ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು, ಪಾಸ್ ಆದ್ಮೇಲೂ ನೇಮಕಾತಿ ಪತ್ರ ಕೈ ಸೇರೋದು ಅನುಮಾನ. ಅದೇ ಕೆಲ್ಸಕ್ಕೆ ನೀವು ಕಾಯ್ತಾ ಕುಳಿತ್ರೆ ವಯಸ್ಸಾಗುತ್ತೆ. ಪಾಪ, ಕೇರಳದ ವ್ಯಕ್ತಿಗೂ ಆಗಿದ್ದೇನು ಗೊತ್ತಾ?
ಸರ್ಕಾರಿ ಕೆಲ್ಸ ಸಿಗ್ಲಿ ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ ವರ್ಷಪೂರ್ತಿ ಕಾಯ್ತಾರೆ. ಸರ್ಕಾರಿ ಕೆಲ್ಸ ಸಿಕ್ಕಿದ್ರೆ ಅದರ ಖುಷಿಯೇ ಬೇರೆ. ಆದ್ರೆ ಗವರ್ನಮೆಂಟ್ ಕೆಲ್ಸ ಸಿಗೋದು ಸುಲಭ ಅಲ್ಲ. ಬರೀ ಒಂದೋ ಎರಡೋ ವರ್ಷ ಕಾಯೋದು ಸಾಮಾನ್ಯ ಬಿಡಿ. ಆದ್ರೆ 2008ರಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕೆಲಸದ ಕರೆ ಬಂದ ವರ್ಷ ಕೇಳಿದ್ರೆ ನೀವು ದಂಗಾಗ್ತೀರಿ.
18 ವರ್ಷದ ನಂತ್ರ ಬಂತು ನೇಮಕಾತಿ ಪತ್ರ
ಘಟನೆ ನಡೆದಿರುವುದು ಕೇರಳ (Kerala)ದಲ್ಲಿ. ಮಲಪ್ಪುರಂ ಜಿಲ್ಲೆಯ ಕಾಳಿಕಾವು ನಿವಾಸಿ ಅಬ್ದುಲ್ ಮಜೀದ್ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಮಜೀದ್ 2005 ರಲ್ಲಿ ಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅವರು ಆಯ್ಕೆಯಾದ ರ್ಯಾಂಕಿಂಗ್ ಪಟ್ಟಿ 2008 ರಲ್ಲಿ ಮುಕ್ತಾಯಗೊಂಡಿತ್ತು. ಆದ್ರೆ ಅವರಿಗೆ ಯಾವುದೇ ನೇಮಕಾತಿ ಪತ್ರ ಬಂದಿರಲಿಲ್ಲ. 18 ವರ್ಷಗಳ ನಂತ್ರ ಕಳೆದ ತಿಂಗಳು ಕೇರಳ ಸಾರ್ವಜನಿಕ ಸೇವಾ ಆಯೋಗದಿಂದ (ಪಿಎಸ್ಸಿ) ನೇಮಕಾತಿ ಪತ್ರ ಬಂದಿದೆ. ಇದನ್ನು ನೋಡಿದ ಅಬ್ದುಲ್ ಮಜೀದ್ ದಂಗಾಗಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ
ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆಯನ್ನು ಮಜೀದ್ ಹೊಂದಿದ್ದರು. ರ್ಯಾಂಕಿಂಗ್ ಪಟ್ಟಿಯಲ್ಲಿ ಹೆಸರು ಬಂದಾಗಿನಿಂದ್ಲೂ ಅವರು ನೇಮಕಾತಿಗಾಗಿ ಕಾಯ್ತಿದ್ದರು. ಆದ್ರೆ ವರ್ಷಗಳಾದ್ರೂ ಯಾವುದೇ ನೇಮಕಾತಿ ಪತ್ರ ಕೈ ಸೇರಿರಲಿಲ್ಲ. ಇದ್ರಿಂದ ಮಜೀದ್ ನಿರಾಸೆಗೊಂಡಿದ್ದರು. ಕೆಲಸ ಸಿಗುವ ಆಸೆಯನ್ನು ಬಿಟ್ಟಿದ್ದರು.
ಇಷ್ಟು ವರ್ಷದ ನಂತ್ರ ನೇಮಕಾತಿ ಪತ್ರ ಕೈಸೇರಿದ್ರೂ ಮಜೀದ್ ಅವರಿಗೆ ಕೆಲ್ಸ ಮಾಡಲು ಸಾಧ್ಯವಿಲ್ಲ. ಅವರ ಬಹುದಿನದ ಕನಸು ಕನಸಾಗೇ ಉಳಿಯಲಿದೆ. ಕೆಲ್ಸ ಮಾಡುವ ಎಲ್ಲ ಅರ್ಹತೆಯನ್ನು ಅವರು ಕಳೆದುಕೊಂಡಿದ್ದಾರೆ. ನಿಯಮದ ಪ್ರಕಾರ, ನೇಮಕಾತಿ ಪತ್ರ ಕೈಸೇರಿದ ಮೇಲೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಮೂರು ತಿಂಗಳೊಳಗೆ ಸೇವೆಗೆ ಸೇರಬೇಕು. ಆದ್ರೆ ಮಜೀದ್ ದಾಖಲೆ ಪ್ರಕಾರ ಅವರು ಕ ಮೇ 27, 1966 ರಂದು ಜನಿಸಿದ್ದಾರೆ. ಅಂದ್ರೆ ಅವರ ವಯಸ್ಸು 60 ವರ್ಷ ದಾಟಿದೆ. ಹಾಗಾಗಿ ಅವರು ನೇಮಕಾತಿಗೆ ಅನರ್ಹರಾಗಿದ್ದಾರೆ. ಈ ಬಗ್ಗೆ ಮಜೀದ್ ಬೇಸರ ವ್ಯಕ್ತಪಡಿಸಿದ್ದಾರೆ.
Job: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
ಈ ವಿವಾದ ಇಲಾಖೆಗಳು ಮತ್ತು PSC ನಡುವಿನ ನೇಮಕಾತಿ ಸಮನ್ವಯದಲ್ಲಿನ ವ್ಯವಸ್ಥಿತ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಖಾಲಿ ಹುದ್ದೆಗಳನ್ನು ವರದಿ ಮಾಡುವಲ್ಲಿನ ವಿಳಂಬ, ಅಪೂರ್ಣ ಸಂವಹನ ಮತ್ತು ಆಡಳಿತಾತ್ಮಕ ಕಾರ್ಯಗಳ ಕೊರತೆಯು ನೇಮಕಾತಿ ಪ್ರಕ್ರಿಯೆಯು ವರ್ಷಗಳವರೆಗೆ ಬಗೆಹರಿಯದೆ ಉಳಿಯಲು ಕಾರಣವಾದ ಅಂಶಗಳಾಗಿ ಉಲ್ಲೇಖಿಸಲಾಗಿದೆ.


