾಕಿಲು ಬೇಕಾದ ವಿಶೇಷವಾದ ಕಾನೂನು ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಲು ಸಿದ್ದ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಬ್ರಿಜೇಶ್ ಕುಮಾರ್ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸಲು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಜಾವೆದ್ ಅಖ್ತರ್ ಹಾಗೂ ಹಿರಿಯ ಪರಿಸರ ಅಧಿಕಾರಿಗಳು, ಪರಿಸರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.