Asianet Suvarna News Asianet Suvarna News

ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಅ.6 ರಿಂದ ದಾಖಲಾತಿ ಪರಿಶೀಲನೆ ಆರಂಭ

  ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ-2022ರ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಪ್ರಕಟಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ  ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಅ. 6ರಿಂದ 15ರ ವರೆಗೆ ನಡೆಯಲಿದೆ.

Karnataka Graduate Teacher Recruitment 2022 Enrollment verification starts from October 6th gow
Author
First Published Oct 3, 2022, 4:13 PM IST

ಹಾವೇರಿ (ಅ.3): ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ-2022ರ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಪ್ರಕಟಿಸಲಾಗಿದೆ. ಜಿಲ್ಲೆಯ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಅಕ. 6ರಿಂದ 15ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಜರುಗಲಿದೆ. ಅ. 6ರಂದು ಕ್ರ.ಸಂ. 1ರಿಂದ 45ರ ವರೆಗೆ ಆಂಗ್ಲ ಭಾಷೆ ಶಿಕ್ಷಕರು, ಅ. 7ರಂದು 1ರಿಂದ 75, ಅ. 10ರಂದು ಕ್ರ.ಸಂ. 076ರಿಂದ 150, ಅ. 11ರಂದು 151ರಿಂದ 225ರ ವರೆಗೆ ಅ. 12ರಂದು 226ರಿಂದ 306ರ ವರೆಗೆ ಗಣಿತ, ವಿಜ್ಞಾನ (ಕನ್ನಡ) ಶಿಕ್ಷಕರು, ಅ. 13ರಂದು 01ರಿಂದ 58ರ ವರೆಗೆ ಗಣಿತ, ವಿಜ್ಞಾನ ಹಾಗೂ 1ರಿಂದ 10ರ ವರೆಗೆ ಸಮಾಜ ವಿಜ್ಞಾನ (ಉರ್ದು), ಅ. 14ರಂದು 01ರಿಂದ 64 ಸಮಾಜ ವಿಜ್ಞಾನ (ಕನ್ನಡ) ಹಾಗೂ 01ರಿಂದ 18ರ ವರೆಗೆ ಜೀವ ವಿಜ್ಞಾನ (ಉರ್ದು) ಶಿಕ್ಷಕರು ಹಾಗೂ ಅ.15 ರಂದು ಕ್ರ.ಸಂ. 01ರಿಂದ 79ರ ವರೆಗೆ ಜೀವ ವಿಜ್ಞಾನ (ಕನ್ನಡ) ಶಿಕ್ಷಕರು ಬೆಳಗ್ಗೆ 10 ಗಂಟೆಯಿಂದ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 94489 99399, 94806 95445, 94806 95444 ಸಂಪರ್ಕಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯಪುರ ಪ್ರಾಥಮಿಕ ಶಾಲಾ ಶಿಕ್ಷಕರ ದಾಖಲಾತಿ ಪರಿಶೀಲನೆ:: ಜಿಪಿಟಿಆರ್‌-2021ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಾದ ಅಭ್ಯರ್ಥಿಗಳ 1:2 ದಾಖಲಾತಿ ಪರಿಶೀಲನಾ ಕಾರ್ಯವು ಅ.06 ರಿಂದ ಅ 15ರವರೆಗೆ ನಗರದ ಉರ್ದು ಟಿ.ಟಿ.ಐ ವಿಜಯಪುರದಲ್ಲಿ ನಡೆಯಲಿದೆ. ಅ.06ರಂದು ಸಮಾಜ ಪಾಠಗಳು (ಕನ್ನಡ ಮಾಧ್ಯಮ), ಅ. 7 ರಂದು ಸಮಾಜ ಪಾಠಗಳು(ಕನ್ನಡ ಮಾಧ್ಯಮ), ಸಮಾಜ ಪಾಠಗಳು(ಉರ್ದು ಮಾಧ್ಯಮ), ಗಣಿತ ಮತ್ತು ವಿಜ್ಞಾನ (ಉರ್ದು ಮಾಧ್ಯಮ), ಜೀವ ವಿಜ್ಞಾನ(ಉರ್ದು ಮಾಧ್ಯಮ), ಅ.10ರಂದು ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ), ಅ.11ರಂದು ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ), ಅ.12ರಂದು ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ), ಅ.13 ರಂದು ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ) ಜೀವ ವಿಜ್ಞಾನ(ಕನ್ನಡ ಮಾಧ್ಯಮ), ಅ. 14ರಂದು ಜೀವ ವಿಜ್ಞಾನ(ಕನ್ನಡ ಮಾಧ್ಯಮ). ಅ.15 ರಂದು ಇಂಗ್ಲೀಷ್‌ ವಿಷಯದ ಮೇಲೆ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನಲ್ಲಿ 400 ಹುದ್ದೆಗಳ ನೇಮಕಾತಿಗೆ ಸೂಚನೆ, ಕರ್ನಾಟದ ಅಭ್ಯರ್ಥಿಗಳಿಗೂ ಹುದ್ದೆ ಮೀಸಲು

ಬಾಗಲಕೋಟೆಯಲ್ಲಿ ದಾಖಲಾತಿ ಪರಿಶೀಲನೆ: 
2021-22ನೇ ಸಾಲಿನಲ್ಲಿ ಸರಕಾರಿ ಪ್ರಾಥಿಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂಬಂಧ ರಾಜ್ಯ ಕಚೇರಿಯಿಂದ 1:2 ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ವಿಷಯವಾರು ಒಟ್ಟು 1076 ಅಭ್ಯರ್ಥಿಗಳಿದ್ದು, ಪ್ರತಿದಿನ ವಿಷಯವಾರು ಇಂತಿಷ್ಟುಅಭ್ಯರ್ಥಿಗಳ ಪರಿಶೀಲನೆ ಮಾಡುವ ಸಂಬಂಧ ವೇಳಾಪಟ್ಟಿತಯಾರಿಸಲಾಗಿದೆ. ವೇಳಾಪಟ್ಟಿಯಂತೆ ಅಕ್ಟೋಬರ 6ರಿಂದ 15ರವರೆಗೆ ಅಭ್ಯರ್ಥಿಗಳು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ ಭವನ, ರೂ. ನಂ.132, ನವನಗರ, ಬಾಗಲಕೋಟೆ ಇಲ್ಲಿಗೆ ಮೂಲ ದಾಖಲೆಗಳೊಂದಿಗೆ ಬೆಳಗ್ಗೆ 10 ಗಂಟೆಗೆ ಹಾಜರಿರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

15 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರ 1:2 ಪಟ್ಟಿ: ಸಚಿವ ಬಿಸಿ ನಾಗೇಶ್‌

ವೇಳಾ ಪಟ್ಟಿ: ಅಕ್ಟೋಬರ 6 ರಂದು ರ. ನಂ. 5085244 ರಿಂದ 5223839 (ಜೀವ ವಿಜ್ಞಾನ), 52276902 ರಿಂದ 5105449 (ಗಣಿತ, ವಿಜ್ಞಾನ(ಕೆ)), 5133820ರಿಂದ 5118300 (ಇಂಗ್ಲಿಷ), 5173420 ರಿಂದ 5223839 (ಸಮಾಜ ವಿಜ್ಞಾನ (ಕೆ)), ಅಕ್ಟೋಬರ 7ರಂದು 5140865 ರಿಂದ 5224326 (ಜೀವ ವಿಜ್ಞಾನ), 5142820 ರಿಂದ 5108892 (ಗಣಿತ, ವಿಜ್ಞಾನ (ಕೆ)), 5233055 ರಿಂದ 5153909 (ಇಂಗ್ಲೀಷ), 5107055 ರಿಂದ 5129379 (ಸಮಾಜ ವಿಜ್ಞಾನ), 5197449 ರಿಂದ 5167581 (ಜೀವ ವಿಜ್ಞಾನ), 5219910 ರಿಂದ 5083835 (ಗಣಿತ, ವಿಜ್ಞಾನ), 5210969 ರಿಂದ 5233529 (ಇಂಗ್ಲಿಷ), 5083893 ರಿಂದ 5227106 (ಸಮಾಜ ವಿಜ್ಞಾನ), 5227961 ರಿಂದ 5213056 (ಜೀವ ವಿಜ್ಞಾನ), 5153344 ರಿಂದ 5091122 (ಗಣಿತ, ವಿಜ್ಞಾನ), 5209899 ರಿಂದ 5143111 (ಸಮಾಜ ವಿಜ್ಞಾನ), 5082915 ರಿಂದ 5162258 (ಗಣಿತ, ವಿಜ್ಞಾನ), 5115006 ರಿಂದ 5142673 (ಸಮಾಜ ವಿಜ್ಞಾನ), 5181469 ರಿಂದ 5136087 (ಜೀವ ವಿಜ್ಞಾನ), 5177776 ರಿಂದ 5104725 (ಗಣಿತ, ವಿಜ್ಞಾನ), 5172462 ರಿಂದ 5184924 (ಸಮಾಜ ವಿಜ್ಞಾನ), 5179666 ರಿಂದ 5135841 (ಗಣಿತ, ವಿಜ್ಞಾನ), 5101931 ರಿಂದ 5127325 (ಸಮಾಜ ವಿಜ್ಞಾನ), 5149652 ರಿಂದ 5222353 (ಗಣಿತ, ವಿಜ್ಞಾನ).

Follow Us:
Download App:
  • android
  • ios