ಹುದ್ದೆ ನೇಮಕ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!
ಕೋರೋನಾ ಕಾರಣಕ್ಕೆ ಮಿತವ್ಯಯದತ್ತ ಹೆಜ್ಜೆ ಇಟ್ಟಿದ್ದ ಆರ್ಥಿಕ ಇಲಾಖೆಯಿಂದ ಕೊಂಚ ಸಡಿಲಿಕೆ/ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿರುವವರಿಗೆ ಆದೇಶ ನೀಡಬಹುದು./ ತಡೆಹಿಡಿದಿದ್ದ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಅನುಮತಿ/ ನೇಮಕಾತಿ ಆಗುವವರ ಸೇವಾ ಹಿರಿತನ ದೃಷ್ಟಿಯಿಂದ ಸಡಿಲಿಕೆ
ಬೆಂಗಳೂರು (ಅ.24): ಕೋರೋನಾ ಕಾರಣಕ್ಕೆ ಮಿತವ್ಯಯದತ್ತ ಹೆಜ್ಜೆ ಇಟ್ಟಿದ್ದ ಆರ್ಥಿಕ ಇಲಾಖೆ ಕೊಂಚ ಸಡಿಲಿಕೆ ನೀಡಿದೆ. ನೇಮಕಾತಿ ಆದೇಶದ ನಿರೀಕ್ಷೆಯಲ್ಲಿರುವವರಿಗೆ ಆದೇಶ ನೀಡಬಹುದು. ತಡೆಹಿಡಿದಿದ್ದ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಬಹುದು ಎಂದು ಹೇಳಿದೆ.
ಸಂದರ್ಶನಕ್ಕೆ ತೆರಳುವವರ ತಲೆಯಲ್ಲಿ ಇದೆಲ್ಲ ಇರಲಿ
ಈ ಮೂಲಕ ನೇಮಕದ ನಿರೀಕ್ಷೆಯಲ್ಲಿ ಇದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ನೇಮಕಾತಿ ಆಗುವವರ ಸೇವಾ ಹಿರಿತನ ದೃಷ್ಟಿಯಿಂದ ಸಡಿಲಿಕೆ ಸಹ ನೀಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ತಾಂತ್ರಿಕ ಸಹಾಯಕ, ಭದ್ರತಾ ರಕ್ಷಕ, ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿ ಸಂಬಂಧ ಆರಂಭಿಸಿದ್ದ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಥಗಿತ ಮಾಡಿತ್ತು.
ಕೊರೋನಾ ಕಾರಣಕ್ಕೆ ಸರ್ಕಾರ ಮಿತವ್ಯಯಕ್ಕೆ ಮೊರೆ ಹೋಗಿದೆ. ಕೊರೋನಾ ಮತ್ತು ಲಾಕ್ ಡೌನ್ ಪರಿಣಾಮ ರಾಜ್ಯದ ಬೊಕ್ಕಸದ ಮೇಲೆ ಆಗಿದ್ದು ನೆರೆ ಹಾವಳಿ ಸಹ ಗಂಭೀರ ಪರಿಣಾಮ ಬೀರಿದೆ.