ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ, ಚೇಸ್‌ ಮಾಡಿ ಬಂಧಿಸಿದ ಪೊಲೀಸ್!

ಕೊಲೆ ಬೆದರಿಕೆ ಮತ್ತು ಜಾತಿನಿಂದನೆ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರತ್ನ ಅವರು ಕೋಲಾರದಿಂದ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು.

Karnataka BJP MLA Munirathna arrest over harassment and atrocities case  gow

ಕೋಲಾರ (ಸೆ.14): ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಬೆದರಿಕೆ, ಜಾತಿನಿಂದನೆ ಆರೋಪ ಹಿನ್ನೆಲೆ  ವೈಯಾಲಿಕಾವ್ ಠಾಣೆಯಲ್ಲಿ ಎರಡು ಎಫ್ ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುನಿರತ್ನ ಅವರನ್ನು ಬಂಧಿಸಲಾಗಿದೆ. 

ಕೋಲಾರ ಪೊಲೀಸರ ನೆರವಿನೊಂದಿಗೆ ಮುಳಬಾಗಿಲು ತಾಲೂಕಿನ ನಂಗಲಿ ಬಳಿ   ಶಾಸಕ ಮುನಿರತ್ನ ಬಂಧನವಾಗಿದೆ. ಕೋಲಾರ ಮಾರ್ಗವಾಗಿ ಆಂದ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರು ಪೊಲೀಸರು ಚೇಸ್‌ ಮಾಡಿ ಬಂಧಿಸಿದ್ದಾರೆ. ಕೋಲಾರ ಎಸ್ಪಿ ನಿಖಿಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಸ್ಕೇಪ್ ಆಗಲು ಬೇಸಿಕ್ ಮೊಬೈಲ್‌ ಖರೀದಿಸಿದ್ದ ಮುನಿರತ್ನ ಹೊಸ ನಂಬರ್ ಉಪಯೋಗಿಸಿ ತಪ್ಪಿಸಿಕೊಳ್ಳೊ ಪ್ರಯತ್ನ ಮಾಡಿದ್ದರು. ಎರಡು ಬೇಸಿಕ್ ಮೊಬೈಲ್ ಪಡೆದು ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೊರಟಿದ್ದರು. ಪೊಲೀಸರಿಗೆ ಲೊಕೇಶನ್ ಸಿಗಬಾರದು ಅಂತ ಬೇಸಿಕ್ ಮೊಬೈಲ್ ಬಳಕೆ ಮಾಡಿ ಎಸ್ಕೇಪ್‌ ಆಗಲು ಮುನಿರತ್ನ ಪ್ರಯತ್ನಿಸಿದ್ದು, ಈಗ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದತಂದಿದ್ದಾರೆ.

ಅದಾನಿ ಸಾಮ್ರಾಜ್ಯಕ್ಕೆ ಮತ್ತೊಂದು ಗರಿ, ಟೈಮ್ಸ್ ಪಟ್ಟಿಯಲ್ಲಿ ಸ್ಥಾನ, ಅಂಬಾನಿಗೆ ನಡುಕ!

ಎರಡು ಕೇಸ್‌ ಎಲ್ಲೆಲ್ಲಿ?: ಒಂದು ಗುತ್ತಿಗೆದಾರ ಚೆಲುವರಾಜುಗೆ ಬೆದರಿಕೆ ಹಣ ವಸೂಲಿ ಕೇಸ್. ಎರಡನೇ ಎಫ್ ಐಆರ್ ವೇಲು ನಾಯ್ಕರ್ ದೂರಿನ್ವಯ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗಿದೆ. ಮೊದಲ ಎಫ್ ಐಆರ್ ವೈಯಾಲಿಕಾವಲ್ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಎರಡನೇ ಎಫ್ ಐಆರ್ ಅಟ್ರಾಸಿಟಿ ಕೇಸ್ ಶೇಷಾದ್ರಿಪುರಂ ಎಸಿಪಿಗೆ ತನಿಖೆಯ ಹೊಣೆ ನೀಡಲಾಗಿದೆ.

ಬಿಬಿಎಂಪಿ ಗುತ್ತಿಗೆದಾರ ಬಿಬಿಎಂಪಿ ಗುತ್ತಿಗೆದಾರ  ಬೆದರಿಕೆ ಹಾಕಿ, ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿ  ಹಣಕ್ಕೆ ಬೇಡಿಕೆ ಇಟ್ಟ ಆಡಿಯೊ ವೈರಲ್‌ ಆಗಿತ್ತು. ಮುನಿರತ್ನ ವಿರುದ್ಧ ಗುತ್ತಿಗೆದಾರ ಚಲುವರಾಜು ಪತ್ರಿಕಾಗೋಷ್ಠಿ ನಡೆಸಿ  ಆಡಿಯೋ ಬಿಡುಗಡೆ ಮಾಡಿದ್ದರು. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದಂತೆ  ಮರ್ಡರ್ ಮಾಡುವ ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆ. 36 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಚೇರಿಗೆ ಕರೆಸಿಕೊಂಡು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.  ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಕಸದ ಗುತ್ತಿಗೆ ಟೆಂಡರ್‌ ರದ್ದುಪಡಿಸಿದ್ದಾರೆ ಎಂದು ಆರೋಪಿಸಿದ್ದರು.  ಮಾತ್ರವಲ್ಲ ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಅವರಿಗೂ ಲಿಖಿತ ದೂರು ಸಲ್ಲಿಸಿ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ನದಿಗಳೇ ಇಲ್ಲದ ಜಗತ್ತಿನ 7 ದೇಶಗಳಿವು, ನೀರಲ್ಲದೆ ಜನ ಬದುಕುತ್ತಿರುವುದು ಹೇಗೆ?

ಆಡಿಯೋದಲ್ಲಿ ಏನಿದೆ?: ಮುನಿರತ್ನ ಅವರದ್ದು ಎನ್ನುವ ವೈರಲ್ ಆದ ಆಡಿಯೋದಲ್ಲಿ ನಿರ್ದಿಷ್ಟ ಸಮುದಾಯದ ಜಾತಿ ನಿಂದನೆ ಮಾಡಲಾಗಿದೆ. ಅಶ್ಲೀಲವಾದ ಪದಗಳನ್ನು ಬಳಕೆ ಮಾಡಲಾಗಿದೆ. ಮಾತ್ರವಲ್ಲ ಚಲವರಾಜು ಅವರ ಕುಟುಂಬದ ಹೆಣ್ಣಮಕ್ಕಳ ಕುರಿತಾಗಿಯೂ  ಕೆಟ್ಟ ಬೈಗುಳದ ಮಾತುಗಳು ಇದೆ. *** ಅಂತಹ ಜಾತಿಗೆ ಸೇರಿದವನೊಂದಿಗೆ ಯಾಕೆ ಹೋಗ್ತೀಯಾ ಎಂದು ನಿಂದನೆ ಮಾತ್ರವಲ್ಲದೆ. ಹಣ ತೆಗೆದುಕೊಂಡು ಬರೋದಾದ್ರೆ ಬಾ, ನಾನು 5 ವರ್ಷ ಎಂಎಲ್‌ಎ ಆಗಿರ್ತೀನಿ, ಅಲ್ಲಿಯವರೆಗೂ ಯಾರು ಏನೂ ಮಾಡೋಕಾಗಲ್ಲ. ಬೇರೆ ಎಲ್ಲಾದರೂ ನಿನ್ನನ್ನು ಸಿಕ್ಕಿ ಹಾಕಿಸ್ತೀನಿ " ಎಂಬ ಮಾತುಗಳು ಆಡಿಯೊದಲ್ಲಿದೆ.

ನಾಲ್ವರ ವಿರುದ್ಧ ಪ್ರಕರಣ: ಘಟನೆ ಸಂಬಂಧ  ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಕೊಲೆ ಬೆದರಿಕೆ, ಜಾತಿ ನಿಂದನೆ, ಮಹಿಳೆಯರ ವಿರುದ್ದ ಅಶ್ಲೀಲ ಭಾಷೆ ಬಳಕೆ ಮಾಡಿರುವ ಆರೋಪದಡಿ ಮುನಿರತ್ನ ಜೊತೆಗೆ ಅವರ ಸಹಾಯಕರಾದ ವಿಜಿ ಕುಮಾರ್‌, ಅವರ ಭದ್ರತಾ ಸಿಬ್ಬಂದಿ ಅಭಿಷೇಕ್‌ ಹಾಗೂ ವಸಂತ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ. 

ಪ್ರಕರಣ ಸಂಬಂಧ ತನಿಖಾಧಿಕಾರಿ ಎಸಿಪಿ ಪ್ರಕಾಶ್ ಕಚೇರಿಗೆ  ಮನೋಹರ್ ನೇತೃತ್ವದ ಕಾಂಗ್ರೆಸ್ ನಿಯೋಗ ಆಗಮಿಸಿ ಮುನಿರತ್ನರನ್ನ ಕೂಡಲೇ ಬಂಧಿಸುವಂತೆ ಮನವಿ ಮಾಡಿದೆ.

ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ. ನನ್ನ ಮೇಲಿನ ಆರೋಪ ನಿರಾಧಾರ ಎಂದು ವಿಡಿಯೋ ಮೂಲಕ ಮುನಿರತ್ನ ಹೇಳಿಕೆ ನೀಡಿದ್ದರು. ದಲಿತ ಸಮಾಜದ ಜತೆಯಲ್ಲಿ ಇದ್ದವನ್ನನ್ನ ಬಳಸಿ ನನ್ನ ವಿರುದ್ಧ ಸಂಚು ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮೇಲೆ ಕೆಟ್ಟ ಮಾತಾಡಿಲ್ಲ, ದಲಿತ ಸಮುದಾಯದ ಹೆಸರು ಬಳಕೆ ಮಾಡಿಲ್ಲ. ಇಲ್ಲಿಯವರೆಗೆ ಒಕ್ಕಲಿಗ, ದಲಿತರ ಸಮುದಾಯದ ಮೇಲೆ ಮಾತಾಡೇ ಇಲ್ಲ ಎಂದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಬಂಧನವಾಗಿದೆ.

 

Latest Videos
Follow Us:
Download App:
  • android
  • ios