ಕೊಪ್ಪಳ: ಇದಪ್ಪ ಛಲ ಅಂದ್ರೆ, 10ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಳ್ಳಿ ಹುಡುಗ ರೇವಣ್ಣ ಗುರಿಕಾರ!
ರೇವಣ್ಣ ಗುರಿಕಾರ ಅವರದು ಕೃಷಿ ಕುಟುಂಬ. ತಂದೆ ಚಂದಪ್ಪ ಗುರಿಕಾರ, ತಾಯಿ ಯಲ್ಲಮ್ಮ ಗುರಿಕಾರ ಅವರ 8 ಜನ ಮಕ್ಕಳಲ್ಲಿ ರೇವಣ್ಣ 6ನೇಯವರು. ಕುಟುಂಬವು ತಮ್ಮ ಅಲ್ಪ ಪ್ರಮಾಣದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಡತನ ಬೇಗೆಯಲ್ಲಿ ಜೀವನ ಕಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಂದಲ್ಲ, ಎರಡಲ್ಲ 10ಕ್ಕೂ ಅಧಿಕ ಸರ್ಕಾರಿ ನೌಕರಿಗಳನ್ನು ಕಳೆದ ನಾಲೈದು ವರ್ಷದಲ್ಲಿ ಪಡೆದುಕೊಂಡಿದ್ದಾರೆ.
ಹನುಮಸಾಗರ(ಅ.24): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಕೇವಲ ಒಂದು ಜವಾನ ಹುದ್ದೆಗೆ ಉನ್ನತ ವ್ಯಾಸಂಗ ಮಾಡಿ ಸಾವಿರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸು ತ್ತಾರೆ. ಇಂತಹ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಯುವಕ ರೇವಣ್ಣ ಗುರಿಕಾರ 10ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದು, ಈಗ ಪಿಎಸ್‌ಐ ಸಿವಿಲ್ ಆಯ್ಕೆ ಪಟ್ಟಿಯ ಕಲ್ಯಾಣ ಕರ್ನಾಟಕದ ಮೀಸಲಿನಲ್ಲಿ 24ನೇ ರ್‍ಯಾಂಕ್ ಪಡೆದಿದ್ದಾರೆ.
ರೇವಣ್ಣ ಗುರಿಕಾರ ಅವರದು ಕೃಷಿ ಕುಟುಂಬ. ತಂದೆ ಚಂದಪ್ಪ ಗುರಿಕಾರ, ತಾಯಿ ಯಲ್ಲಮ್ಮ ಗುರಿಕಾರ ಅವರ 8 ಜನ ಮಕ್ಕಳಲ್ಲಿ ರೇವಣ್ಣ 6ನೇಯವರು. ಕುಟುಂಬವು ತಮ್ಮ ಅಲ್ಪ ಪ್ರಮಾಣದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಡತನ ಬೇಗೆಯಲ್ಲಿ ಜೀವನ ಕಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಂದಲ್ಲ, ಎರಡಲ್ಲ 10ಕ್ಕೂ ಅಧಿಕ ಸರ್ಕಾರಿ ನೌಕರಿಗಳನ್ನು ಕಳೆದ ನಾಲೈದು ವರ್ಷದಲ್ಲಿ ಪಡೆದುಕೊಂಡಿದ್ದಾರೆ.
ಕೊಪ್ಪಳ: ಕೂಲಿ ಕೆಲಸ ಮಾಡುವವರ ಮಗ ಈಗ ಪಿಎಸ್‌ಐ, ಬಡ ತಂದೆ-ತಾಯಿಯ ಕನಸು ನನಸು ಮಾಡಿದ ಪುತ್ರ!
ಶಿಕ್ಷಣ:
ರೇವಣ್ಣ ಒಂದರಿಂದ 5ನೇ ತರಗತಿಯವರೆಗೆ ಸ್ವಗ್ರಾಮ ಕಬ್ಬರಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಮುಂದೆ 6ನೇ ತರಗತಿಗೆ ಕಾಟಾಪೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಗೊಂಡು 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಪಿಯುಸಿಯನ್ನು ಕೊಪ್ಪಳ ನಗರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪೂರೈಸಿ ನಂತರ ಗಜೇಂದ್ರಗಡ ತಾಲೂಕಿನಲ್ಲಿ ಬಿಎಸ್ಸಿವರೆಗೆ ವ್ಯಾಸಂಗ ಮಾಡಿದ್ದಾರೆ.
₹2 ಕೋಟಿ ಸಂಬಳ, ಫ್ರೀ ಊಟ-ವಸತಿ; ಆದರೂ ಯಾಕೆ ಯಾರೂ ಅಪ್ಲೈ ಮಾಡ್ತಿಲ್ಲ?
ಯಾವ್ಯಾವ ಹುದ್ದೆಗಳು?:
ಪದವಿ ಪೂರೈಸಿದ ನಂತರ 2016ರಲ್ಲಿ ಶಿಗ್ಗಾವಿಯ ಕೆಎಸ್‌ಆರ್‌ಪಿ ಬೆಟಾಲಿನ್ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿ 5 ತಿಂಗಳು ಕಾರ್ಯನಿರ್ವಹಿಸುತ್ತಾರೆ. ನಂತರ ವಿವಿಧ ಪರೀಕ್ಷೆ ಬರೆದು ಎಸ್‌ಡಿಎ, ಎಫ್‌ಡಿಎ, ಕೇಂದ್ರ ಸರ್ಕಾರಿ ನೌಕರಿಗೂ ಆಯ್ಕೆಯಾಗುತ್ತಾರೆ. ಬಳಿಕ ಪೊಲೀಸ್ ಇಲಾಖೆಯ ಎಸ್‌ಐ ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆಯುತ್ತಾರೆ. ನಂತರ ಸಶಸ್ತ್ರ ಮೀಸಲು ಪಡೆಯ ಎಸ್‌ಐ ಬೆಂಗಳೂರು ಸಿಟಿ, 2020ರಲ್ಲಿ ಬೆಳಗಾವಿ ವಲಯದ ಡಿಆರ್‌ಎಸ್‌ಐ ಸೇವೆ ಮಾಡಿದ್ದು, ಸದ್ಯ ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಚಿತ ತರಬೇತಿ:
ಶಿಕ್ಷಣ ಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದರೊಂದಿಗೆ ಧಾರವಾಡ ಸೇರಿದಂತೆ ನಾನಾ ಕಡೆಗಳಲ್ಲಿ ಉಚಿತವಾಗಿ ತರಬೇತಿ ನೀಡಿದ್ದಾರೆ.