AAI Recruitment 2022: ವಿಮಾನಯಾನ ಪ್ರಾಧಿಕಾರದಲ್ಲಿ ವಿವಿಧ 156 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ವಿಮಾನಯಾನ ಪ್ರಾಧಿಕಾರವು ಶೀಘ್ರವೇ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು,ಒಟ್ಟು 156 ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಅರ್ಜಿ ಸಲ್ಲಿಸಲು ಸೆ.30ರಂದು ಕೊನೆಯ ದಿನವಾಗಿದೆ.
ನವದೆಹಲಿ (ಸೆ.15): ಭಾರತೀಯ ವಿಮಾನಯಾನ ಪ್ರಾಧಿಕಾರವು ಶೀಘ್ರವೇ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ನೇಮಕಾತಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಕೆಳಗಡೆ ನೀಡಿದ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಮಾಹಿತಿ, ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಕ ಹೇಗೆ ಇತ್ಯಾದಿ ಮಾಹಿತಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಬಹುದಾಗಿದೆ. ವಿಮಾನಯಾನ ಪ್ರಾಧಿಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಒಟ್ಟು 156 ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಕಿರಿಯ ಸಹಾಯಕ (ಅಗ್ನಿ ಶಾಮಕ ಸೇವೆ) 132 ಹುದ್ದೆ, ಕಿರಿಯ ಸಹಾಯಕ (ಕಚೇರಿ) 10 ಹುದ್ದೆ, ಹಿರಿಯ ಸಹಾಯಕ (ಖಾತೆಗಳು)13 ಹುದ್ದೆ ಹಾಗೂ ಹಿರಿಯ ಸಹಾಯಕ (ಭಾಷೆ) 1 ಹುದ್ದೆ ಇದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಡಿಪ್ಲೊಮಾ/ಪದವಿ/ಬಿ.ಕಾಂ/ ಸ್ನಾತಕೋತ್ತರ ಪದವಿ ಆಗಿರಬೇಕು. ನಿಯಮಾನುಸಾರ ವಯೋಮಿತಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷದೊಳಗಿರಬೇಕು. ಹೆಚ್ಚಿನ ಮಾಹಿತಿ ಅಧಿಸೂಚನೆಯಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ https://www.aai.aero/ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಸೆ.30ರಂದು ಕೊನೆಯ ದಿನವಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ವಿಮಾನಯಾನ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು.
ಕಿರಿಯ ಸಹಾಯಕ (ಅಗ್ನಿ ಶಾಮಕ ಸೇವೆ) ಹುದ್ದೆಗೆ ಡಿಪ್ಲೊಮಾ ಇನ್ ಮೆಕ್ಯಾನಿಕಲ್/ಆಟೋಮೊಬೈಲ್/ಫೈರ್ ಅಥವಾ 50% ಅಂಕಗಳೊಂದಿಗೆ 12 ನೇ ಪಾಸ್ ತರಗತಿ ಪಾಸ್ ಆಗಿರಬೇಕು.
ಕಿರಿಯ ಸಹಾಯಕ (ಕಚೇರಿ) ಹುದ್ದೆಗೆ ಪದವಿ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಟೈಪಿಂಗ್ ನಲ್ಲಿ ವೇಗ ಪಡೆದಿರಬೇಕು. ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಇರಬೇಕು.
ಹಿರಿಯ ಸಹಾಯಕ (ಖಾತೆಗಳು) ಹುದ್ದೆಗೆ ಬಿ.ಕಾಂ. ಪದವೀಧರರಾಗಿರಬೇಕು. 03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್ ಮಾಡಿರಬೇಕು. ಜೊತೆಗೆ 2 ವರ್ಷಗಳ ಅನುಭವ ಇರಬೇಕು.
ಹಿರಿಯ ಸಹಾಯಕ (ಭಾಷೆ) ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಿರಬೇಕು. ಹಿಂದಿ ಭಾಷೆಯಲ್ಲಿ ಪರಿಣಿತರಾಗಿರಬೇಕು. ಜೊತೆಗೆ 2 ವರ್ಷಗಳ ಅನುಭವ ಇರಬೇಕು.
ವೇತನ ವಿವರ: ಭಾರತೀಯ ವಿಮಾನಯಾನ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 31,000 ರು. ಇಂದ 1.10 ಲಕ್ಷ ರು. ವೇತನ ದೊರೆಯಲಿದೆ.
ಏಕಕಾಲದಲ್ಲಿ ಎರಡೆರಡು ಕೆಲಸ, ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್!
ವಯೋಮಿತಿ: ಭಾರತೀಯ ವಿಮಾನಯಾನ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
BHEL RECRUITMENT 2022: ವಿವಿಧ 150 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ : ಭಾರತೀಯ ವಿಮಾನಯಾನ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಾಮಾನ್ಯ ಜ್ಞಾನ, ಇಂಗ್ಲೀಷ್, ಜನರಲ್ ಇಂಟೆಲಿಜೆನ್ಸ್, ಜನರಲ್ ಅಪಿಟ್ಯೂಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.