ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿದ ಸರ್ಕಾರ; ಆಗಸ್ಟ್ ತಿಂಗಳಿಂದ ಹೊಸ ಸಂಬಳ ಜಾರಿ!

ರಾಜ್ಯ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆ ಆಗಿದ್ದ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಆಗ.1ರಿಂದಲೇ ಹೊಸ ವೇತನ ಜಾರಿಗೊಳಿಸುವುಸಾಗಿ ತಿಳಿಸಿದೆ.

karnataka government implementation 7th pay commission report offial order sat

ಬೆಂಗಳೂರು (ಜು.22): ರಾಜ್ಯ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ 7ನೇ ವೇತನ ಆಯೋಗ ಜಾರಿಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ.

ಹವದು, ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ.ಸುಧಾಕರ್‌ ರಾವ್ ಸಮಿತಿಯಿಂದ ಸಲ್ಲಿಸಿದ್ದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನೌಕರರ ವೇತನ ಮತ್ತು ಪಿಂಚಣಿ ಏರಿಕೆ ಕುರಿತು ಮಾಹಿತಿ ನೀಡಿದೆ. ಇತ್ತೀಚೆಗೆ ನಡೆದ ಸಚಿವ ಸಂಪುರ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಅನುಮೋದನೆ ನೀಡಲಾಗುತ್ತು. ಇದರ ಬೆನ್ನಲ್ಲಿಯೇ ಸೋಮವಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸುವ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.

ರೈತರಿಗೆ ಕಳೆದೊಂದು ವರ್ಷದಲ್ಲಿ 1,970 ಕೋಟಿ ರೂ. ಬೆಳೆ ವಿಮೆ ಪರಿಹಾರ ಕೊಡಿಸಿದ್ದೇವೆ: ಕೃಷಿ ಸಚಿವ ಚಲುವರಾಯಸ್ವಾಮಿ

7ನೇ ವೇತನ ಆಯೋಗದ ಸರ್ಕಾರಿ ಆದೇಶ ಪತ್ರದಲ್ಲಿರುವ ವಿವರಗಳು: 
ದಿನಾಂಕ 19/11/2022ರ ಸರ್ಕಾರಿ ಆದೇಶದಂತೆ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತ ತನ್ನ ವರದಿಯ ಸಂಪುಟ-1ನ್ನು ಸಲ್ಲಿಸಿರುತ್ತದೆ. 7ನೇ ರಾಜ್ಯ ವೇತನ ಆಯೋಗದ ಸಂಪುಟ-1ರ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿರುತ್ತದೆ. ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗುತ್ತದೆ.

ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 2022ರ ಜು.1ರಲ್ಲಿರುವಂತೆ ಮೂಲ ವೇತನ, ಬೆಲೆ ಸೂಚ್ಯಂಕ ಹಂತ 361.704ಕ್ಕೆ ಸಂವಾದಿಯಾಗಿ ಲಭ್ಯವಿದ್ದ ಶೇ.31 ತುಟ್ಟಿ ಭತ್ಯೆ, ಮೂಲ ವೇತನದ ಮೇಲೆ ಶೇ.27.50ರಷ್ಟು ಫಿಟ್‌ಮೆಂಟ್‌ ಸೌಲಭ್ಯ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವುದು. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಟ ದರ್ಶನ್ ಜೈಲಲ್ಲಿ ಪ್ರತಿದಿನ ಬಿರಿಯಾನಿ ತಿನ್ನೋಕಾಗಲ್ಲ, ಬೇಧಿ ಆಗಿದ್ರೆ ಸಪ್ಪೆ ಊಟ ಕೊಡಿ; ಎಸ್‌ಪಿಪಿ ಪ್ರಸನ್ನಕುಮಾರ

ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗುತ್ತದೆ. ಅದರಂತೆ, ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಪ್ರಸ್ತುತ ಮೊತ್ತವನ್ನು ಕ್ರಮವಾಗಿ ಮಾಸಿಕ ರೂ. 8,500 ಮತ್ತು ರೂ.75,300 ರಿಂದ ರೂ.13,500 ಮತ್ತು ರೂ.1,20,600 ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ ರೂ.8,500 ಮತ್ತು ರೂ. 45,180 ರಿಂದ ಮತ್ತು ರೂ.13,500 ಮತ್ತು ರೂ. 80,400ಗಳಿಗೆ ಪರಿಷ್ಕರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಅಧಿಕೃತ ಆದೇಶ ಪ್ರತಿ ಇಲ್ಲಿದೆ ನೋಡಿ...

Latest Videos
Follow Us:
Download App:
  • android
  • ios