KKRTC Recruitment 2022: ಕಲ್ಯಾಣ ಕರ್ನಾಟಕ ಸಾರಿಗೆಯ ವಿವಿಧ ವಿಭಾಗಕ್ಕೆ ಅರ್ಜಿ ಆಹ್ವಾನ
ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಬೆಂಗಳೂರು (ಸೆ.16): ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ನೇಮಕಾತಿ ನಡೆಸುವ ಉದ್ದೇಶದಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹುದ್ದೆಗಳು ಮೇಲ್ವಿಚಾರಕರ ವಿಭಾಗದಲ್ಲಿ ಆಗಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದಕ್ಕೆ ಬೇಕಾದಂತಹ ನೇಮಕಾತಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ನಿಗಮವು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ದರ್ಜೆ 3ರ ಹಿಂಬಾಕಿ ಪೇದೆ ಹುದ್ದೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭರ್ತಿಗೊಳಿಸಲಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸರಿಯಾದ ದಾಖಲೆಗಳನ್ನು ಲಗತ್ತಿಸಬೇಕಿದೆ. ಉದ್ಯೋಗವು ಎಸ್‌ಸಿ,ಎಸ್ಟಿಗಳಿಗೆ ಮಾತ್ರ ಮೀಸಲಾಗಿದೆ. ಅಭ್ಯರ್ಥಿಯು ಕನಿಷ್ಠ ಪಿಯುಸಿಯನ್ನು ಪೂರ್ಣಗೊಳಿಸಿರಬೇಕಿದೆ. ಅರ್ಜಿಗಳ ಜೊತೆಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಚಾಲ್ತಿಯಲ್ಲಿರುವ ನಮೂನೆಗಳ ಪರಿಶಿಷ್ಟಜಾತಿ/ಪರಿಶಿಷ್ಟಪಂಗಡಕ್ಕೆ ಸಂಬಂಧಿಸಿದ ದಾಖಲೆಯನ್ನು ಲಗತ್ತಿಸಬೇಕು. ಅಭ್ಯರ್ಥಿಯ ವಯಸ್ಸು ಕನಿಷ್ಠ 18 ಆಗಿರಬೇಕಿದ್ದು, ಗರಿಷ್ಠ ಎಂದರೆ 40 ಮೀರಿರಬಾರದು. ಅರ್ಜಿ ಶುಲ್ಕವಾಗಿ 300 ರು. ನಿಗದಿ ಮಾಡಲಾಗಿದ್ದು, ಅಭ್ಯರ್ಥಿಯ ಆಯ್ಕೆ ಮೆರಿಟ್ ಹಾಗೂ ದಾಖಲೆಗಳ ಪರಿಶೀಲನೆ ಆಧಾರದಲ್ಲಿ ನಡೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ 9,100 ರು. ಹಾಗೂ ಪರೀಕ್ಷಾರ್ಥ ಸೇವಾವಧಿಯಲ್ಲಿ 11,640 ರು. ಇಂದ 15,700 ರು. ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಕೆಗೆ ಸೆ.30ರ ತನಕ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ತಾಣ https://kkrtc.karnataka.gov.in/ ಗೆ ಭೇಟಿ ನೀಡಲು ಕೋರಲಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ಖಾಲಿ ಇರುವ ದರ್ಜೆ 3ರ ಹಿಂಬಾಕಿ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು, 2ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ/ ವಾಯುದಳದಲ್ಲಿ ತತ್ಸಮಾನ ದರ್ಜೆಯ ಪ್ರಮಾಣ ಪತ್ರ ಹೊಂದಿರಬೇಕು.
BHEL Recruitment 2022: ವಿವಿಧ 150 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ವೆಲ್ಡರ್, ಪೇಂಟರ್, ಎಲೆಕ್ಟ್ರಿಷಿಯನ್ 33 ಹುದ್ದೆಗಳು ಖಾಲಿ ಇದೆ:
ಆಟೋ ಮೆಕ್ಯಾನಿಕ್, ಆಟೋ ವೆಲ್ಡರ್, ಆಟೋ ಪೇಂಟರ್, ಆಟೋ ಎಲೆಕ್ಟ್ರಿಷಿಯನ್ ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು 10ನೇ, 12ನೇ ತರಗತಿ, TC/ITI/NAC, ಡಿಪ್ಲೊಮಾ, ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ ತತ್ಸಮಾನ ತೇರ್ಗಡೆಯಾಗಿರಬೇಕು. ಆಟೋ ಮೆಕ್ಯಾನಿಕ್, ಆಟೋ ವೆಲ್ಡರ್, ಆಟೋ ಪೇಂಟರ್, ಆಟೋ ಎಲೆಕ್ಟ್ರಿಷಿಯನ್ ಮತ್ತು ಇತರೆ ಹುದ್ದೆಗಳಿಗೆ 13970-26670/ ವೇತನ ದೊರೆಯಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು 18 ರಿಂದ 40 ವರ್ಷದ ಒಳಗಿರಬೇಕು. ಸರಕಾರದ ನಿಯಮಗಳ ಪ್ರಕಾರ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.
AAI RECRUITMENT 2022: ವಿಮಾನಯಾನ ಪ್ರಾಧಿಕಾರದಲ್ಲಿ ವಿವಿಧ 156 ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಲ್ಲಾ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆನ್ ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿ ಮಾಡಬೇಕು. ದಾಖಲೆಗಳ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೆರಿಟ್ ಪಟ್ಟಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.