ಹೋರಾಟ ನಿರತ ಪಿಯು ಉಪನ್ಯಾಸಕರಿಗೆ ಅಭಯ ನೀಡಿದ ಸಿಎಂ ಯಡಿಯೂರಪ್ಪ
ನೇಮಕಾತಿ ಆದೇಶ ಪತ್ರ ನೀಡಬೇಕೆಂದು ಆಯ್ಕೆಯಾದ ಪಿಯು ಉಪನ್ಯಾಸಕರು ನಿರಂತರ ಹೋರಾಟ ಕೈಗೊಂಡಿದ್ದು, ಅವರಿಗೆ ಸಿಎಂ ಭರವಸೆ ನೀಡಿದ್ದಾರೆ.
ಬೆಂಗಳೂರು, ಅ.13): ನೇಮಕಾತಿ ಆದೇಶ ಪತ್ರಕ್ಕಾಗಿ ಹೋರಾಟ ಕೈಗೊಂಡಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸಿಎಂ ಅಭಯ ನೀಡಿದ್ದಾರೆ.
ಪದವಿ ಪೂರ್ವ ಕಾಲೇಜು ಬೋಧಕರ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್ ನಡೆದು ಸ್ಥಳ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
'ಕೈ' ಸೇರಲು ಶಾಸಕನಿಗೆ ಸಿಕ್ತು ಗ್ರೀನ್ ಸಿಗ್ನಲ್, RCBಗೆ ಬರ್ತಾರಾ ಗೇಲ್? ಅ.13ರ ಟಾಪ್ 10 ಸುದ್ದಿ!
ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಇನ್ನು ಕಾಲೇಜುಗಳು ಆರಂಭವಾಗದೆ ಇರುವುದರಿಂದ ಬೋಧಕರಿಗೆ ವರದಿ ಮಾಡಿಕೊಳ್ಳಲು ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬೋಧಕರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದ ಒಂದು ವರ್ಷದೊಳಗೆ ನೇಮಕಾತಿ ಅವಧಿಯನ್ನು ನೇಮಕಾತಿ ಆಗುವವರೆಗೆ ಮುಂದುವರೆಸಲಾಗುವುದು. ಆದ್ದರಿಂದ ಬೋಧಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಹ ಫೇಸ್ಬುಕ್ ಮೂಲಕ ಭರವಸೆ ನೀಡಿದ್ದು, ಉಪನ್ಯಾಸಕರ ಕೆಲಸಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆಯನ್ನೂ ಸಹ ನೀಡಿದ್ದಾರೆ. ಆದರೆ ಸಚಿವರ ಭರವಸೆಗೂ ಬಗ್ಗದ ಉಪನ್ಯಾಸಕರು, ಆರ್ಡರ್ ಕಾಪಿ ಕೊಡುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಪಿಯು ಬೋರ್ಡ್ ಎದುರು ಪಿಯು ಉಪನ್ಯಾಸಕರ ಪ್ರತಿಭಟನೆ ಮುಂದುವರೆದಿದೆ.