ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 504 ಹುದ್ದೆಗಳ ಭರ್ತಿಗೆ ಸರ್ಕಾರ ಒಪ್ಪಿಗೆ, ಕೆಎಎಸ್ ಅಧಿಕಾರಿಗಳ ನೇಮಕಾತಿ ಹೇಗೆ?
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಲ್ಲಿ 504 ಹುದ್ದೆಗಳ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ದೊರಕಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ (ಕರ್ನಾಟಕ ಆಡಳಿತ ಸೇವೆ) ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 656 ಹುದ್ದೆಗಳ ಪೈಕಿ 504 ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಲ್ಲಿ 504 ಹುದ್ದೆಗಳ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ದೊರಕಿದೆ. ಆದ್ದರಿಂದ ಇಲ್ಲಿ ಕೆಎಸ್ ಅಧಿಕಾರಿಗಳ ನೇಮಕಾತಿಯ ಬಗ್ಗೆ ಮಾಹಿತಿ ನೀಡಲಾಗಿದೆ.
ವಿಪ್ರೋ ಮಾಜಿ ಸಿಎಫ್‌ಒ ವಿರುದ್ಧ 25ಕೋಟಿ ಪರಿಹಾರ ಕೇಳಿ ಬೆಂಗಳೂರಿನಲ್ಲಿ ಕೇಸ್ ಹಾಕಿದ ಅಜೀಂ ಪ್ರೇಮ್‌ಜಿ
ವಿದ್ಯಾರ್ಹತೆ:
•ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
•ಅಭ್ಯರ್ಥಿಗಳು ಯಾವುದಾದರೂ ಪರೀಕ್ಷೆಗೆ ಹಾಜರಾಗಿದ್ದು, ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಶೈಕ್ಷಣಿಕವಾಗಿ ಅರ್ಹರಾಗುವುದಾದಲ್ಲಿ, ಆ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.
•ಗೆಜೆಟೆಡ್ ಪ್ರೊಬೇಷನರಿಗಳ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವೃತ್ತಿ ಶಿಕ್ಷಣದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಥವಾ ಇತರೆ ವೈದ್ಯಕೀಯ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಆದರೆ ಪ್ರಶಿಕ್ಷಣಾವಧಿಯನ್ನು ಪೂರೈಸದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಪರೀಕ್ಷೆಗೆ ಪ್ರವೇಶ ನೀಡಲಾಗುವುದು. ಆದರೆ, ಅವರು ಅರ್ಜಿಯ ಜೊತೆಯಲ್ಲಿ ವಿಶ್ವವಿದ್ಯಾಲಯ/ಸಂಸ್ಥೆಯ ಸಂಬಂಧಿಸಿದ ಸಕ್ಷಮ ಪ್ರಾಧಿಕಾರವು ವೈದ್ಯಕೀಯ ವೃತ್ತಿ ಪರೀಕ್ಷೆಯಲ್ಲಿ ಅಂತಿಮವಾಗಿ ಪಾಸು ಮಾಡಿರುವ ಬಗ್ಗೆ ನೀಡಿದ ಪ್ರಮಾಣ ಪತ್ರ ಪ್ರತಿಯನ್ನು ಒದಗಿಸಬೇಕಾಗುತ್ತದೆ.
ಜ. 13ಕ್ಕೆ K SET ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿದ ಕೆಇಎ, ಮಾಂಗಲ್ಯ ಸರ, ಕಾಲುಂಗುರಕ್ಕೆ ಅನುಮತಿ
ವಯೋಮಿತಿ
• ಅಭ್ಯರ್ಥಿಯು 21 ವರ್ಷ ಪೂರೈಸಿರಬೇಕು. ಈ ಕೆಳಗಿನ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
• ಸಾಮಾನ್ಯ ಅಭ್ಯಥಿಗಳಿಗೆ: 35 ವರ್ಷ
• ಪ್ರವರ್ಗ-2ಎ, 2ಬಿ, 3ಎ, 3ಬಿ: 38 ವರ್ಷ
• ಪಜಾ/ಪಪಂ/ಪ್ರ-1 40 ವರ್ಷ (ಮಾಜಿ ಸೈನಿಕ ಇತ್ಯಾದಿ ಇತರ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ಇದೆ).
ರಾಷ್ಟ್ರೀಯತೆ
• ಕೆಎಎಸ್ ಪರೀಕ್ಷೆಗೆ ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಹೊರಗಿನ ಅಭ್ಯರ್ಥಿಗಳೂ ಈ ಪರೀಕ್ಷೆಗೆ ಅರ್ಹರು. ಕನ್ನಡದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು.
ಪ್ರಯತ್ನಗಳು
ಸಾಮಾನ್ಯ ಅಭ್ಯರ್ಥಿಗೆ ಈ ಪರೀಕ್ಷೆ ಬರೆಯಲು ಐದು ಬಾರಿ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗೆ ಏಳು ಬಾರಿ ಮಾತ್ರ ಅವಕಾಶವಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರಯತ್ನಗಳ ಮಿತಿ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ಪ್ರಯತ್ನವನ್ನು ಒಂದು ಅವಕಾಶವೆಂದು ಪರಿಗಣಿಸಲಾಗುವುದು.
ಆಯ್ಕೆ ವಿಧಾನ
ಆಯ್ಕೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ.
1. ಪೂರ್ವಭಾವಿ ಪರೀಕ್ಷೆ (ಪ್ರಿಲಿಮಿನರಿ ಎಕ್ಸಾಮ್).
2. ಮುಖ್ಯ ಪರೀಕ್ಷೆ (ಮೇನ್ಸ್ ಎಕ್ಸಾಮ್)
3. ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ
ಪ್ರಿಲಿಮ್ಸ್:
ಪ್ರಿಲಿಮ್ಸ್ ಸುತ್ತಿನಲ್ಲಿ ಪತ್ರಿಕೆ-1ರಲ್ಲಿ 200 ಅಂಕಗಳ 100 ಪ್ರಶ್ನೆಗಳು ಹಾಗೂ ಪತ್ರಿಕೆ-2 ಕ್ಕೆ 100 ಪ್ರಶ್ನೆಗಳ 200 ಅಂಕಗಳ ಪ್ರಶ್ನೆಪತ್ರಿಕೆ ಇರುತ್ತದೆ. ಪರೀಕ್ಷಾ ಅವಧಿ ಎರಡು ಗಂಟೆ. ಒಂದು ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಅಂಕ ಕೂಡ ಇರುತ್ತದೆ.
• ಪೇಪರ್1: ಪೇಪರ್ 1 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಗ್ಗೆ 40 ಪ್ರಶ್ನೆಗಳನ್ನು, 60 ಮಾನವಿಕ ವಿಷಯದ ಪ್ರಶ್ನೆಗಳನ್ನು ಹೊಂದಿರುತ್ತದೆ. ಇದು ಭಾರತೀಯ ಇತಿಹಾಸ, ಪ್ರಚಲಿತ ವಿದ್ಯಮಾನಗಳು, ವಿಶ್ವ ಮತ್ತು ಭಾರತೀಯ ಭೌಗೋಳಿಕತೆ, ಭಾರತೀಯ ಆರ್ಥಿಕತೆ ಮತ್ತು ರಾಜಕೀಯ ಮತ್ತು ಕೆಲವು ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿರುತ್ತದೆ.
• ಪೇಪರ್ 2: ಇದರಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹಾಗೂ ರಾಜ್ಯದ ಪ್ರಮುಖ ಪ್ರಚಲಿತ ಘಟನೆಗಳ ಬಗ್ಗೆ 40 ಪ್ರಶ್ನೆಗಳನ್ನು ಹೊಂದಿರುತ್ತದೆ. ಸಾಮಾನ್ಯ ವಿಜ್ಞಾನದಲ್ಲಿ 30, ಮತ್ತು ಮಾನಸಿಕ ಸಾಮರ್ಥ್ಯದ ಕುರಿತು 30 ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಮುಖ್ಯ ಪರೀಕ್ಷೆ
ಕೆಎಎಸ್ ಪರೀಕ್ಷೆಯ ಎರಡನೇ ಹಂತವು ಮುಖ್ಯವಾಗಿರುತ್ತದೆ. ಪ್ರಿಲಿಮ್ಸ್ ತೇರ್ಗಡೆಯಾದವರು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಮುಖ್ಯ ಪರೀಕ್ಷೆ ಪಾಸಾದ ನಂತರ, ನೀವು ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಸಂದರ್ಶನದ ಸುತ್ತಿಗೆ ಕರೆ ಮಾಡಲು ಮುಖ್ಯ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಒಮ್ಮೆ ಸಂದರ್ಶನವನ್ನು ಪೂರ್ಣಗೊಳಿಸಿ ಮತ್ತು ನೀವು ಆಯ್ಕೆಯಾದ ನಂತರ, ನೀವು ಗ್ರೂಪ್ ಎ ಮತ್ತು ಗ್ರೂಪ್ ಬಿ ಅಧಿಕಾರಿಯಾಗಿ ನೇಮಕಾತಿ ಪತ್ರ ಪಡೆಯುವ ಮೊದಲು ತರಬೇತಿಗೆ ಒಳಪಡಿಸಲಾಗುತ್ತದೆ.
ವ್ಯಕ್ತಿತ್ವ ಪರೀಕ್ಷೆ
ವ್ಯಕ್ತಿತ್ವ ಪರೀಕ್ಷೆಯು ಗರಿಷ್ಠ 200 ಅಂಕಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿತ್ವ ಪರೀಕ್ಷೆಯು ಅಭ್ಯರ್ಥಿಗಳ ವೈಯಕ್ತಿಕ ಗುಣಮಟ್ಟ ಮತ್ತು ಸಿವಿಲ್ ಸೇವೆಗಳಿಗೆ ಸೂಕ್ತರೇ ಎಂಬ ಬಗ್ಗೆ ಅಂದರೆ ನಾಯಕತ್ವದ ಗುಣ, ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ, ವಿವಿಧ ವಿಷಯಗಳಲ್ಲಿ ಆಳವಾದ ಆಸಕ್ತಿ, ಒಂದು ಗುಂಪಿನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಪ್ರೇರಣಾ ಕೌಶಲ್ಯ ಹಾಗೂ ತಾರ್ಕಿಕ ಯೋಚನಾ ಸಾಮರ್ಥ್ಯಗಳ ಬಗ್ಗೆ ನಿರ್ಧರಿಸುತ್ತದೆ. (ಕೆಎಎಸ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ ನಂತರ ಸಂಪೂರ್ಣ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು).