ಬಿಇಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರೊಬೇಷನರಿ ಎಂಜಿನಿಯರ್, ಅಧಿಕಾರಿಗಳ ನೇಮಕಾತಿ, 12 ಲಕ್ಷ ವೇತನ!
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ಪ್ರೊಬೇಷನರಿ ಎಂಜಿನಿಯರ್, ಪ್ರೊಬೇಷನರಿ ಆಫೀಸರ್, ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ಪ್ರೊಬೇಷನರಿ ಎಂಜಿನಿಯರ್, ಪ್ರೊಬೇಷನರಿ ಆಫೀಸರ್, ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಿಲಿಟರಿಯ ಪ್ರದೇಶಗಳಿಗೆ ಸಂವಹನ, ರಾಡಾರ್‌ಗಳು, ನೇವಲ್ ಸಿಸ್ಟಮ್ಸ್, ವೆಪನ್ ಸಿಸ್ಟಮ್ಸ್, ಹೋಮ್‌ಲ್ಯಾಂಡ್ ಸೆಕ್ಯುರಿಟಿ, ಕಾರ್ಯತಂತ್ರದ ಸಂವಹನ ಮತ್ತು ಮಾನವರಹಿತ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ವಾರ್ಫೇರ್, ಟ್ಯಾಂಕ್ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೋ ಆಪ್ಟಿಕ್ಸ್ ಹೀಗೆ 350 ಕ್ಕೂ ಹೆಚ್ಚು ವಿಭಿನ್ನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದು, ಇಲ್ಲಿ ಖಾಲಿ ಇರುವ ಪ್ರೊಬೇಷನರಿ ಎಂಜಿನಿಯರ್, ಪ್ರೊಬೇಷನರಿ ಆಫೀಸರ್, ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಎಂಜಿನಿಯರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ
ಹುದ್ದೆಯ ವಿವರ ಇಂತಿದೆ
- ಪ್ರೊಬೇಷನರಿ ಎಂಜಿನಿಯರ್- 205 ಹುದ್ದೆ
- ಪ್ರೊಬೇಷನರಿ ಅಧಿಕಾರಿ- 12 ಹುದ್ದೆ
- ಪ್ರೊಬೇಷನರಿ ಅಕೌಂಟ್ಸ್ ಆಫೀಸರ್- 15 ಹುದ್ದೆ
ಪ್ರಮುಖ ದಿನಾಂಕಗಳು
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04-10-2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-10-2023
ಅರ್ಜಿ ಶುಲ್ಕಎಷ್ಟು?
- ಸಾಮಾನ್ಯ / ಒಬಿಸಿ (ಎನ್‌ಸಿಎಲ್) / ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ: ರೂ. 1000
- ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.
ವಯಸ್ಸಿನ ಮಿತಿ (01-09-2023 ರಂತೆ)
- ಸಾಮಾನ್ಯ/ಇಡಬ್ಲ್ಯೂಎಸ್ (ಪ್ರೊಬೇಷನರಿ ಇಂಜಿನಿಯರ್ ಮತ್ತು ಪ್ರೊಬೇಷನರಿ ಆಫೀಸರ್) ಗೆ ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು
- ಸಾಮಾನ್ಯ/ಇಡಬ್ಲ್ಯೂಎಸ್ (ಪ್ರೊಬೇಷನರಿ ಅಕೌಂಟ್ಸ್ ಆಫೀಸರ್)ಗೆ ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು.
- ವೇತನ ಶ್ರೇಣಿ: ರೂ 40,000- 1,40,000 ( ಸಿಟಿಸಿ 12 ಲಕ್ಷ- 12.5 ಲಕ್ಷ)
ಶೈಕ್ಷಣಿಕ ವಿದ್ಯಾರ್ಹತೆ
1. ಪ್ರೊಬೇಷನರಿ ಇಂಜಿನಿಯರ್ ಹುದ್ದೆಗೆ: ಸಾಮಾನ್ಯ / ಒಬಿಸಿ (ಎನ್‌ಸಿಎಲ್) / ಇಡಬ್ಲ್ಯೂಎಸ್ ಅಭ್ಯರ್ಥಿಗಳು ಎಐಸಿಟಿಇ ಅನುಮೋದಿತ ಕಾಲೇಜುಗಳಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ / ಸಂವಹನ /ದೂರಸಂಪರ್ಕ / ಮೆಕ್ಯಾನಿಕಲ್ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಷಯಗಳಲ್ಲಿ ಬಿ ಇ/ ಬಿ ಟೆಕ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದಿರಬೇಕು.
2. ಪ್ರೊಬೇಷನರಿ ಆಫೀಸರ್ (ಎಚ್ ಆರ್) ಹುದ್ದೆಗೆ : ಸಾಮಾನ್ಯ / ಒಬಿಸಿ (ಎನ್‌ಸಿಎಲ್) / ಇಡಬ್ಲ್ಯೂಎಸ್ ಅಭ್ಯರ್ಥಿಗಳು ಎಐಸಿಟಿಇ ಅನುಮೋದಿತ ಕಾಲೇಜುಗಳಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಎರಡು ವರ್ಷಗಳ ಎಂ ಬಿ ಎ/ ಎಂ ಎಸ್ ಡ್ಬ್ಲೂ ಪದವಿ / ಸ್ನಾತಕೋತ್ತರ ಪದವಿ ಪಡೆದಿರಬೇಕು.
3. ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ ಹುದ್ದೆಗೆ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ / ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾ ದಿಂದ ನಡೆಸುವ ಸಿ ಎ/ ಸಿ ಎಂ ಎ ಪದವಿಯನ್ನು ಪಡೆದಿರಬೇಕು.
ಭಾರತ್ ಅರ್ಥ್ ಮೂವರ್ಸ್ ನರ್ಸ್, ಡಿಫೆನ್ಸ್, ಏರೋಸ್ಪೇಸ್, ಇಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆಯ ವಿಧಾನ
ಲಿಖಿತ ಪರೀಕ್ಷೆ : ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೂ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಸಂದರ್ಶನ
1. ಸಾಮಾನ್ಯ / ಒಬಿಸಿ (ಎನ್‌ಸಿಎಲ್) / ಇಡಬ್ಲ್ಯೂಎಸ್ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಶೇಕಡಾ 35 ಕನಿಷ್ಠ ಅಂಕಗಳನ್ನು ಹಾಗೂ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳು ಶೇಕಡಾ 30 ಕನಿಷ್ಠ ಅಂಕಗಳನ್ನು ಪಡೆಯಬೇಕು.
2. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅಂತಿಮ ಪಟ್ಟಿ
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಎರಡರಲ್ಲೂ ಅಭ್ಯರ್ಥಿಯ ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆ ಪಟ್ಟಿ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರ ಎಲ್ಲಿವೆ?
ಲಿಖಿತ ಪರೀಕ್ಷೆಯನ್ನು ಭಾರತದಾದ್ಯಂತ ವಿವಿಧ ರಾಜ್ಯಗಳ ಆಯ್ದ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಪರೀಕ್ಷಾ ಕೇಂದ್ರಗಳಾಗಿವೆ.
ಪ್ರಮುಖ ಸೂಚನೆಗಳು
1) ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
2) ಸೇವಾ ಒಪ್ಪಂದ: ಆಯ್ಕೆಯಾದ ಅಭ್ಯರ್ಥಿಗಳು 6 ತಿಂಗಳ ಅವಧಿಗೆ ಓರಿಯಂಟೇಶನ್ / ತರಬೇತಿ ಪಡೆಯಬೇಕು. ನಂತರ 3 ವರ್ಷಗಳ ಅವಧಿಗೆ ಕಂಪನಿಗೆ ಸೇವೆ ಸಲ್ಲಿಸಲು ಸೇವಾ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ತರಬೇತಿಯ ನಂತರ ಬಿಇಎಲ್ ನ ಯಾವುದೇ ಘಟಕಗಳು / ಕಚೇರಿಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಸೇವಾ ಒಪ್ಪಂದದ ಉಲ್ಲಂಘನೆ ಮಾಡಿದ್ದಲ್ಲಿ ಮೊತ್ತ ರೂ. 3,00,000 ದಂಡ ಪಾವತಿಸಬೇಕಾಗುತ್ತದೆ.
3) ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಯು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬಿಇಎಲ್‌ನ ವೆಬ್‌ಸೈಟ್ ವೀಕ್ಷಿಸಬಹುದು.
ಸುರೇಂದ್ರ ಪೈ
ಶಿಕ್ಷಕರು, ಎಸ್ ನಿಜಲಿಂಗಪ್ಪ
ಅಂತಾರಾಷ್ಟ್ರೀಯ ಶಾಲೆ, ಹೊಸದುರ್ಗ