ಅತಿಥಿ ಶಿಕ್ಷಕರ ಕಾಯಂ: ಸಚಿವ ಕೋಟ ಹೇಳಿದ್ದಿಷ್ಟು
* ಕಾಯಂ ಮಾಡಲು ನಿಯಮಾನುಸಾರ ಅವಕಾಶ ಇಲ್ಲ
* ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿರುವ ಸಚಿವ ಕೋಟ
* ಕರ್ತವ್ಯ ನಿರ್ವಹಿಸಿದ ಅವಧಿಗೆ ವೇತನ ಪಾವತಿ
ಬೆಂಗಳೂರು(ಫೆ.19): ಸಮಾಜ ಕಲ್ಯಾಣ ಇಲಾಖೆಯ(Department of Social Welfare) ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ.
ಜೆಡಿಎಸ್(JDS) ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ನ್ಯಾಯಾಲಯದ(Court) ಆದೇಶದಂತೆ ಅತಿಥಿ ಶಿಕ್ಷಕರ(Guest Teachers) ಮನವಿ ಪರಿಶೀಲಿಸಿ, ಅತಿಥಿ ಶಿಕ್ಷಕರನ್ನು ಪೂರ್ಣ ಕಾಲಿಕ ಶಿಕ್ಷಕರನ್ನಾಗಿ ಕಾಯಂ ಗೊಳಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂದು ಹಿಂಬರಹ ನೀಡಲಾಗಿರುತ್ತದೆ ಎಂದರು.
Guest Teacher Recruitment: ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಪ್ರಸ್ತುತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 826 ವಸತಿ ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸಿತ್ತಿದ್ದು, ಇಲ್ಲಿ 2213 ಅತಿಥಿ ಶಿಕ್ಷಕರು/ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಅಡಿಯಲ್ಲಿನ ವಸತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ತಿಂಗಳಿಗೆ 10 ಸಾವಿರ ರು. ವಸತಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 12 ಸಾವಿರ ರು. ನೀಡಲಾಗುತ್ತಿದೆ. ಅವರು ಕರ್ತವ್ಯ ನಿರ್ವಹಿಸಿದ ಅವಧಿಗೆ ವೇತನ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅತಿಥಿ ಉಪನ್ಯಾಸಕರ ಅಹೋರಾತ್ರಿ ಧರಣಿ ಆರಂಭ
ಧಾರವಾಡ(Dharwad): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಅತಿಥಿ ಉಪನ್ಯಾಸಕರು ಜಂಟಿ ನಿರ್ದೇಶಕರ ಕಚೇರಿ ಎದುರು ಕಳೆದ ವರ್ಷದ ಡಿ.10 ರಂದು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ(Strike) ಪ್ರಾರಂಭಿಸಿದ್ದರು.
ನಗರದ ಕಲಾಭವನದಿಂದ ಪ್ರಾರಂಭವಾದ ಪ್ರತಿಭಟನಾ(Protest) ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಂಟಿ ನಿರ್ದೇಶಕರ ಕಚೇರಿ ತಲುಪಿತು. ಅಲ್ಲಿ ಧರಣಿ ಆರಂಭಿಸಲಾಯಿತು. ಒಕ್ಕೂಟದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ 2007ರಿಂದಲೂ ಸರ್ಕಾರಕ್ಕೆ ಒತ್ತಾಯಿಸುತ್ತಿದೆ. ಆದರೆ, ಸರ್ಕಾರ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದರು.
ನಿಯಮಗಳಂತೆ ಅತಿಥಿ ಉಪನ್ಯಾಸಕರು(Guest lecturers) ಯುಜಿಸಿ ಪರೀಕ್ಷೆ (ನೆಟ್-ಸೆಟ್) ಮತ್ತು ಪಿಎಚ್‌ಡಿ ಪದವಿ ಹೊಂದಿದ್ದರೂ, ಕೇವಲ . 12ರಿಂದ . 14 ಸಾವಿರ ವೇತನ ನೀಡುತ್ತಿದೆ. ಇಂದಿನ ದುಬಾರಿ ಕಾಲದಲ್ಲಿ ಈ ಸಂಬಳದಲ್ಲಿ ಉಪನ್ಯಾಸಕರು ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.
ಅತಿಥಿ ಉಪನ್ಯಾಸಕ ತಾತ್ಕಾಲಿಕ ಎಂಬುದು ಅವೈಜ್ಞಾನಿಕ. ಇದು ಉನ್ನತ ಶಿಕ್ಷಣ, ಕಾಲೇಜುಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಗೌರವ ಧನದ ಅರೇಕಾಲಿಕ ಬದಲಿಗೆ ಪೂರ್ಣ ಸೇವಾ ಅವಧಿ ನಿಗದಿಪಡಿಸುವಂತೆ ಒತ್ತಾಯಿಸಿದ್ದರು.
23,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ
ಅತಿಥಿ ಉಪನ್ಯಾಸಕಿ ದಾನೇಶ್ವರಿ ಮಾತನಾಡಿ, ದೆಹಲಿ ಮತ್ತು ಹರಿಯಾಣ ಸರ್ಕಾರ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿದೆ. ಅವುಗಳಂತೆ ಸಚಿವ ಸಂಪುಟದಲ್ಲಿ ಶಾಶ್ವತ ಪರಿಹಾರಕ್ಕೆ ದೃಢ ನಿರ್ಧಾರ ಕೈಗೊಳ್ಳಬೇಕು. ಮುಖ್ಯವಾಗಿ ಸೇವಾ ಭದ್ರತೆ, ವೇತನ ಬಿಡುಗಡೆಗೆ ಒತ್ತಾಯಿಸಿದರು. ಈ ಹಿಂದೆ ಅತಿಥಿ ಶಿಕ್ಷಕರು, ಅರೆಕಾಲಿಕ ಶಿಕ್ಷಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿವಿಧ ಇಲಾಖೆ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಆರೋಗ್ಯ ನೌಕರರು, ಗ್ರಾಮ ಪಂಚಾಯಿತಿ ನೌಕರರನ್ನು ಕಾಯಂಗೊಳಿಸಿದೆ. ಅದರಂತೆ ಅತಿಥಿ ಉಪನ್ಯಾಸಕರಿಗೆ ಕಾಯಂಗೊಳಿಸುವಂತೆ ಆಗ್ರಹಿಸಿದ್ದರು.
ಡಾ. ನಾಗರಾಜ ಯಮನೂರ, ಡಾ. ಬಿ.ಎಂ. ಕಾಳಣ್ಣನವರ, ಡಾ. ಸಿ.ಜಿ. ಹೊಂಕಣ್ಣವರ, ಸತರೆಡ್ಡಿ, ಡಾ. ಮಲ್ಲಿಕಾರ್ಜುನ ಬೂದನಗೌಡರ, ಮಲ್ಲೇಶ ಅಂಗಡಿ, ದಿವ್ಯಾ ಪರಾಂಗ, ವಿಜಯಲಕ್ಷ್ಮೀ ಜೋಶಿ, ಶಂಕ್ರಮ್ಮ ಸೇರಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಇದ್ದರು.