1.78 ಲಕ್ಷ ಮಹಿಳೆಯರ ‘ಗೃಹಲಕ್ಷ್ಮಿ’ ಹಣಕ್ಕೆ ತಡೆ; ಆದಾಯ ತೆರಿಗೆ ಪಾವತಿದಾರರಿಗೆ ಇನ್ಮುಂದೆ ಹಣ ಸಿಗೊಲ್ಲ!

ಆದಾಯ ತೆರಿಗೆ ಪಾವತಿಸುತ್ತಿದ್ದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳೂ ಎರಡು ಸಾವಿರ ರು. ಪಡೆಯುತ್ತಿದ್ದಾರೆ ಎಂದು 1.78 ಲಕ್ಷ ಮಹಿಳೆಯರ ಹಣ ಪಾವತಿಗೆ ತಡೆ ಒಡ್ಡಿರುವ ಸರ್ಕಾರ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿದೆ.

1.78 lakh women ghrilakshmi funds blocked those who pay income tax rav

ಬೆಂಗಳೂರು (ಸೆ.16): ಆದಾಯ ತೆರಿಗೆ ಪಾವತಿಸುತ್ತಿದ್ದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳೂ ಎರಡು ಸಾವಿರ ರು. ಪಡೆಯುತ್ತಿದ್ದಾರೆ ಎಂದು 1.78 ಲಕ್ಷ ಮಹಿಳೆಯರ ಹಣ ಪಾವತಿಗೆ ತಡೆ ಒಡ್ಡಿರುವ ಸರ್ಕಾರ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿದೆ.

ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಲ್ಲ. ಆದರೂ ಆದಾಯ ತೆರಿಗೆ ಪಾವತಿಸುವ ಸುಮಾರು 1.78 ಲಕ್ಷ ಮಹಿಳೆಯರು ಯೋಜನೆಯ ಫಲಾನುಭವಿಯಾಗಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಇಂತಹ ಮಹಿಳೆಯರಿಗೆ ಹಣ ಪಾವತಿಸುವುದನ್ನು ಸರ್ಕಾರ ನಿಲ್ಲಿಸಿದ್ದು, ನೈಜತೆ ಪರಿಶೀಲಿಸಲು ಮುಂದಾಗಿದೆ.

 

ಬಡವರ ಪಾಲಿಗೆ ನಂದಾದೀಪವಾದ ಗೃಹಲಕ್ಷ್ಮೀ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶೇಷ ಲೇಖನ

ಈ ಸಂಬಂಧ ಇ-ಗವರ್ನೆನ್ಸ್‌ ಇಲಾಖೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪಟ್ಟಿಯಲ್ಲಿರುವ 1.78 ಲಕ್ಷ ಮಹಿಳೆಯರು ನಿಜವಾಗಿಯೂ ಆದಾಯ ತೆರಿಗೆ ಪಾವತಿದಾರರೇ ಎಂದು ಪರಿಶೀಲಿಸಲು ಇ-ಗವರ್ನೆನ್ಸ್‌ ಇಲಾಖೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡತ ರವಾನಿಸಿದೆ.

 

ಗೃಹಲಕ್ಷ್ಮೀ ದುಡ್ಡಿನಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವೃದ್ಧೆ!

ಆದಾಯ ತೆರಿಗೆ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿರುವ ಇ-ಗವರ್ನೆನ್ಸ್‌ ಇಲಾಖೆಯು, 1.78 ಲಕ್ಷ ಮಹಿಳೆಯರಲ್ಲಿ ಅರ್ಹರೂ ಇದ್ದಾರೆಯೇ? ತಪ್ಪು ಮಾಹಿತಿಯಿಂದಾಗಿ ಈ ರೀತಿ ಆಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಈ ಪಟ್ಟಿಯಲ್ಲಿ ಅರ್ಹರಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಅಂತಹವರಿಗೆ ಹಣ ಪಾವತಿಸಲಾಗುವುದು. ಅನರ್ಹರನ್ನು ಕೈಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios