Asianet Suvarna News Asianet Suvarna News

ಕರ್ನಾಟಕ ಹೈಕೋರ್ಟ್ ನೇಮಕಾತಿ, 14 ಜಿಲ್ಲಾ ನ್ಯಾಯಾಧೀಶರ ಹುದ್ದೆ ಭರ್ತಿಗೆ ಅಧಿಸೂಚನೆ

ಕರ್ನಾಟಕ ಹೈಕೋರ್ಟ್​​ನಲ್ಲಿ  ಖಾಲಿ ಇರುವ   ಒಟ್ಟು 14 ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ  ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

Karnataka High Court Recruitment 2023 Notification for District Judge post gow
Author
First Published Oct 28, 2023, 4:41 PM IST | Last Updated Oct 28, 2023, 4:41 PM IST

ಬೆಂಗಳೂರು (ಅ.28): ಕರ್ನಾಟಕ ಹೈಕೋರ್ಟ್​​ನಲ್ಲಿ (Karnataka High Court) ಖಾಲಿ ಇರುವ   ಒಟ್ಟು 14 ಜಿಲ್ಲಾ ನ್ಯಾಯಾಧೀಶರ (District Judge) ಹುದ್ದೆಗೆ  ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

ನವೆಂಬರ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸ ಸಿಗಲಿದೆ. 

ಬಿಇಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರೊಬೇಷನರಿ ಎಂಜಿನಿಯರ್‌, ಅಧಿಕಾರಿಗಳ ನೇಮಕಾತಿ, 12 ಲಕ್ಷ ವೇತನ!

ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ, ಎಲ್​ಎಲ್​ಬಿ ಪೂರ್ಣಗೊಳಿಸಿರಬೇಕು.

ಇದರ ಜೊತೆಗೆ ನಿಯಮದಂತೆ ನವೆಂಬರ್ 17, 2023ಕ್ಕೆ ಲೆಕ್ಕಾಚಾರವಾಗುವಂತೆ ಗರಿಷ್ಠ 45 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ ಇರಲಿದೆ.

ಅರ್ಜಿ ಸಲ್ಲಿಸುವಾಗ ಪೂರ್ವಭಾವಿ ಪರೀಕ್ಷಾ  ಶುಲ್ಕವಾಗಿ SC/ST/ಪ್ರವರ್ಗ-I ಅಭ್ಯರ್ಥಿಗಳು 500 ರೂ, ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು 1000 ರೂ  ಶುಲ್ಕ ಪಾವತಿ ಮಾಡಬೇಕು.

ಭಾರತ್ ಅರ್ಥ್ ಮೂವರ್ಸ್ ನರ್ಸ್, ಡಿಫೆನ್ಸ್, ಏರೋಸ್ಪೇಸ್, ಇಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮುಖ್ಯ ಪರೀಕ್ಷಾ ಶುಲ್ಕವಾಗಿ  SC/ST/ಪ್ರವರ್ಗ-I ಅಭ್ಯರ್ಥಿಗಳು 750 ರೂ, ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು 1500 ರೂ  ಶುಲ್ಕ ಪಾವತಿ ಮಾಡಬೇಕು. ಈ ಎಲ್ಲಾ ಬಗೆಯ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. 

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 17 ಆಗಿದ್ದು, ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ ನವೆಂಬರ್ 18 ಆಗಿದೆ. ಹೆಚ್ಚಿನ ಮಾಹಿತಿಗೆ https://karnatakajudiciary.kar.nic.in/ ಈ ಅಧಿಕೃತ ವೆಬ್‌ ತಾಣಕ್ಕೆ ಭೇಟಿ ನೀಡಿ.

Latest Videos
Follow Us:
Download App:
  • android
  • ios