ಸಂಸದ ಪ್ರಜ್ವಲ್ ರೇವಣ್ಣನ ಭಾವಚಿತ್ರವಿರುವ ಪೋಸ್ಟರ್ ಹಿಡಿದು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪೆನ್ ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಈ ಆರೋಪಿಯನ್ನು ಹುಡುಕಿ ಕೊಟ್ಟ ಸಾರ್ವ ಜನಿಕರಿಗೆ ಜನತಾ ಪಕ್ಷದಿಂದ 1 ಲಕ್ಷ ಬಹು ಮಾನ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಘೋಷಣೆ ಕೂಗಿದ ಜನತಾ ಪಕ್ಷದ ಕಾರ್ಯಕರ್ತರು
ಬೆಂಗಳೂರು(ಮೇ.12): ಲೈಂಗಿಕ ಹಗರಣ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನಾಕಾರರು ಶಿವಾನಂದ ವೃತ್ತ ಸೇರಿದಂತೆ ನಗರದ ವಿವಿಧೆಡೆ ಈ ಪೋಸ್ಟರ್ ಅಂಟಿಸಿದರು. ಸಂಸದ ಪ್ರಜ್ವಲ್ ರೇವಣ್ಣನ ಭಾವಚಿತ್ರವಿರುವ ಪೋಸ್ಟರ್ ಹಿಡಿದು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪೆನ್ ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಈ ಆರೋಪಿಯನ್ನು ಹುಡುಕಿ ಕೊಟ್ಟ ಸಾರ್ವ ಜನಿಕರಿಗೆ ಜನತಾ ಪಕ್ಷದಿಂದ 1 ಲಕ್ಷ ಬಹು ಮಾನ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಘೋಷಣೆ ಕೂಗಿದರು.
16 ದಿನದಿಂದ ಪ್ರಜ್ವಲ್ ನಾಪತ್ತೆ, ಇಂದು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದ ಸಂಸದ, ಆದ್ರೆ ಬರೋದು ಅನುಮಾನ!
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾ ಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್, ಈ ಲೈಂಗಿಕ ದೌರ್ಜನ್ಯ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಆರೋಪಿಯನ್ನು ಹುಡುಕಿ ಕೊಟ್ಟವರಿಗೆ ಪಕ್ಷದ ವತಿಯಿಂದ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಹೈಗೌಂಡ್ ಠಾಣೆ ಪೊಲೀಸರು, ನಾಗೇಶ್ ಸೇರಿದಂತೆ ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೊರೆದೂಯ್ದರು. ಶಿವಾನಂದ ವೃತ್ತದಲ್ಲಿ ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.
