Asianet Suvarna News Asianet Suvarna News

ಸಿಎಂ ಬೊಮ್ಮಾಯಿಯವರನ್ನ ಯೋಗಿ ಎಂದು ಬಣ್ಣಿಸಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು,  ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು. 

UP CM Yogi Adityanath inaugurates Naturopathy & Yogic Sciences campus in Bengaluru rbj
Author
First Published Sep 1, 2022, 3:52 PM IST

ಬೆಂಗಳೂರು, (ಸೆಪ್ಟೆಂಬರ್.01): ಬೆಂಗಳೂರಿನಲ್ಲಿ ಶ್ರೀ ಧರ್ಮಸ್ಥಳದಿಂದ ನಿರ್ಮಾಣವಾಗಿರುವ  ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್‌ನ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹಾದೇವಪುರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕೇಂದ್ರ ಇವರು ನೂತನವಾಗಿ ನಿರ್ಮಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ "ಕ್ಷೇಮವನ"ವನ್ನು ಇಂದು(ಗುರುವಾರ) ಯೋಗಿ ಆಡಿತ್ಯನಾಥ್ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಯೋಗಿ, ಕರ್ನಾಟಕದಲ್ಲಿ  ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಇದರೊಂದಿಗೆ ಆಧ್ಯಾತ್ಮಿಕ ಭಾವನದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಹೊಂದಾಗಿಸುತ್ತದೆ ಎಂದು ಹೇಳಿದರು.

ಮಂಗಳೂರಿನಲ್ಲಿ 2 ಗಂಟೆ ಇರಲಿದ್ದಾರೆ ಮೋದಿ: ಇಲ್ಲಿದೆ ಪಿನ್‌ ಟು ಪಿನ್ ಮಾಹಿತಿ

ವಿರೇಂದ್ರ ಹೆಗಡೆಯವರು ಹಿಂದಿನಿಂದಲೂ ಯೋಗ ಹಾಗೂ ನ್ಯಾಚುರೋಪಥಿಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಈ ಕೇಂದ್ರ ಸ್ಥಾಪನೆಯಾಗಿರುವುದು ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶಕ್ಕೆ ಉಪಯೋಗವಾಗಲಿದೆ. ಕರ್ನಾಟಕದ ಮಂತ್ರಿಮಂತ್ರಿ ಒಬ್ಬ ಯೋಗಿಯ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭಾರತದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜ ಎಲ್ಲರೂ ಪ್ರಯತ್ನಿಸಬೇಕು. ಇದಕ್ಕಾಗಿ ನಮ್ಮ ಕಾರ್ಯದಲ್ಲಿ ವೃತ್ತಿಪರತೆಯನ್ನು ಮೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಗಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯ ಆಧಾರವಾಯಿತು ಎಂದು ಹೇಳಿದರು.

ಈ ಹಿಂದೆ ಯೋಗದ ಕುರಿತು ವಿವಿಧ ಮಾತುಗಳಿದ್ದವು. ಆದ್ರೆ, ಇಂದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ನೂರಾರು ದೇಶಗಳು ಯೋಗ ಪರಂಪರೆಯೊಂದಿಗೆ ಕೈಜೋಡಿಸಿದ್ದಾರೆ. ಈ ದೇಹದ ಮೂಲಕವೇ ನಮ್ಮ ಎಲ್ಲಾ ಕಾರ್ಯಕ್ರಮವನ್ನು  ನಡೆಸಬೇಕು ಎನ್ನುವುದು ಯೋಗ ತಿಳಿಸಿದೆ. ಕೊರೋನಾ ಸಂದರ್ಭದಲ್ಲೂ ಯೋಗದ ಕುರಿತು ಜನರಿಗೆ ಅರಿವಾಗಿದೆ. ದೇಹದ ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದ, ಯೋಗ ಮುಖ್ಯವಾಗಿದೆ ಎಂದು ತಿಳಿಸಿದರು.

ಬೊಮ್ಮಾಯಿಯನ್ನು ಹಾಡಿಹೊಗಳಿದ ಯೋಗಿ
ನಾನು ಒಬ್ಬ ಯೋಗಿ, ನಿರ್ಮಲಾನಂದ ಸ್ವಾಮೀಜಿ ಸಹ ಯೋಗಿಯಾಗಿದ್ದಾರೆ. ನಮ್ಮ ಜತೆಗೆ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರು ಸಹ ಒಬ್ಬ ಯೋಗಿಯಂತೆಯೇ ರಾಜ್ಯವನ್ನ ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಹಾಡಿಹೊಗಳಿದರು.

ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಬೊಮ್ಮಾಯಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಕರ್ನಾಟಕ ರೂಪುಗೊಳ್ಳಲಿದೆ.ಈ ಕಾರ್ಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು..

Follow Us:
Download App:
  • android
  • ios