ವೀಕೆಂಡ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಹೆಚ್ಚುವರಿ ಬಸ್ ಬಿಡುವಂತೆ ಸಾರಿಗೆ ಸಚಿವರು ಸೂಚನೆ
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯದ ಪ್ರವಾಸಿ ತಾಣಗಳತ್ತ ಜನರು ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಪ್ರಯಾಣಿಸುತ್ತಿದ್ದು ಸಾಕಷ್ಟು ಬಸ್ ಸೌಲಭ್ಯವಿಲ್ಲ ಎಂದು ಸಾರ್ವಜನಿಕರು ದೂರಿರುವ ಹಿನ್ನೆಲೆ ವೀಕೆಂಡ್‌ನಲ್ಲಿ ಹೆಚ್ಚು ಬಸ್‌ಗಳು ಬಿಡುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸೂಚನೆ ನೀಡಿದರು.
ಬೆಂಗಳೂರು (ಜೂ.23) ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯದ ಪ್ರವಾಸಿ ತಾಣಗಳತ್ತ ಜನರು ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಪ್ರಯಾಣಿಸುತ್ತಿದ್ದು ಸಾಕಷ್ಟು ಬಸ್ ಸೌಲಭ್ಯವಿಲ್ಲ ಎಂದು ಸಾರ್ವಜನಿಕರು ದೂರಿರುವ ಹಿನ್ನೆಲೆ ವೀಕೆಂಡ್‌ನಲ್ಲಿ ಹೆಚ್ಚು ಬಸ್‌ಗಳು ಬಿಡುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸೂಚನೆ ನೀಡಿದರು.
ವೀಕ್ ಎಂಡ್ ನಲ್ಲಿ ಪ್ರವಾಸಿ ಸ್ಥಳಗಳು ಜನರು ಹೆಚ್ಚು ತೆರಳುತ್ತಿರುವ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಧರ್ಮ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿರುವ ರೂಟ್ ನಲ್ಲಿ ಹೆಚ್ಚಿನ ಬಸ್ ಗಳನ್ನು ಹಾಕುವಂತೆ ಸಾರಿಗೆ ಸೂಚನೆ ನೀಡಿದರು.
ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ! ಒದಗಿಸಲು ಅರಣ್ಯ ಇಲಾಖೆ ನಿರ್ಧಾರ!
ಕಳೆದ ವಾರದಂತೆ ಯಾವುದೇ ಸಮಸ್ಯೆಗಳಾಗದಂತೆ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ. ಹೀಗಾಗಿ ವೀಕ್ ಎಂಡ್ ಗೆ ಹೆಚ್ಚಿನ ಬಸ್ ಗಳ ನಿಯೋಜನೆ ಮಾಡಲು ಮುಂದಾಗಿದೆ.
ಧರ್ಮ ಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮೈಸೂರು, ಮಹಾದೇಶ್ವರ ಸ್ವಾಮಿ ಬೆಟ್ಟ, ಚಿಕ್ಕಮಗಳೂರು ಸಿಂಗದೂರು, ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ ಹೆಚ್ಚುವರಿ ಬಸ್ ನಿಯೋಜನೆ ಕೆಎಸ್‌ಆರ್‌ಟಿಸಿ, ಎನ್ ಡಬ್ಲುಯು ಕೆಎಸ್ ಆರ್ ಟಿಸಿ, ಎನ್ ಇ ಕೆಎಸ್ ಆರ್ ಟಿಸಿ ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ
ಕಳೆದ ವೀಕ್ ಎಂಡ್ ನಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಪ್ರವಾಸಿತಾಣಗಳಿಗೆ ಹೊರಟ ಹಿನ್ನೆಲೆ ನೂಕು ನುಗ್ಗಲಿನಂತ ಗಲಾಟೆಗಳಿಂದ ಕಿರಿಕಿರಿಗೊಳಗಾಗಿದ್ದ ಪ್ರಯಾಣಿಕರು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೇಡಿಕೆ ಇರುವ ಕಡೆ ಹೆಚ್ಚಿನ ಬಸ್ ಗಳನ್ನು ನಿಯೋಜಿಸುವಂತೆ ಸಚಿವರಿಂದ ಸೂಚನೆ.
ಗೃಹ ಲಕ್ಷ್ಮಿ ಯೋಜನೆ ವಿಳಂಬ:
ಗೃಹಲಕ್ಷ್ಮಿ ಯೋಜನೆ ವಿಳಂಬ ಇದನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಚೀಫ್ ಮಿನಿಸ್ಟರ್ ಜೊತೆ ಮಾತಾಡಿ ಹೋಲ್ಡ್ ಮಾಡಿಸಿದ್ಸೇನೆ. ಗಲಾಟೆ ಕಡಿಮೆ ಮಾಡಲು ಮಾಡ್ತಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಣ ಮಂತ್ರಿಗಳು ಇರಲಿಲ್ಲ ಅವರ ಜೊತೆ ಒಂದು ಮೀಟಿಂಗ್ ಮಾಡ್ತೀವಿ ಬಳಿಕ ಸರಳವಾಗಿ ಯೋಜನೆ ಅನುಷ್ಠಾನ ಮಾಡ್ತೀವಿ. ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನ ಮಾಡುತ್ತೇವೆ. ನೋಂದಣಿ ಫ್ರೀಯಾಗಿ ಮಾಡಿಕೊಡಬೇಕು. ನಮಗೆ ಈಗಾಗಲೇ ದೂರುಗಳು ಬಂದಿವೆ ಅಪ್ಲಿಕೇಶನ್ ಹಾಕೋಕೆ 200 ರೂಪಾಯಿ ಪಡೆಯುತ್ತಿದ್ದಾರೆ ಅಂತ ದೂರು ಬಂದಿದೆ. ಯಾರಾದರೂ ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಸಚಿವರು.
ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ: ಮುಜರಾಯಿ ಇಲಾಖೆ ನಿರ್ಧಾರ
ಗೃಹಜ್ಯೋತಿ ನೋಂದಣಿ ಉಚಿತವಾಗಿ ಮಾಡಿಕೊಡಬೇಕು. ದುಡ್ಡು ಪಡೆದರೆ ಅಂತಹ ಏಜೆನ್ಸಿಗಳನ್ನ ಕ್ಯಾನ್ಸಲ್ ಮಾಡ್ತೀವಿ.ಈ ಸ್ಕೀಮ್ ಗಳಲ್ಲಿ ಯಾರು ಕೂಡ ಒಬ್ಬರಿಗೆ ಲಂಚ ಕೊಡಬಾರದು. ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ದೂರು ಕೊಡಬಹುದು. ನಾವು ಒಂದು ಹೆಲ್ಪ್ ಲೈನ್ ನಂಬರ್ ಕೊಡ್ತೀವಿ. ಅದಕ್ಕೆ ಕಾಲ್ ಮಾಡಿ ದೂರು ಕೊಡಲಿ. ಲಂಚ ಪಡೆಯುವವ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.