ಕೋವಿಡ್ ಅಬ್ಬರದಿಂದಾಗಿ ಬಹುತೇಕ ರಾಜ್ಯಗಳಲ್ಲೀಗ ಹಾಫ್ ಲಾಕ್‌ಡೌನ್, ಫುಲ್ ಲಾಕ್‌ಡೌನ್, ಜನತಾ ಕರ್ಫ್ಯೂ, ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಈ ನಿರ್ಬಂಧಗಳು ಯಾವಾಗಪ್ಪ ಮುಗಿಯುತ್ತೆ? ಹೀಗೆ ಮುಂದುವರಿದರೆ ನೌಕರಿ ಹಿಡಿಯೋದು ಹೇಗೆ ಅಂತ ಯೋಚಿಸ್ತಿದ್ದೀರಾ. ಚಿಂತೆ ಬೇಡ, ಕೈಯಲ್ಲಿ  ಮೊಬೈಲ್ ಇದ್ದರೆ ಸಾಕು. ನೀವು ಇದ್ದಲ್ಲಿಂದಲೇ ಕೆಲ್ಸಕ್ಕೆ ಅಪ್ಲೈ ಮಾಡಬಹುದು. ವಾಟ್ಸ್ ಆಪ್,  ಇ-ಮೇಲ್ ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೌದು, ರೇಲ್ವೆ ಇಲಾಖೆಯಲ್ಲಿ ಖಾಲಿಯಿರೋ ಸಿ-ಗ್ರೂಪ್ ಹುದ್ದೆಗಳಿಗೆ ವಾಟ್ಸ್ಯ್‌ಪ್ ಮೂಲಕ ಅರ್ಜಿ ಸಲ್ಲಿಸಬಹುದು. ವಾಟ್ಸ್ಆಪ್ನಲ್ಲೇ ಇಂಟರ್ವ್ಯೂ ಅಟೆಂಡ್ ಮಾಡಬಹುದು. ವಾಟ್ಸ್ ಆಪ್ ಮಾಡಲು  ಇಚ್ಛಿಸದವರು, ಇ-ಮೇಲ್ ಅಥವಾ ಗೂಗಲ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡಿ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಧಿಸೂಚನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ರಾಜ್ಯದ 509 ಸೇರಿ ಒಟ್ಟು 5237 ಖಾಲಿ ಹುದ್ದೆಗಳಿಗೆ SBI ನೇಮಕಾತಿ, ಅಪ್ಲೈ ಮಾಡಿ

ಈಶಾನ್ಯ ಗಡಿನಾಡು ರೇಲ್ವೇ ವಿಭಾಗ, ಡಾಟಾ ಎಂಟ್ರಿ ಆಪರೇಟರ್, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2021 ರ ಮೇ 15 ರೊಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಲುಮ್ಡಿಂಗ್ ವಿಭಾಗ / ಎನ್.ಎಫ್. ರೇಲ್ವೆ ವಿಭಾಗ, ವಿಭಾಗೀಯ ಆಸ್ಪತ್ರೆ / ಲುಮ್ಡಿಂಗ್ ಎನ್.ಎಫ್. ನಲ್ಲಿ ಗುತ್ತಿಗೆ ಆಧಾರದ ಮೇಲೆ ಗ್ರೂಪ್ ‘ಸಿ’ ನಲ್ಲಿ ಹೆಚ್ಚುವರಿ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಗುತ್ತಿಗೆಯಡಿ ಒಪ್ಪಂದದ ದಿನಾಂಕದಿಂದ ಭಾನುವಾರವೂ ಸೇರಿದಂತೆ ಮೂರು ತಿಂಗಳ ಅವಧಿಯನ್ನ ಒಳಗೊಂಡಿರಲಿದೆ. ಬಳಿಕ ರೇಲ್ವೆ ಪರಿಸ್ಥಿತಿಗೆ ತಕ್ಕಂತೆ ಈ ಅವಧಿಯನ್ನ ವಿಸ್ತರಿಸಬಹುದು ” ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಕೋವಿಡ್ ಎರಡನೇ ಅಲೆಯಿಂದಾಗಿ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ (ಲುಮ್ಡಿಂಗ್ ವಿಭಾಗ) ಪರಿಣಾಮಕಾರಿ ಚಿಕಿತ್ಸೆಯನ್ನ ಒದಗಿಸಬೇಕಾಗಿದೆ. ಜೊತೆಗೆ ಎಲ್ಎಂಜಿ ವಿಭಾಗದಲ್ಲಿ ವ್ಯಾಕ್ಸಿನೇಷನ್‌ನ ಮೊಬೈಲ್ ತಂಡದ ಅಡಿಯಲ್ಲಿ ಹಾಗೂ ಕೋವಿಡ್ ತಪಾಸಣಾ ಕೇಂದ್ರದಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಆನ್‌ಲೈನ್ ಸಂದರ್ಶನವನ್ನು ಕರೆಯಲಾಗಿದೆ.  

ನೌಕಾಪಡೆಯಿಂದ 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹತೆ, ಅನುಭವ ಹೊಂದಿದ್ದು, ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸುವವರನ್ನು ಸಿಎಂಎಸ್/ ಲುಮ್ಡಿಂಗ್/ ಎನ್‌ಎಫ್ ರೇಲ್ವೆ ಅಡಿಯಲ್ಲಿ ಪೂರ್ಣ ಸಮಯದ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು..

ವಿಭಾಗೀಯ ರೇಲ್ವೆ ಆಸ್ಪತ್ರೆ, ಲುಮ್ಡಿಂಗ್ ವಿಭಾಗ ಹಾಗೂ ಎನ್‌ಎಫ್ ರೇಲ್ವೆನಲ್ಲಿ ಖಾಲಿಯಿರೋ ೧೫ ಪ್ಯಾರಾಮೆಡಿಕಲ್  ಸಿಬ್ಬಂದಿ ಹುದ್ದೆಗಳಿವೆ. 6 ನರ್ಸ್ ಹುದ್ದೆಗಳು, 2 ಲ್ಯಾಬ್ ಟೆಕ್ನಿಷಿಯನ್, 6 ಹಾಸ್ಟಿಟಲ್ ಅಟೆಂಡೆಂಟ್ ಹಾಗೂ 1 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಗೂಗಲ್ ಫಾರ್ಮ್ ಭರ್ತಿ ಮಾಡುವ ಮೂಲಕ ಅಥವಾ ವಾಟ್ಸಾಪ್ ಮೂಲಕ ಈ ಎಲ್ಲ ಪೋಸ್ಟ್‌ಗಳಿಗ ಮೇ ೧೫ರ ಸಂಜೆ ೪ ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ಹಾರ್ಡ್ ಪ್ರತಿಗಳಲ್ಲಿ ಕಳುಹಿಸುವ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಹೀಗಾಗಿ DRM / P / LMG ಗೆ ಅರ್ಜಿಗಳನ್ನು ಕಳುಹಿಸುವ ಅಗತ್ಯವಿಲ್ಲ.

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು, ಈ ಲಿಂಕ್ ಒಪನ್ ಮಾಡಿ ಅರ್ಜಿ ಸಲ್ಲಿಸಬೇಕು. ಗೂಗಲ್ ಮಾದರಿಯಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಅದರೊಳಗೆ ನೀಡಲಾಗಿದೆ. ಜೊತೆಗೆ ಯಾವ ನಂಬರ್‌ಗೆ ವಾಟ್ಸ್‌ಆಪ್‌ನಲ್ಲಿ ಅರ್ಜಿ ಸಲ್ಲಿಬೇಕು ಎಂಬ ಬಗ್ಗೆ ವಿವರಣೆಯಿದೆ.  ಮತ್ಯಾಕೆ ತಡ, ರೇಲ್ವೆ ಇಲಾಖೆಯಲ್ಲಿ ಕೆಲ್ಸ ಮಾಡಲು ಇಂಟರೆಸ್ಟ್ ಇರೋದು ಕೂಡಲೇ ವಾಟ್ಸ್ಆಪ್‌ನಲ್ಲಿ ಅರ್ಜಿ ಸಲ್ಲಿಸಿ.

ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!