ನಟ ದರ್ಶನ್ ಜೈಲಲ್ಲಿ ಪ್ರತಿದಿನ ಬಿರಿಯಾನಿ ತಿನ್ನೋಕಾಗಲ್ಲ, ಬೇಧಿ ಆಗಿದ್ರೆ ಸಪ್ಪೆ ಊಟ ಕೊಡಿ; ಎಸ್‌ಪಿಪಿ ಪ್ರಸನ್ನಕುಮಾರ

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಹೆಚ್ಚಿನ ಕ್ಯಾಲರಿ ಆಹಾರ ಬೇಕೆಂದು ಪ್ರತಿದಿನ ಬಿರಿಯಾನಿ ತಿನ್ನಬೇಕೆಂದರೆ ಆಗೊಲ್ಲ. ಇನ್ನು ಜೈಲಿನ ಊಟದಿಂದ ಬೇಧಿ ಆಗಿದ್ದರೆ, ಖಾರವಿಲ್ಲದ ಸಪ್ಪೆ ಊಟ ಕೊಡಬಹುದು ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.

Renuka Swamy murder Case Accused Darshan Thoogudeepa cannot eat biryani everyday says SPP Prasannakumar sat

ಬೆಂಗಳೂರು (ಜು.22): ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಹೆಚ್ಚಿನ ಕ್ಯಾಲರಿ ಆಹಾರ ಬೇಕೆಂದು ಪ್ರತಿದಿನ ಬಿರಿಯಾನಿ ತಿನ್ನಬೇಕೆಂದರೆ ಆಗೊಲ್ಲ. ಇನ್ನು ಜೈಲಿನ ಊಟದಿಂದ ಬೇಧಿ ಆಗಿದ್ದರೆ, ಖಾರವಿಲ್ಲದ ಸಪ್ಪೆ ಊಟ ಕೊಡಬಹುದು ಎಂದು ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.

ಆರೋಪಿ ದರ್ಶನ್ ತೂಗುದೀಪ ಪರ ವಕೀಲರು ನಟ ದರ್ಶನ್‌ ವಿಚಾರಣಾಧೀನ ಕೈದಿಯಾಗಿದ್ದು, ಮನೆಯಿಂದ ಊಟ, ಹಾಸಿಗೆ, ಬಟ್ಟೆ ಹಾಗೂ ಓದಲು ಪುಸ್ತಕ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ವಾದ ಮಂಡಿಸಿದ ದರ್ಶನ್ ಪರ ವಕೀಲರಾದ ರಾಘವೇಂದ್ರ ಅವರ ವಾದ ಮಂಡನೆ ನಂತರ, ಪ್ರತಿವಾದ ಆರಂಭಿಸಿದ ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನಕುಮಾರ್ ಅವರು, ಆರೋಪಿ ದರ್ಶನ್‌ಗೆ ಹೊಟ್ಟೆ ನೋವು ಇದ್ದು, ಅತಿಸಾರ ಭೇಧಿ ಎಂದು ಅರ್ಜಿಯಲ್ಲಿ ಉಲ್ಲೇಖ ‌ಮಾಡಲಾಗಿದೆ. ಅಂದರೆ, ದರ್ಶನ್ ಗೆ ಡಯೇರಿಯಾ ಆಗಿರೋದು ಸರಿಯಿದೆ. ಇನ್ನು ದರ್ಶನ್‌ಗೆ 2023ರಲ್ಲಿ ಏನೋ ಸಮಸ್ಯೆ ಇತ್ತು ಎಂದು ದಾಖಲೆ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಇರೋದು ಆರ್ಥೋಪಿಡಿಪ್ ಸಮಸ್ಯೆ. ಆಹಾರ ಸೇವನೆಗೂ ಆರ್ಥೋಪಿಡಿಕ್ ಸಮಸ್ಯೆಗೂ ಸಂಬಂಧ ಇಲ್ಲ. ಜೊತೆಗೆ ದರ್ಶನ್‌ಗೆ ವೈರಲ್ ಫೀವರ್ ಇದೆ, ಬ್ಯಾಕ್ ಪೇನ್ ಇದೆ ಎಂದು ಹೇಳಲಾಗಿದೆ. ಸರ್ವೀಸ್ ಮ್ಯಾನ್ಯೂವಲ್ ಪ್ರಕಾರ ಆಹಾರ ಹಾಗೂ ಇತರೆ ಸೌಲಭ್ಯ ನೀಡಲಾಗುತ್ತಿದೆ ಎಂದು ವಾದ ಮಂಡಿಸಿದರು.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ; ತನಿಖೆ ವೇಳೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ!

ಕರ್ನಾಟಕ ಪ್ರಿಸನ್ ರೂಲ್ಸ್ 1974 ರ ಅಡಿ ಏನೇನು ಕೊಡಬೇಕು ಎಂದು ಉಲ್ಲೇಖಿಸಲಾಗಿದೆ. ರೂಲ್ 322ರ ಪ್ರಕಾರ ಮನೆ ಊಟ ಅನ್ನೋ ಪದವೇ ಇಲ್ಲ. ಎಕ್ಸ್ಟ್ರಾ ಡಯಲ್ ಅಂದ್ರೆ ಮೆಡಿಕಲ್ ಅಫಿಸರ್ ನೀಡಬೇಕು. ಆದ್ರೆ, ಯಾವುದೇ ಎಕ್ಸ್ಟ್ರಾ ಡಯಟ್ ಗೆ ಪ್ರಿಸ್ ಕ್ರೈಬ್ ಮಾಡಿಲ್ಲ. ವೈದ್ಯಾಧಿಕಾರಿ ಸಲಹೆ ಮೇರೆಗೆ ಜೈಲು ಅಧಿಕಾರಿಗಳು ಹೆಚ್ಚು ಕ್ಯಾಲರಿ ಆಹಾರ ನೀಡಬಹುದು. ಅಂದರೆ, ವೆಜ್ ಅವರಿಗೆ ಬಾಳೆ ಹಣ್ಣು, ನಾನ್ ವೆಜ್ ಅವರಿಗೆ ಒಂದು ದಿನ ನಾನ್ ವೆಜ್ ನೀಡಲು ಅವಕಾಶ ಇದೆ. ಆದರೆ, ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ. ವೈರಲ್ ಫಿವರ್ ಅಂದ್ರೆ ಬಿಸಿನೀರು ಹೆಚ್ಚುವರಿ ಆಗಿ ನೀಡಬಹುದು. ವೈದ್ಯರ ಸಲಹೆ ಮೇರೆಗೆ ಮಾತ್ರ ಆಹಾರ ನೀಡಬಹುದು. ಉದಾಹರಣೆಗೆ ಭೇದಿ ಆಗ್ತಾ ಇದ್ರೆ, ಖಾರ ಇಲ್ಲದ ಊಟ ನೀಡಬಹುದು ಅಷ್ಟೇ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು.

ಜೈಲಿನಲ್ಲಿ ಇರುವ ಖೈದಿಗಳಿಗೆ ಅನಾರೋಗ್ಯ ಆದ್ರೆ ಆರ್ಡನರಿ ಪ್ರಿನಲ್ ಡಯಟ್ ನೀಡಬಹುದು ಅಥವಾ ಹಾಸ್ಪಿಟಲ್ ಡಯಲ್ ನೀಡಬಹುದು. ಸ್ಕೇಲ್ಸ್ ಆಪ್ ಡಯಟ್ ನಲ್ಲಿಯೇ ಆಹಾರ ಕೊಡಬಹುದು. ಸ್ಪೇಷಲ್ ಡಯಟ್ ಪ್ರತಿದಿನಕ್ಕೆ ನೀಡಲು ಸಾಧ್ಯವಿಲ್ಲ. ಜೈಲಿನಲ್ಲಿಯೇ ಯಾವುದೇ ವಿಶೇಷ ಆಹಾರ ಕೊಡುವುದಾದರೆ ಕೇವಲ 15 ದಿನ ಮಾತ್ರ. ಹಾಸಿಗೆ ವಿಚಾರದಲ್ಲಿಯೂ ಕೊಲೆ ಆರೋಪಿಗಳನ್ನ ಹೊರತುಪಡಿಸಿ ಮಾತ್ರ ಸ್ವಂತ ಬಟ್ಟೆ, ಹಾಸಿಗೆ ಅರ್ಹರು. ಇದು ಕೊಲೆ ಪ್ರಕರಣ ಆಗಿರುವುದರಿಂದ ಅವಕಾಶವೇ ಇಲ್ಲ. ಹೊರಗಿನ ಊಟ, ಹಾಸಿಗೆ, ವೈದ್ಯಕೀಯ ಸೌಲಭ್ಯಕ್ಕಾಗಿ ಕೋರಲಾಗಿದೆ. ಕನ್ನಡ ಫಿಲ್ಮ್ ಲೀಡ್ ರೋಲರ್, ಪ್ರೋಡ್ಯೂಸರ್, ದೈಹಿಕವಾಗಿ ಅಂತ್ಯಂತ ಧೃಡಕಾಯರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜೀವನದ ಹೀರೋಯಿನ್ ಪರಿಚಯಿಸಿದ ತರುಣ್ ಸುಧೀರ್, ಮದುವೆ ದಿನಾಂಕವೂ ಅನೌನ್ಸ್; ಇವರಿಬ್ಬರ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

ಅರೆಸ್ಟ್ ಆಗುವವರೆಗೂ ಜಿಮ್ ಮಾಡುತ್ತಿದ್ದರು, ಅರೆಸ್ಟ್ ಆದಮೇಲೆ ಬ್ಯಾಕ್‌ಪೇನ್ ಬಂದಿದೆ:  ಆರೋಪಿ ದರ್ಶನ್ ಕಸರತ್ತು(ಜಿಮ್) ನಡೆಸುತ್ತಿದ್ದು, ಜೈಲಿನ ಆಹಾರದ ಜೊತೆಗೆ ಡಯಟ್ ಫುಡ್ ಕೊಡಿ ಎಂದು ಕೇಳಿದ್ದಾರೆ. ಅರೆಸ್ಟ್ ಆಗುವವರೆಗೂ ಕಸರತ್ತು(ಜಿಮ್) ನಡೆಸುತ್ತಿದ್ದರು. ಅರೆಸ್ಟ್ ಆದ ಮೇಲೆ‌ಬ್ಯಾಕ್ ಪೈನ್ ಅಂತ ಹೇಳಲಾಗುತ್ತಿದೆ. ಜೂನ್ 22ರವರೆಗೂ ವ್ಯಾಯಾಮ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅಲ್ಲಿಯವರೆಗೂ ಇಲ್ಲದ ಸಮಸ್ಯೆ ಈಗ ಹೇಗೆ ಸಾಧ್ಯ. ಎಕ್ಸಸೈಸ್ ಮಾಡುತ್ತಿರುವುದರಿಂದ ತೂಕ ಕಡಿಮೆ ಆಗಿದೆ. ಸುಮಾರು 10 ಕೆಜಿ ತೂಕ ಕಡಿಮೆ ಆಗಿದೆ. ಹೀಗಾಗಿ ಎಕ್ಸ್ಟ್ರಾ ಡಯಟ್ ನೀಡಿ ಎಂದು ಕೇಳಲಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿದ್ದಾರೆ.

Latest Videos
Follow Us:
Download App:
  • android
  • ios