Asianet Suvarna News Asianet Suvarna News

KSRTC: ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿ ಮರುನೇಮಕ: ಸಚಿವ ರಾಮುಲು

*  ತಿಂಗಳಾಂತ್ಯಕ್ಕೆ 700 ಮಂದಿಯನ್ನು ಮರು ನೇಮಕಾತಿ
*  ಒಂದು ವೇಳೆ ಪ್ರತಿಭಟನೆ ನಡೆಸಿದರೆ ಮತ್ತೆ ವಜಾ 
*  ಮಷ್ಕರದಿಂದ ಸಾರ್ವಜನಿಕ ಆಸ್ತಿ ಹಾನಿ 

Re Appointment of KSRTC Dismissed Employees in Karnataka Says B Sriramulu grg
Author
Bengaluru, First Published Feb 11, 2022, 7:24 AM IST

ಬೆಂಗಳೂರು(ಫೆ.11): ಮುಷ್ಕರ(Strike) ನಡೆಸಿ ವಜಾಗೊಂಡಿದ್ದ ಸಾರಿಗೆ ನೌಕರರ(KSRTC) ಮರು ನೇಮಕಾತಿ ಪ್ರಕ್ರಿಯೆಗೆ ಆರಂಭಿಸಿರುವ ರಾಜ್ಯ ಸರ್ಕಾರವು(Government of Karnataka) ಮೊದಲ ಹಂತದಲ್ಲಿ 100 ಮಂದಿಯನ್ನು ಮರು ನೇಮಕಾತಿ ಮಾಡಿಕೊಂಡಿದೆ. ತಿಂಗಳಾಂತ್ಯಕ್ಕೆ 700 ಮಂದಿಯನ್ನು ಮರು ನೇಮಕಾತಿ(Re-Appointment) ಮಾಡಿಕೊಳ್ಳಲು ತೀರ್ಮಾನಿಸಿದೆ.

ಗುರುವಾರ ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಅವರು ವಜಾಗೊಂಡ 100 ಸಿಬ್ಬಂದಿಗೆ ಮರು ನೇಮಕಾತಿ ಆದೇಶ ಪತ್ರ ವಿತರಣೆ ಮಾಡಿದ ಬಳಿಕ ಮಾತನಾಡಿ, ಮುಂದಿನ ದಿನದಲ್ಲಿ ಪ್ರತಿಭಟನೆ(Protest) ನಡೆಸದಂತೆ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಪ್ರತಿಭಟನೆ ನಡೆಸಿದರೆ ಮತ್ತೆ ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Electric Bus ಶೀಘ್ರದಲ್ಲೇ KSRTCಗೆ 50 ಎಲೆಕ್ಟ್ರಿಕ್ ಬಸ್, ಜಿಲ್ಲೆ ಜಿಲ್ಲೆಗೆ ಸಂಚಾರ ಆರಂಭ!

ಈ ಹಿಂದೆ ಮುಷ್ಕರ ಕೈಗೊಂಡು ಅಮಾನತು, ವಜಾ ಎಂದು ಸುಮಾರು 1600ಕ್ಕೂ ಹೆಚ್ಚು ಸಿಬ್ಬಂದಿ(Employees) ಕೆಲಸ ಕಳೆದುಕೊಂಡಿದ್ದರು. ಮುಷ್ಕರ ಯಾವ ಸಂದರ್ಭದಲ್ಲಿ ಮಾಡಬೇಕಿತ್ತು ಎಂಬುದನ್ನು ನೌಕರರು ತಿಳಿದುಕೊಳ್ಳಬೇಕಿತ್ತು. ಮಷ್ಕರದಿಂದ ಸಾರ್ವಜನಿಕ ಆಸ್ತಿ ಹಾನಿಯಾಗುತ್ತದೆ. ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿತ್ತು. ಮುಖ್ಯಮಂತ್ರಿಗಳ ಅಣತಿ ಮೇರೆಗೆ ಮಾನವೀಯ ದೃಷ್ಟಿಯಿಂದ ಮರುನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇನ್ನು ಮುಂದೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಷರತ್ತುಗಳನ್ನು ಹಾಕಿಯೇ ಅವರನ್ನು ಪುನಃ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಗುರುವಾರ 100 ಸಿಬ್ಬಂದಿಗೆ, ಶುಕ್ರವಾರ 200 ಸಿಬ್ಬಂದಿಗೆ ಹೀಗೆ ಹಂತ ಹಂತವಾಗಿ ಮರು ನೇಮಕಾತಿ ಮಾಡಲಾಗುವುದು. ಈ ತಿಂಗಳ ಅಂತ್ಯಕ್ಕೆ 700 ಸಿಬ್ಬಂದಿಯನ್ನು ಮರು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಕಾನೂನಿನಲ್ಲಿ ಮರು ನೇಮಕಕ್ಕೆ ಅವಕಾಶ ಇಲ್ಲ. ಆದರೂ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನದಲ್ಲಿ 1510 ಸಿಬ್ಬಂದಿಯ ಮರು ನೇಮಕ ಮಾಡುವ ಕೆಲಸ ಆಗಲಿದೆ. ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಜತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಮುಷ್ಕರದಿಂದ ರಾಜಕೀಯ ಪ್ರತಿನಿಧಿಗಳು ಲಾಭ ಪಡೆದುಕೊಳ್ಳುತ್ತಾರೆ. ಮುಷ್ಕರಕ್ಕೆ ಕರೆ ನೀಡಿದವರು ಇದೀಗ ಓಡಿಹೋಗಿದ್ದಾರೆ. ಸಂಕಷ್ಟಕ್ಕೊಳಗಾಗಿದ್ದು ಅಮಾಯಕ ಸಿಬ್ಬಂದಿ. ಮುಂದಿನ ದಿನದಲ್ಲಾದರೂ ಮುಷ್ಕರಕ್ಕೆ ಹೋಗುವ ಮುನ್ನ ಸರ್ಕಾರ ಜತೆ ಮಾತನಾಡುವ ಕೆಲಸವಾಗಬೇಕು ಎಂದು ತಿಳಿಸಿದರು.

ಬಿಎಂಟಿಸಿ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ: ಶ್ರೀರಾಮುಲು

ಬೆಂಗಳೂರು: ಸದ್ಯಕ್ಕೆ ಬಿಎಂಟಿಸಿ(BMTC) ಪ್ರಯಾಣ ದರ(Ticket Fare) ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ನೌಕರರ ಮುಷ್ಕರ, ಕೋವಿಡ್‌ ಸಂಕಷ್ಟ, ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಬಿಎಂಟಿಸಿ ಬಸ್‌ ಟಿಕೆಟ್‌ ದರ ಏರಿಕೆ ಕುರಿತು ಚರ್ಚೆ ನಡೆಸಲಾಗಿತ್ತು. ಆದರೆ, ಬಸ್‌ ದರ ಏರಿಕೆ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಿಕೆಟ್‌ ದರ ಏರಿಕೆಗೆ ಹಸಿರು ನಿಶಾನೆ ನೀಡಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸದ್ಯ ತಿಂಗಳಿಗೆ ಬಿಎಂಟಿಸಿಗೆ 90-95 ಕೋಟಿ ರು. ಬರುತ್ತಿದ್ದು, 155 ಕೋಟಿ ರು. ವೆಚ್ಚವಾಗುತ್ತಿದೆ. ನಮ್ಮದು ಸೇವಾಭಾವನೆಯಿಂದ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿದೆ ಎಂದ ಅವರು, ಬಿಎಂಟಿಸಿ ಬಸ್‌ಗಳಿಗೆ ಬೆಂಕಿ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ವರದಿ ಬರಲಿದ್ದು, ಅದನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಆರ್ಥಿಕ ಸಂಕಷ್ಟ: ಸಾಲದ ಸುಳಿಯಲ್ಲಿ ಸಿಲುಕಿ KSRTC ಒದ್ದಾಟ

ಬೆಂಗ್ಳೂರಲ್ಲಿ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ ಗತವೈಭವ..!

ಕಳೆದ 20 ವರ್ಷಗಳ ಹಿಂದೆ ಬೆಂಗಳೂರಿನ(Bengaluru) ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ಗಳು(Double Decker Bus) ಮತ್ತೆ ನಗರದ ರಸ್ತೆಗಿಳಿಯಲಿವೆ. ಈ ಹಿಂದೆ ಸಂಚರಿಸುತ್ತಿದ್ದ ಡೀಸೆಲ್‌ ಬಸ್‌ಗಳ ಬದಲಿಗೆ ಪ್ರಾಯೋಗಿಕವಾಗಿ ಐದು ಎಲೆಕ್ಟ್ರಿಕ್‌(ಪರಿಸರ ಸ್ನೇಹಿ)ಬಸ್‌ಗಳು ನಗರಕ್ಕೆ ಆಗಮಿಸಲಿವೆ.

ಕೇಂದ್ರ ಸರ್ಕಾರದ(Central Government) ಇಂಧನ ಸಚಿವಾಲಯದ ಅಧೀನ ಎನರ್ಜಿ ಎಫಿಷಿಯನ್ಸಿ ಸರ್ವೀಸ್‌ ಲಿಮಿಟೆಡ್‌(EESL) ಸಂಸ್ಥೆಯಿಂದ ಆವಿಷ್ಕಾರಗೊಳಿಸಿರುವ ವಿದ್ಯುತ್‌ ಚಾಲಿಯ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ದೇಶದ ವಿವಿಧ ನಗರಗಳ ಸಾರಿಗೆ ನಿಗಮಗಳಿಗೆ ವಿತರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
 

Follow Us:
Download App:
  • android
  • ios