ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ಸಿದ್ದತೆಗಳು ನೆರವೇರಿದೆ. ಇನ್ನು ಮೋದಿ ಮಂಗಳೂರಿನಲ್ಲಿ ಎಷ್ಟು ಗಂಟೆ ಇರಲಿದ್ದಾರೆ. ಏನೆಲ್ಲಾ ಕಾರ್ಯಕ್ರಮಗಳು ಇರಲಿವೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಸೆಪ್ಟೆಂಬರ್.01):
ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆ.2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿಅ ಅವರು ಸುಮಾರು ಎರಡು ಗಂಟೆಗಳ ಕಾಲ ಮಂಗಳೂರಿನಲ್ಲಿ ಇರಲಿದ್ದಾರೆ. ಇದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಮೇಳೈಸಲಿದೆ ಮೋದಿ ಹಬ್ಬ. ವಿಧಾನಸಭಾ ಚುನಾವಣೆಗೆ ಮಂಗಳೂರಿನಿಂದಲೇ ಮೋದಿ ರಣ ಕಹಳೆ ಮೊಳಗಿಸಲಿದ್ದು, ಬರೋಬ್ಬರಿ 3800 ಕೋಟಿ ರೂ. ಯೋಜನೆಗೆ‌ ಪ್ರಧಾನಿ ‌ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ‌ಮತ್ತು ರಾಜ್ಯ ಸರ್ಕಾರದ ‌ಫಲಾನುಭವಿಗಳ ಸಮಾವೇಶದಲ್ಲಿ ಮೋದಿ ಮಾತನಾಡನಾಡಲಿದ್ದಾರೆ. ನವಮಂಗಳೂರು ಬಂದರು ಹಾಗೂ MRPLನ ಸಾವಿರ ಕೋಟಿ ಯೋಜನೆಗಳಿಗೆ‌ ಮೋದಿ ಚಾಲನೆ ನೀಡಲಿದ್ದಾರೆ. ಜರ್ಮನ್ ತಂತ್ರಜ್ಞಾನ (German Technology) ‌ಬಳಸಿ 30 ಎಕರೆ ಮೈದಾನದಲ್ಲಿ ‌ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. 1.50 ಲಕ್ಷಕ್ಕೂ ಮಿಕ್ಕಿ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಭೇಟಿಗೆ ಅವಕಾಶ ಕೋರಿದ ಮುಸ್ಲಿಂ ವೇದಿಕೆ

ಮೋದಿ ಕೊಚ್ಚಿಯಿಂದ ಮಂಗಳೂರಿಗೆ ಆಗಮಿಸಿ ಗೋಲ್ಡ್ ಪಿಂಚ್ ಮೈದಾನ ತಲುಪುವವರೆಗಿನ ಮಿನಿಟ್ ಟು ಮಿನಿಟ್ ಮಾಹಿತಿ ಈ ಕೆಳಗಿನಂತಿದೆ.ಇನ್ನು ಪ್ರಧಾನಿ ಮೋದಿ ಮಂಗಳೂರಿನಲ್ಲಿ ಸಾವಿರಾರು ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಆ ಯೋಜನೆಗಳು ಮಾಹಿತಿ ಇಲ್ಲಿದೆ.

ಮ.1.30- ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.‌ 

ಮ.1.35- ಮಂಗಳೂರು ಏರ್ಪೋರ್ಟ್ ನಿಂದ ಹೆಲಿಕಾಪ್ಟರ್ ‌ಮೂಲಕ ನಿರ್ಗಮನ

ಮ.1.50- ಎನ್.ಎಂ.ಪಿ.ಎ ಹೆಲಿಪ್ಯಾಡ್(ಬರ್ತ್ ನಂ.4)ನಲ್ಲಿ ಲ್ಯಾಂಡಿಂಗ್

ಮ.1.54- ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನಿರ್ಗಮನ

ಮ.2.00- ಸಮಾವೇಶ ನಡೆಯುವ ಗೋಲ್ಡ್ ಪಿಂಚ್ ಮೈದಾನ ತಲುಪಲಿರುವ ಮೋದಿ

ಮ.3.35- ವೇದಿಕೆಯಿಂದ ನಿರ್ಗಮಿಸಿ ಹೆಲಿಪ್ಯಾಡ್ ತಲುಪಿ ಮಂಗಳೂರು ಏರ್ ಪೋರ್ಟ್ ‌ಮೂಲಕ ವಾಪಾಸ್

ಸುಮಾರು‌ 1.30 ಗಂಟೆಗಳ ಕಾಲ ಸಮಾವೇಶದ ವೇದಿಕೆಯಲ್ಲಿ ‌ಮೋದಿ ಉಪಸ್ಥಿತಿ


ಮೋದಿಯಿಂದ ಚಾಲನೆ ಸಿಗಲಿರೋ ಯೋಜನೆಗಳ ಕಂಪ್ಲೀಟ್ ಡಿಟೈಲ್ಸ್

* 281 ಕೋ. ರೂ. ವೆಚ್ಚದಲ್ಲಿ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ

* ಹಡಗಿನ ಮೂಲಕ ಬರುವ ಕಂಟೈನರ್ ಸರಕು ನಿರ್ವಹಣೆ ಪ್ರಮುಖ ಯೋಜನೆ

* 100 ಕೋಟಿ ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಗಾರ ನಿರ್ಮಾಣ

* ಎಸ್ ಎಸ್ ಪಿಪಿ ಪೆಟ್ರೋ ಪ್ರಾಡೆಕ್ಟ್ಸ್ ಕಂಪೆನಿಯ ಮಹತ್ವದ ಯೋಜನೆ

* 40 ಸಾವಿರ ಟನ್ ಬಿಟುಮಿನ್(ಡಾಮರ್) ಸಂಗ್ರಹ ಸಾಮರ್ಥ್ಯ

* ಪಿಎಂ ಗತಿಶಕ್ತಿ ಯೋಜನೆ ಮೂಲಕ ರಾಜ್ಯ ಹೆದ್ದಾರಿಯ ಅಭಿವೃದ್ಧಿ

* 100 ಕೋಟಿ ವೆಚ್ಚದಲ್ಲಿ ನವಮಂಗಳೂರು ಬಂದರಿನಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ

* 677 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ಡಿಸಲೈನೇಶನ್ ಪ್ಲಾಂಟ್ ಗೆ ಚಾಲನೆ

* ಮಂಗಳೂರು ತೈಲ ಶುದ್ದೀಕರಣ ಘಟಕ(ಎಂಆರ್ ಪಿಎಲ್)ಕ್ಕೆ 30 ಎಂಎಲ್ ಡಿ ನೀರು ಒದಗಿಸುವ ಯೋಜನೆ

* ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಬಳಸಿಕೊಳ್ಳುವ ಮಹತ್ವದ ಯೋಜನೆ

* 1829 ಕೋಟಿ ಮೊತ್ತದ ಬಿಎಸ್6 ಇಂಧನ ಸ್ಥಾವರ

*ಭಾರತ ಬಿಎಸ್6 ಇಂಧನಕ್ಕೆ ಅಪ್ ಗ್ರೇಡ್ ಆಗಿದ್ದು, ಹೀಗಾಗಿ ಎಂಆರ್ಪಿಎಲ್ ನಲ್ಲಿ ಬಿಎಸ್ 6 ಗ್ರೇಡ್ ಇಂಧನ ಉತ್ಪಾದನ ಘಟಕ

* 500 ಕೋಟಿ ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕ

* ಸುಮಾರು 200 ಕೋಟಿ ವೆಚ್ಚದ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ