ಕೊಪ್ಪಳ: ಕೂಲಿ ಕೆಲಸ ಮಾಡುವವರ ಮಗ ಈಗ ಪಿಎಸ್‌ಐ, ಬಡ ತಂದೆ-ತಾಯಿಯ ಕನಸು ನನಸು ಮಾಡಿದ ಪುತ್ರ!
ಮಗನನ್ನು ಯಾವುದಾದರೂ ಒಂದು ಹಂತಕ್ಕೆ ತರಲೇಬೇಕೆಂದು ತಂದೆ -ತಾಯಿ ದಿನಗೂಲಿ ಮಾಡಿ ಓದಿಸಿದ್ದರು. ಅವರ ಶ್ರಮಕ್ಕೆ ಮಗ ಇಂದು ಪಿಎಸ್‌ಐ ಪರೀಕ್ಷೆಯಲ್ಲಿ ಪಾಸ್ ಆಗಿ ಅವರು ಕಂಡಿದ್ದ ಕನಸನ್ನು ನನಸು ಮಾಡಿದ್ದಾನೆ. ಮಂಜುನಾಥ್ ಪಿಎಸ್‌ಐ ಪರೀಕ್ಷೆಯಲ್ಲಿ ತೆರ್ಗಡೆಗೊಂಡು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ಕೊಪ್ಪಳ(ಅ.23): ಅಪ್ಪ, ಅಮ್ಮ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರ ಮಗ ಮಂಜುನಾಥ ಈಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಹಾಲವರ್ತಿ ಗ್ರಾಮದ ಮಂಜುನಾಥ ತಂದೆ ರಾಮಪ್ಪ ಭೀಮನೂರ ಎಂಬ ಕಡು ಬಡತನದ ಯುವಕ ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾನೆ.
ಬಡತನದ ಯುವಕ ಪರೀಕ್ಷೆಯಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯಲ್ಲಿ ಮಂಜುನಾಥ ಹೆಸರು ಇರುವುದಕ್ಕೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಮಗನನ್ನು ಯಾವುದಾದರೂ ಒಂದು ಹಂತಕ್ಕೆ ತರಲೇಬೇಕೆಂದು ತಂದೆ -ತಾಯಿ ದಿನಗೂಲಿ ಮಾಡಿ ಓದಿಸಿದ್ದರು. ಅವರ ಶ್ರಮಕ್ಕೆ ಮಗ ಇಂದು ಪಿಎಸ್‌ಐ ಪರೀಕ್ಷೆಯಲ್ಲಿ ಪಾಸ್ ಆಗಿ ಅವರು ಕಂಡಿದ್ದ ಕನಸನ್ನು ನನಸು ಮಾಡಿದ್ದಾನೆ. ಮಂಜುನಾಥ್ ಪಿಎಸ್‌ಐ ಪರೀಕ್ಷೆಯಲ್ಲಿ ತೆರ್ಗಡೆಗೊಂಡು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ನಮ್ಮಂತಹ ಯುವಕರಿಗೆ ಮಾದರಿ ಆಗಿದ್ದಾನೆ. ಒಬ್ಬ ದಕ್ಷ ಅಧಿಕಾರಿಯಾಗಿ ಹೊರಹೊಮ್ಮಲಿ ಎಂಬುದು ನಮ್ಮ ಗ್ರಾಮದ ಪ್ರತಿಯೊಬ್ಬರ ಆಶಯ ಆಗಿದೆ ಎನ್ನುತ್ತಾರೆ ಹಾಲವರ್ತಿ ಗ್ರಾಮದ ಯುವಕ ಮುತ್ತುರಾಜ್ ಹಾಲವರ್ತಿ.
ಬಿಎಂಟಿಸಿ ನಿರ್ವಾಹಕ ಹುದ್ದೆ: ಅರ್ಹತಾ ಪಟ್ಟಿ ಪ್ರಕಟ, ಈಗಲೇ ಪರಿಶೀಲಿಸಿ
ಪಿಎಸ್‌ಐ ಆಗಿ ಮಿಯ್ಯಾಪೂರದ ಸುನೀತಾ ಮ್ಯಾಗೇರಿ ಆಯ್ಕೆ
ಹನುಮಸಾಗರ: ಹನುಮಸಾಗರದ ಸಮೀಪದ ಮಿಯ್ಯಾಪೂರ ಗ್ರಾಮದ ವೀರುಪಾಕ್ಷಗೌಡ್ರ ಮ್ಯಾಗೇರಿ ಅವರ ತೃತೀಯ ಪುತ್ರಿ ಸುನೀತಾ ಮ್ಯಾಗೇರಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.
ಒಂದರಿಂದ 5ನೇ ತರಗತಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ. 6ರಿಂದ 10ನೇ ತರಗತಿ ಬೆಣಕಲ್ಲ ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಬಿಇ ಓದಿದ್ದಾರೆ. ಸದ್ಯ ಗುಲಬುರ್ಗಾ ಜಿಲ್ಲೆಯ ಆಳಂದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಾ, ಸಿವಿಲ್ ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.