VIMS Bellary Recruitment 2022: ವೈದ್ಯಕೀಯ ವಿಜ್ಞಾನ ಸಂಸ್ಥೆಯ 130 ಹುದ್ದೆಗಳಿಗೆ ಬಳ್ಳಾರಿಯಲ್ಲಿ ನೇರ ಸಂದರ್ಶನ

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 130 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ಜನವರಿ 10,2022ರಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. 

Vijayanagar Institute of Medical Sciences Bellary Recruitment 2022  Walk-in Interview for Nursing Officer and other posts gow

ಬೆಂಗಳೂರು(ಜ.3): ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (Vijayanagar Institute of Medical Sciences) ಗಳಲ್ಲಿ ಅಗತ್ಯ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಒಟ್ಟು 130 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜನವರಿ 10,2022ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವೆಬ್‌ಸೈಟ್‌ : www.vimsbellary.org.in ಭೇಟಿ ನೀಡಲು ಕೋರಲಾಗಿದೆ.

130 ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಶುಶ್ರೂಷಾಧಿಕಾರಿ- 110
ರೇಡಿಯೋಗ್ರಾಫರ್- 1
ಫಾರ್ಮಸಿ ಅಧಿಕಾರಿ- 2
ಕ್ಷ-ಕಿರಣ ತಂತ್ರಜ್ಞರು- 3
ಫಿಜಿಯೋಥೆರಪಿಸ್ಟ್‌ -1
ಡಯಟೀಷಿಯನ್ -1
ಲ್ಯಾಬ್ ಟೆಕ್ನೀಷಿಯನ್ -3
ಡ್ರೈವರ್ -6
ಡಯಾಲಿಸಿಸ್ ಟೆಕ್ನೀಷಿಯನ್ -1
ಸಿಟಿ ಟೆಕ್ನಿಷಿಯನ್-2

SIMS Shivamogga Recruitment 2022: ವಿವಿಧ ಹುದ್ದೆಗಳ ಭರ್ತಿಗೆ ಕರೆ ನೀಡಿದ ವೈದ್ಯಕೀಯ ವಿಜ್ಞಾನ ಸಂಸ್ಥೆ

ಶೈಕ್ಷಣಿಕ ವಿದ್ಯಾರ್ಹತೆ:  ಮೇಲಿನ ಎಲ್ಲ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಂಗೀಕೃತ ವಿವಿ ಹಾಗೂ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪದವಿ / ತಾಂತ್ರಿಕ ಕೋರ್ಸ್‌ಗಳನ್ನು ಹೊಂದಿರತಕ್ಕದ್ದು. ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಇರುತ್ತದೆ. ಹುದ್ದೆಗೆ ತಕ್ಕನಾದ ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ.
ಶುಶ್ರೂಷಾಧಿಕಾರಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಿಎನ್‌ಎಂ ಶುಶ್ರೂಷ ತರಬೇತಿ (ಕನಿಷ್ಠ 3 ವರ್ಷ) ಪಡೆದಿರಬೇಕು. ಬಿಎಸ್‌ಸಿ ನರ್ಸಿಂಗ್ ಹೊಂದಿದ್ದಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.
ರೇಡಿಯೋಗ್ರಾಫರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮ ಪಡೆದಿರಬೇಕು.
ಫಾರ್ಮಸಿ ಅಧಿಕಾರಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಡಿ ಫಾರ್ಮಾ ಪದವಿ ಹೊಂದಿರತಕ್ಕದ್ದು. ಬಿ.ಫಾರ್ಮ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಕ್ಷ-ಕಿರಣ ತಂತ್ರಜ್ಞರು: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮ ಮಾಡಿರಬೇಕು.
ಫಿಜಿಯೋಥೆರಪಿಸ್ಟ್‌: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಡಿಪ್ಲೊಮ ಇನ್ ಫಿಜಿಯೋಥೆರಪಿಸ್ಟ್‌ ಕೋರ್ಸ್‌ ಮಾಡಿರಬೇಕು.
ಡಯಟೀಷಿಯನ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೋಮ್‌ ಸೈನ್ಸ್‌ನಲ್ಲಿ ಪದವಿ ಹಾಗೂ ಬಿಎಸ್‌ಸಿ ನ್ಯೂಟ್ರಿಷಿಯನ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಲ್ಯಾಬ್ ಟೆಕ್ನೀಷಿಯನ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲ್ಯಾಬ್ ಟೆಕ್ನಿಷಿಯನ್ ತಾಂತ್ರಿಕ ಡಿಪ್ಲೊಮ ಪಡೆದಿರಬೇಕು.
ಡ್ರೈವರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಹೆವಿ ಮೋಟರ್ ವೆಹಿಕಲ್ ಚಾಲನೆ ಪರವಾನಿಗೆ ಮತ್ತು 03 ವರ್ಷದ ಅನುಭವ.
ಡಯಾಲಿಸಿಸ್ ಟೆಕ್ನೀಷಿಯನ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಡಿಪ್ಲೊಮ ಇನ್‌ ಡಯಾಲಿಸಿಸ್ ಟೆಕ್ನೀಷಿಯನ್ ಕೋರ್ಸ್‌ ಮಾಡಿರಬೇಕು.
ಸಿಟಿ ಟೆಕ್ನಿಷಿಯನ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಡಿಪ್ಲೊಮ ಇನ್ ಸಿಟಿ ಟೆಕ್ನೀಷಿಯನ್ ಕೋರ್ಸ್‌ ಮಾಡಿರಬೇಕು.

KAPL Recruitment 2022: ಮಾಸಿಕ 87,000 ರೂ ವೇತನ , ಆಯುಷ್ ವಿಭಾಗದಲ್ಲಿ ಮ್ಯಾನೇಜರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ವಯೋಮಿತಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ 130 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ. ತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಆಗಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿದ ಶೈಕ್ಷಣಿಕ ದಾಖಲಾತಿಗಳ ಒಂದು ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಆಯ್ಕೆಯಾದವರಿಗೆ ಹುದ್ದೆಗೆ ಅನುಸಾರ ವೇತನ ನಿಗದಿಯಾಗಿದೆ.

ಸಂದರ್ಶನ ನಡೆಯುವ ಸ್ಥಳ: 130 ಹುದ್ದೆಗಳಿಗೆ ಜನವರಿ 10,2022ರಂದು ಬೆಳಿಗ್ಗೆ 10:30ಕ್ಕೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಬಳ್ಳಾರಿ ಇಲ್ಲಿ ನಡೆಯುವ  ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Latest Videos
Follow Us:
Download App:
  • android
  • ios