Asianet Suvarna News Asianet Suvarna News

ಟಿಇಟಿ ಪರೀಕ್ಷೆ: ಶೇ.90ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಹಾಜರು

*  ರಾಜ್ಯಾದ್ಯಂತ 400ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಪರೀಕ್ಷೆ
*  1,38,455 ಅಭ್ಯರ್ಥಿಗಳು ಹಾಜರು, 11,096 ಮಂದಿ ಗೈರು
*  ಕೊರೋನಾ ನಿಯಮ ಪಾಲಿಸಿ ಪರೀಕ್ಷೆ ಬರೆಯಲು ಅವಕಾಶ  
 

More than 90 Percent Candidates in Attended in TET Exam grg
Author
Bengaluru, First Published Aug 23, 2021, 8:14 AM IST

ಬೆಂಗಳೂರು(ಆ.23):  ಭಾನುವಾರ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ಸುಸೂತ್ರವಾಗಿ ನಡೆದಿದೆ. ಪತ್ರಿಕೆ-1ರಲ್ಲಿ ಶೇ.91 ಮತ್ತು ಪತ್ರಿಕೆ-2ರಲ್ಲಿ ಶೇ.93 ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಪತ್ರಿಕೆ-1ಕ್ಕೆ 1,02,281 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 93,151 ಹಾಜರಾಗಿದ್ದು, 9130 ಗೈರು ಹಾಜರಾಗಿದ್ದಾರೆ. ಪತ್ರಿಕೆ-2ಕ್ಕೆ 1,49,551 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 1,38,455 ಅಭ್ಯರ್ಥಿಗಳು ಹಾಜರಾಗಿದ್ದು, 11,096 ಗೈರು ಹಾಜರಾಗಿದ್ದಾರೆ. ಎಲ್ಲ ಕೇಂದ್ರಗಳಲ್ಲೂ ಕೊರೋನಾ ನಿಯಮಗಳನ್ನು ಪಾಲಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿಲಾಗಿತ್ತು.

ಶಿಕ್ಷಕರಿಗೆ ಗುಡ್‌ನ್ಯೂಸ್: TET ಸರ್ಟಿಫಿಕೇಟ್‌ಗೆ ಲೈಫ್‌ಟೈಂ ವಾಲಿಡಿಟಿ ಘೋಷಿಸಿದ ಕೇಂದ್ರ

ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಈ ರೀತಿಯ ಘಟನೆಗಳು ನಡೆದಿಲ್ಲ ಎಂದು ಇಲಾಖೆ ತಿಳಿಸಿದೆ. ಪ್ರಶ್ನೆ ಪತ್ರಿಕೆ ಸುಲಭವಾಗಿದ್ದು, ಗೊಂದಲ ಪ್ರಶ್ನೆ, ಪಠ್ಯಕ್ರಮ ಹೊರತಾದ ಪ್ರಶ್ನೆಗಳು ಇರಲಿಲ್ಲವೆಂದು ಅಭ್ಯರ್ಥಿಗಳು ತಿಳಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
 

Follow Us:
Download App:
  • android
  • ios