ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಭರ್ತಿಗೆ ಆಸಕ್ತ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು(ಡಿ.2):  ಉದ್ಯೋಗ ಅರಸುತ್ತಿರುವವರಿಗೆ ಸಿಹಿ ಸುದ್ದಿ, ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯ (Karnataka State Police) ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ಒಟ್ಟು 16 ವೈಜ್ಞಾನಿಕ ಅಧಿಕಾರಿ (Scientific Officer) ಹುದ್ದೆಗಳು ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಸೆಂಬರ್ 30 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ (Offline) ಮೂಲಕ ಅರ್ಜಿ ಹಾಕಬೇಕು. ಜನವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ fslab21.ksponline.co.in ಗೆ ಭೇಟಿ ನೀಡಬಹುದು.

ಹುದ್ದೆಯ ಮಾಹಿತಿ:
ಭೌತಶಾಸ್ತ್ರ (Physics ) ಸೆಕ್ಷನ್-2
ಡಿಎನ್​ಎ (Deoxyribonucleic acid) ಸೆಕ್ಷನ್​-4
ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್-2
ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್-2
ಆಡಿಯೋ ವಿಡಿಯೋ ಫಾರೆನ್ಸಿಕ್​ ಸೆಕ್ಷನ್​-2
ವಿಷ ವಿಜ್ಞಾನ (Toxicology) ಸೆಕ್ಷನ್​-2
ಜೀವಶಾಸ್ತ್ರ (Biology) ಸೆಕ್ಷನ್-2

KSP Recruitment 2022: ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ: ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ. 55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಎಂ.ಟೆಕ್​ ಪೂರ್ಣಗೊಳಿಸಿರಬೇಕು.

ಫಿಜಿಕ್ಸ್​ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಭೌತಶಾಸ್ತ್ರ/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಡಿಎನ್​ಎ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಬಾಟನಿ/ಜೂಯಾಲಜಿ/ ಬಯೋ ಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಲೈಫ್​ ಸೈನ್ಸಸ್​/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್, ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್ ಮತ್ತು ಆಡಿಯೋ ವಿಡಿಯೋ ಫಾರೆನ್ಸಿಕ್​ ಸೆಕ್ಷನ್ ಅರ್ಜಿ ಸಲ್ಲಿಸುವವರು ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್​/ ಫಿಜಿಕ್ಸ್​/ ಫಾರೆನ್ಸಿಕ್​ ಸೈನ್ಸ್​​/ ಇನ್ಫರ್ಮೇಶನ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್/ಇನ್ಫರ್ಮೇಶನ್ ಸೈನ್ಸ್​​ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.
ಟಾಕ್ಸಿಕೋಲಾಜಿ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಕೆಮಿಸ್ಟ್ರಿ/ ಫಾರ್ಮಾಕಾಲಜಿ/ ಬಯೋ ಕೆಮಿಸ್ಟ್ರಿ/ ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಬಯೋಲಾಜಿ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಬಾಟನಿ/ಜೂಯಾಲಜಿ/ಬಯೋ ಕೆಮಿಸ್ಟ್ರಿ/ ಲೈಫ್​​ ಸೈನ್ಸ್​/ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

KSP Recruitment 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕೊಟ್ಟ ಕರ್ನಾಟಕ, ಇಂದೇ ಅರ್ಜಿ ಸಲ್ಲಿಸಿ

ಅನುಭವ: ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್​ ಸ್ಕಾಲರ್​​ ಆಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಸಂಶೋಧನಾ ಅನುಭವವನ್ನು ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯ ವಯಸ್ಸು 28/01/2022 ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸುವ SC/ST/Cat-I ಅಭ್ಯರ್ಥಿಗಳಿಗೆ 05 ವರ್ಷ ಮತ್ತು OBC (Cat-2A/2B/3A/3B) ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ ವಿವರ: SC/ST/Cat-I ಅಭ್ಯರ್ಥಿಗಳು: 100 ರೂ., ಸಾಮಾನ್ಯ ಮತ್ತು OBC ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಆನ್‌ಲೈನ್ ಅಥವಾ ನಗದು ಮೂಲಕ ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ ಜನವರಿ 31 ,2022

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,900-78,200 ರೂ ವೇತನ ದೊರೆಯಲಿದೆ. ಮತ್ತು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ : rec21.ksp-online.in/ ಅಥವಾ fslab21.ksponline.co.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.