Asianet Suvarna News Asianet Suvarna News

ನಾವಲ್‌ ಶಿಪ್ ರಿಪೇರ್ ಯಾರ್ಡ್ ನೇಮಕಾತಿ: 230 ಅಪ್ರೆಂಟಿಸ್‌ಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯು ನಾವಲ್ ಶಿಪ್ ರಿಪೇರ್ ಯಾರ್ಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 230 ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನವಾಗಿದೆ. ಆಸಕ್ತರ ಅರ್ಜಿ ಸಲ್ಲಿಸಬಹುದು.

Navalship Training Yard Recruitment and check details
Author
Bengaluru, First Published Aug 27, 2021, 5:11 PM IST

ಭಾರತೀಯ ನೌಕಾಪಡೆ ಸೇರುವ ಕನಸು ನಿಮಗಿದ್ರೆ, ಅದನ್ನ ಈಡೇರಿಸಿಕೊಳ್ಳುವ ಸಮಯ ಬಂದಿದೆ. ಐಟಿಐ ಮುಗಿಸಿ ಕೆಲಸ ಹುಡುಕಾಡುತ್ತಿದ್ರೆ ನೌಕಾಸೇನೆ ಸೇರಲು ಸದಾವಕಾಶ ಒಲಿದು ಬಂದಿದೆ.

ನೌಕಾಪಡೆಯ ಎನ್ಎಸ್ಆರ್‌ವೈ(ನಾವಲ್ ಶಿಪ್ ರಿಪೇರ್ ಯಾರ್ಡ್) ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಬರೋಬ್ಬರಿ 230 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು‌ ಮುಂದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡಲು ಅಕ್ಟೋಬರ್ 1ರವರೆಗೆ ಕಾಲಾವಕಾಶವಿದೆ.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯು ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಕೊಚ್ಚಿ ಬ್ಲೇರ್ ನ ನಾವಲ್ ಶಿಪ್ ರಿಪೇರ್ ಯಾರ್ಡ್ ನಲ್ಲಿರೋ ಅಪ್ರೆಂಟಿಸ್ ತರಬೇತಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ನಮೂನೆಯನ್ನು ನಿಗದಿತ ನಮೂನೆಯಲ್ಲಿ ಆಫ್‌ಲೈನ್ ಮೋಡ್ ಮೂಲಕ ಭರ್ತಿ ಮಾಡಲು ಸೂಚಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯದಂತಹ ವಿವಿಧ ಟ್ರೇಡ್‌ಗಳ 230 ಹುದ್ದೆಗಳನ್ನು ಭರ್ತಿ ಮಾಡುವುದು. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 1 ಅಥವಾ ಅದಕ್ಕೂ ಮೊದಲು ಅರ್ಜಿಗಳನ್ನು ಸಲ್ಲಿಸಬಹುದು.

ನಾವಲ್ ಶಿಪ್ ರಿಪೇರ್ ಯಾರ್ಡ್‌ನ ಒಟ್ಟು 230 ಅಪ್ರೆಂಟಿಸ್ ಹುದ್ದೆಗಳ ಪೈಕಿ ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ - 20 ಹುದ್ದೆಗಳು, ಎಲೆಕ್ಟ್ರಿಷಿಯನ್ -18, ಎಲೆಕ್ಟ್ರಾನಿಕ್ ಮೆಕ್ಯಾನಿಕ್- 5, ಫಿಟ್ಟರ್ -13,  ಮೆಕ್ಯಾನಿಸ್ಟ್- 6, ಮೆಕ್ಯಾನಿಕ್ ( ಮೋಟರ್ ವೆಹಿಕಲ್)-5, ಮೆಕ್ಯಾನಿಕ್ ರೆಫ್ರಿಜರೇಟರ್ & ಎಸಿ -5, ಟರ್ನರ್-6, ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್)-8, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್- 3, ಫೌಂಡ್ರಿಮನ್-1, ಶೀಟ್ ಮೆಟಲ್ ವರ್ಕರ್-11, ಎಲೆಕ್ಟ್ರಿಕಲ್ ವಿಂಡರ್-5, ಕೇಬಲ್ ಜಾಯಿಂಟರ್-2, ಸೆಕ್ರೆಟ್ರಿಯಟ್ ಅಸಿಸ್ಟೆಂಟ್-2, ಎಲೆಕ್ಟ್ರೋಪ್ಲೇಟರ್ -6, ಪ್ಲಂಬರ್- 6, ಫರ್ನಿಚರ್ & ಕ್ಯಾಬಿನೆಟ್ ಮೇಕರ್-7, ಮೆಕ್ಯಾನಿಕ್ ಡಿಸೇಲ್-17, ಮೆಕ್ಯಾನಿಕ್ (ಮರಿನ್ ಡಿಸೇಲ್)-1 ಹುದದ್ದೆಗಳಿಗೆ ಅರ್ಜಿ  ಸಲ್ಲಿಸಬಹುದು.

ಕ್ರೀಡಾಪಟುಗಳಿಗೆ ರೇಲ್ವೆಯಲ್ಲಿ ಉದ್ಯೋಗ, 92,300 ರೂ.ವರೆಗೂ ಮಾಸಿಕ ವೇತನ

ಹಾಗೆಯೇ ಮರಿನ್ ಇಂಜಿನ್ ಫಿಟ್ಟರ್- 5, ಬುಕ್ ಬೈಂಡರ್-4, ಟೈಲರ್ (ಜನರಲ್)-5, ಶಿಪ್ ರೈಟ್(ಸ್ಟೀಲ್)-4, ಪೈಪ್ ಫಿಟ್ಟರ್-4, ರಿಗ್ಗರ್-3, ಶಿಪ್ ರೈಟ್(ವಿಡ್)-14, ಮೆಕ್ಯಾನಿಕ್ ಕಮ್ಯೂನಿಕೇಷನ್ ಎಕ್ವಿಪ್ ಮೆಂಟ್ ಮೆಂಟೇನನ್ಸ್-3, ಆಪರೇಟರ್ ಮೆಟಿರಿಯಲ್ ಹ್ಯಾಂಡಲಿಂಗ್ -3, ಟೂಲ್ & ಡೈ ಮೇಕರ್-1, ಸಿಎನ್ ಸಿ ಪ್ರೊಗ್ರಾಮಿಂಗ್ ಕಮ್ ಆಪರೇಟರ್- 1, ಡ್ರೈವರ್ ಕಮ್ ಮೆಕ್ಯಾನಿಕ್ (ಎಲ್ ಎಂವಿ)- 2, ಪೈಂಟರ್(ಜನರಲ್)-9, ಟಿಐಜಿ/ಎಂಐಜಿ ವೆಲ್ಡರ್-4, ಪಂಪ್ ಆಪರೇಟರ್ ಕಮ್ ಮೆಕ್ಯಾನಿಕ್- 3, ಎಂಗ್ರೇವರ್-1, ಪೇಂಟರ್(ಮರಿನ್)- 2, ಮೆಕ್ಯಾನಿಕ್ ರೇಡಿಯೋ & ರಾಡಾರ್ ಏರ್ ಕ್ರಾಫ್ಟ್-5, ಮೆಕ್ಯಾನಿಕ್ ( ಇನ್ಸ್ಟ್ರುಮೆಂಟ್ ಏರ್ ಕ್ರಾಫ್ಟ್)- 5, ಎಲೆಕ್ಟ್ರಿಷಿಯನ್ (ಏರ್ ಕ್ರಾಫ್ಟ್)- 5 ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 

Navalship Training Yard Recruitment and check details

ಅಭ್ಯರ್ಥಿಯು ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.ಜೊತೆಗೆ 65% ಅಂಕಗಳೊಂದಿಗೆ ಐಟಿಐ ಕೋರ್ಸ್ ಪೂರೈಸಿರಬೇಕು. ಅಭ್ಯರ್ಥಿಯ ವಯೋಮಿತಿ 21 ವರ್ಷ ಮೀರಿರಬಾರದು.

ಮೆಟ್ರಿಕ್ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿಗೆ ಪ್ರಾಥಮಿಕ ಆಯ್ಕೆಯನ್ನು ಮಾಡಲಾಗುತ್ತದೆ. ಪ್ರಾಥಮಿಕ ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗೆ ಕರೆಯಲಾಗುವುದು. ವೈದ್ಯಕೀಯ ಪರೀಕ್ಷೆಯ ಪ್ರಮಾಣಪತ್ರ  ಮತ್ತು ಪೋಲಿಸ್ ಪ್ರಮಾಣಪತ್ರ ಸ್ವೀಕರಿಸಿದ ನಂತರವೇ ಮೆರಿಟ್ ಪಟ್ಟಿಯನ್ನು ಘೋಷಿಸಲಾಗುತ್ತದೆ. 27.01.2022 ರಂದು ಎನ್ಎಸ್ಆರ್‌ವೈ ನೇಮಕಾತಿಗೆ ವರದಿ ಮಾಡಿಕೊಳ್ಳುವಂತೆ ಆಯ್ದ ಅಭ್ಯರ್ಥಿಗಳಿಗೆ ಜಾಯ್ನಿಂಗ್ ಲೆಟರ್ ರವಾನಿಸಲಾಗುತ್ತದೆ.

ಬಿಎಸ್‌ಎಫ್‌ನಲ್ಲಿ 269 ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಶುರು

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅನ್ನೋದು ಗಮನಾರ್ಹ. ಅಡ್ಮಿರಲ್ ಸೂಪರಿಂಟೆಂಡೆಂಟ್ (ಆಫೀಸರ್-ಇನ್-ಚಾರ್ಜ್), ಅಪ್ರೆಂಟಿಸ್ ಟ್ರೈನಿಂಗ್ ಸ್ಕೂಲ್, ನೇವಲ್ ಶಿಪ್ ರಿಪೇರಿ ಯಾರ್ಡ್, ನೇವಲ್ ಬೇಸ್, ಕೊಚ್ಚಿ-682004- ಈ ವಿಳಾಸಕ್ಕೆ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಬೇಕು.

Follow Us:
Download App:
  • android
  • ios