ಕರ್ನಾಟಕದಲ್ಲಿ ಶೀಘ್ರ 5,000 ಪೇದೆಗಳ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ
ಕೊರೋನಾ ಸಮಯದಲ್ಲಿ ನಮ್ಮಲ್ಲಿ ನೇಮಕಾತಿ ಪ್ರಕ್ರಿಯೆ ನಿಂತಿರಲಿಲ್ಲ. ಆಗಲೂ ನೇಮಕಾತಿ ನಡೆಸಿದ್ದೇವೆ. ಹೀಗಾಗಿ ಈ ನೆಪ ನೀಡಿ ವಯೋಮಿತಿ 2 ವರ್ಷ ಸಡಿಲಿಕೆ ಮಾಡಲಾಗದು ಎಂದು ಸ್ಪಷ್ಟಪಡಿಸಿದ ಸಚಿವ ಜ್ಞಾನೇಂದ್ರ
ವಿಧಾನಸಭೆ(ಸೆ.21): ರಾಜ್ಯದಲ್ಲಿ 9,432 ಪೊಲೀಸ್ ಪೇದೆ ಹುದ್ದೆ ಖಾಲಿಯಿದ್ದು, ಪ್ರಸ್ತುತ 3,484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಳಿಕ 1,500 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 5 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಮೂಲಕ ಪೊಲೀಸ್ ಪೇದೆಗಳ ಕೊರತೆ ನೀಗಲಿದ್ದು, ಸುಮಾರು 4 ಸಾವಿರದಷ್ಟು ಹುದ್ದೆಗಳು ಮಾತ್ರ ಖಾಲಿ ಉಳಿಯಲಿವೆ. ಇವುಗಳನ್ನೂ ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರೀತಂ ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪೊಲೀಸರ ಕೊರತೆ ಇರುವುದು ಸತ್ಯ. ರಾಜ್ಯದಲ್ಲಿ 59,067 ಮಂಜೂರಾದ ಹುದ್ದೆಗಳಿದ್ದು, 43,296 ಪುರುಷರು, 6,339 ಮಂದಿ ಮಹಿಳಾ ಪೇದೆ ಸೇರಿದಂತೆ 49,635 ಮಂದಿ ಇದ್ದಾರೆ. ಉಳಿದಂತೆ 9,432 ಹುದ್ದೆ ಖಾಲಿಯಿವೆ. 2022-23ನೇ ಸಾಲಿನಲ್ಲಿ 3,484 ಹುದ್ದೆ ಭರ್ತಿಗೆ ಸೆ.12ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಸದ್ಯದಲ್ಲೇ ಇನ್ನೂ 1,500 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
BANGALORE UNIVERSITY RECRUITMENT; ಅತಿಥಿ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊರೋನಾ ಸಮಯದಲ್ಲಿ ನಮ್ಮಲ್ಲಿ ನೇಮಕಾತಿ ಪ್ರಕ್ರಿಯೆ ನಿಂತಿರಲಿಲ್ಲ. ಆಗಲೂ ನೇಮಕಾತಿ ನಡೆಸಿದ್ದೇವೆ. ಹೀಗಾಗಿ ಈ ನೆಪ ನೀಡಿ ವಯೋಮಿತಿ 2 ವರ್ಷ ಸಡಿಲಿಕೆ ಮಾಡಲಾಗದು ಎಂದು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲೂ ಪೊಲೀಸ್ ಪೇದೆಗಳ ಕೊರತೆ ಇತ್ತು. ಈ ಹಿಂದೆ 20 ಸಾವಿರ ಹುದ್ದೆಗಳಿಗೂ ಹೆಚ್ಚು ಹುದ್ದೆ ಖಾಲಿ ಇದ್ದವು. ಪ್ರಸ್ತುತ ಕಳೆದ 20 ವರ್ಷಗಳಲ್ಲಿ ಅತಿ ಕಡಿಮೆ ಪ್ರಮಾಣದ ಹುದ್ದೆಗಳು ಖಾಲಿಯಿವೆ. ಕೊರೋನಾ ಅವಧಿಯಲ್ಲೂ ನೇಮಕಾತಿ ಪ್ರಕ್ರಿಯೆ ನಿಲ್ಲಿಸದೆ ನೇಮಕ ಮಾಡಿದ್ದೇವೆ ಎಂದು ಹೇಳಿದರು.
ವಯೋಮಿತಿ ಸಡಿಲಿಕೆ ಇಲ್ಲ
ಕಾಂಗ್ರೆಸ್ ಸದಸ್ಯೆ ಲಕ್ಷ್ಮೇ ಹೆಬ್ಬಾಳ್ಕರ್ ಸಲಹೆಗೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ ಅವರು, ಕೊರೋನಾ ಅವಧಿಯಲ್ಲಿ ಎರಡು ವರ್ಷ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ಹೀಗಾಗಿ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಸಡಿಲಿಸಬೇಕು ಎಂದು ತುಂಬಾ ಮಂದಿ ಆಕಾಂಕ್ಷಿಗಳು ನನಗೂ ಬೇಡಿಕೆಯಿಟ್ಟಿದ್ದಾರೆ.