ಆಂಧ್ರದಲ್ಲಿ ತಲೆಮರೆಸಿಕೊಳ್ಳುವ ಯತ್ನ ವಿಫಲ, ಬಂಧನಕ್ಕೆ ಮುಂಚೆ ಶಾಸಕ ಮುನಿರತ್ನ ವಿಡಿಯೋ ಸಂದೇಶ ಏನಿತ್ತು?
ಜೀವ ಬೆದರಿಕೆ ಮತ್ತು ದಲಿತರ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಕೋಲಾರದಲ್ಲಿ ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮುನಿರತ್ನ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಬೆಂಗಳೂರು (ಸೆ.14): ಜೀವ ಬೆದರಿಕೆ, ದಲಿತರ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (Munirathna) ಅವರನ್ನು ಕೋಲಾರದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತನ್ನ ಮೇಲಿನ ಆರೋಪ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದೆ ಎಂದು ಅರಿತ ಶಾಸಕ ಮುನಿರತ್ನ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.
ನನ್ನ ಮೇಲಿನ ಆರೋಪ ನಿರಾಧಾರವಾಗಿದೆ. ಕಳೆದ 15 ವರ್ಷಗಳಿಂದ ನನ್ನ ಮೇಲೆ ಮುನಿರತ್ನ ಅವ್ಯಾಚ್ಯ ಶಬ್ಧಗಳಿಂದ ಮಾತನಾಡಿದ್ದಾನೆಂದು ಗುತ್ತಿಗೆದಾರನಾಗಲಿ ಸಾರ್ವಜನಿಕರಾಗಲಿ ಇವತ್ತಿನವರೆಗೆ ಯಾವುದೇ ಮಾತನ್ನು ಹೇಳಿಲ್ಲ. ಏಕಾಏಕಿ ಲೋಕಸಭೆ ನಂತರ ನನ್ನ ವಿರುದ್ಧ ಬಹಳಷ್ಟು ಸಂಚು ನಡೆಯುತ್ತಿದೆ.
ನಿನ್ನೆ ದೂರು ಕೊಟ್ಟ ವ್ಯಕ್ತಿ ಏಳೆಂಟು ವರ್ಷಗಳಿಂದ ನಮ್ಮ ಬಳಿ ಕೆಲಸ ಮಾಡ್ತಿದ್ದ. ಈ ಗುತ್ತಿಗೆದಾರನಿಗೆ ಈ ಏಳೆಂಟು ವರ್ಷಗಳಲ್ಲಿ ತೊಂದರೆ ಕೊಟ್ಟಿಲ್ಲ, ಈಗ ತೊಂದರೆ ಕೊಡ್ತೀನಾ?
ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ, ಚೇಸ್ ಮಾಡಿ ಬಂಧಿಸಿದ ಪೊಲೀಸ್!
ದೇವರಾಜು ಅರಸು ಟ್ರಕ್ ಟರ್ಮಿನಲ್ ನಲ್ಲಿ ಪ್ರತೀ ತಿಂಗಳು 15 ಲಕ್ಷ ಅವ್ಯವಹಾರ ಆಗ್ತಿದೆ ಅಂತ ನನಗೆ ದೂರು ಬಂತು. ನಾನು ಇದರ ತನಿಖೆ ಮಾಡಿ ಅಂತ ಪತ್ರ ಬರೆದೆ, ಆವತ್ತಿನಿಂದ ಯಾವುದಾದರೊಂದು ರೀತಿಯಲ್ಲಿ ನನಗೆ ತೊಂದರೆ ಕೊಡಬೇಕು ಅಂತ ಸಂಚು ಪ್ರಾರಂಭವಾಯ್ತು.
15 ಲಕ್ಷ ಪಡ್ಕೊಳ್ತಿರೋ ವ್ಯಕ್ತಿ ಬೇರೆಯವನು ಅಂತ ನನಗೆ ಮಾಹಿತಿ ಬಂತು. ಇದರ ಮೇಲೆ ತನಿಖೆ ಮಾಡಲು ಹೇಳಿದೀನಿ. ಇಷ್ಟಕ್ಕೇ ನನ್ನ ಧ್ವನಿಯಂತೆ ಮಾಡಿ ಆರೋಪ ಮಾಡಿದ್ದಾರೆ. ತೆಲಂಗಾಣದಲ್ಲಿ ಅಮಿತ್ ಷಾ ಧ್ವನಿ ನಕಲಿ ಮಾಡಿದ್ದ ನಾಲ್ವರ ಬಂಧನ ಆಗಿದೆ. ಈಗಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು.
ಈಗ ಅವರಿಗೆ ನನ್ನ ವಿರುದ್ಧ ಒಂದು ದೂರು ಕೊಟ್ಟು ಜೈಲಿಗೆ ಕಳಿಸೋದೇ ಅವರಿಗೆ ಬೇಕಿರೋದು. ವಿಧಾನಸಭೆ ಚುನಾವಣೆ ಗೆದ್ದ ಸಮಯದಲ್ಲೇ ನನಗೆ ಗೊತ್ತಿತ್ತು. ಲೋಕಸಭೆ ಫಲಿತಾಂಶ ನಂತರ ನನಗೆ ಕೆಟ್ಟ ದಿನ ಬರುತ್ತೆ ಅಂತ ನನಗೆ ಗೊತ್ತಿತ್ತು. ಇದು ಜಂಟಿ ಕಾರ್ಯಾಚರಣೆಯಾಗಿದೆ.
ವಿಧಾನಸಭೆಯಲ್ಲಿ ಸೋತ ವ್ಯಕ್ತಿ, ಲೋಕಸಭೆಯಲ್ಲಿ ಸೋತ ಡಿಕೆ ಸುರೇಶ್ ಇವರಿಬ್ಬರ ಜಾಯಿಂಟ್ ಆಪರೇಷನ್ ಇದು. ಈಜಂ ಟಿ ಆಪರೇಷನ್ ನಲ್ಲಿ ಚಲುವರಾಜ್ ನನ್ನ ವಿರುದ್ಧ ಬಳಸಿಕೊಂಡಿದ್ದಾರೆ. ಹಾಗೂ ಒಕ್ಕಲಿಗರ ಮೇಲೆ ಇಲ್ಲಿಯವರೆಗೆ 20 ಜನರ ಮೇಲೆ ಅಟ್ರಾಸಿಟಿ ಕೇಸ್ ಹಾಕಿದವನು ಈಗ ನನ್ನ ಮೇಲೂ ಕೇಸ್ ಹಾಕಿದ್ದಾನೆ.
ದಲಿತ ಸಮಾಜದ ಜೊತೆಯಲ್ಲಿ ಇದ್ದವನ್ನನ್ನ ಬಳಸಿ ನನ್ನ ವಿರುದ್ಧ ಸಂಚು ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮೇಲೆ ಕೆಟ್ಟದಾಗಿ ಮಾತಾಡಿಲ್ಲ, ದಲಿತ ಸಮುದಾಯದ ಹೆಸರು ಬಳಕೆ ಮಾಡಿಲ್ಲ. ಇಲ್ಲಿಯವರೆಗೆ ಒಕ್ಕಲಿಗ, ದಲಿತರ ಸಮುದಾಯದ ಮೇಲೆ ಮಾತಾಡೇ ಇಲ್ಲ.
ನದಿಗಳೇ ಇಲ್ಲದ ಜಗತ್ತಿನ 7 ದೇಶಗಳಿವು, ನೀರಲ್ಲದೆ ಜನ ಬದುಕುತ್ತಿರುವುದು ಹೇಗೆ?
ಈ ಪ್ರಕರಣದಲ್ಲಿ 2018-2019 ರಲ್ಲಿ ಸೋತಂತಹ ಒಂದು ಹೆಣ್ಣು ಮಗಳು ಮತ್ತು ಅವರ ಜನಕ ಜೊತೆಗೆ ಈ ಲೋಕಸಭಾ ಚುನಾವಣೆಯಲ್ಲಿ ಸೋತ ಡಿಕೆ ಸುರೇಶ್ ಇವರೆಲ್ಲರ ಸಂಚಿನ ಪ್ರತಿಫಲ ಇವತ್ತು ನನ್ನನ್ನು ಒಕ್ಕಲಿಗ ಸಮಾಜದ ಮುಂದೆ ಎತ್ತಿಕಟ್ಟುವಂತದ್ದು ಮತ್ತು ದಲಿತ ಸಮುದಾಯದ ಮುಂದೆ ಎತ್ತಿಕಟ್ಟುವಂತ ಪ್ರಯತ್ನ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದರಲ್ಲಿ ಪ್ರಮುಖ ವ್ಯಕ್ತಿ ಇವನೇ, ರಾಜರಾಜೇಶ್ವರಿ ನಗರದಲ್ಲಿ 1 ಲಕ್ಷ ಮತ ಹೆಚ್ಚಿಗೆ ಬರಲು ಈ ಮುನಿರತ್ನೇ ಕಾರಣ ಎಂಬ ಈ ಎಲ್ಲಾ ವಿಚಾರಗಳಿಗೆ ನನ್ನ ವಿರುದ್ಧ ಸಂಚು ಮಾಡಲಾಗಿದೆ ಎಂದಿದ್ದರು.
ಈ ವಿಡಿಯೋ ಮಾಡಿ ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ ಮೊಬೈಲ್ ಬದಲಾವಣೆ ಮಾಡಿ, ಸಿಮ್ ಬದಲಾವಣೆ ಮಾಡಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರು ಪೊಲೀಸರು ಕೋಲಾರದ ನಂಗಲಿ ಬಳಿ ಬಂಧಿಸಿದರು.