Asianet Suvarna News Asianet Suvarna News

ಸಂಶೋಧನಾ ಸಹಾಯಕರು, ವಿಜ್ಞಾನಿಗಳ ನೇಮಕಾತಿ: 1,77,500 ರೂ.ವೇತನ!

ಇಸ್ರೋ, ಇಂಡಿಯನ್ ಇನ್ಸಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್‌(ಐಐಆರ್‌ಎಸ್) ಸಂಶೋಧನಾ ಕಿರಿಯ ಸಹಾಯಕ ಮತ್ತು ವಿಜ್ಞಾನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದೆ. ನೇರ ಸಂದರ್ಶನದ ಮೂಲಕ ಈ ನೇಮಕ ನಡೆಯುತ್ತಿದ್ದು, ಆಗಸ್ಟ್ 2ರಿಂದ 6ರವರಗೆ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

ISRO is recruiting for research junior and scientist and walk in interview
Author
Bengaluru, First Published Jul 15, 2021, 3:43 PM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ  ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್‌ನಲ್ಲಿ ಖಾಲಿ ಇರುವ ಕಿರಿಯ ಸಂಶೋಧನಾ ಸಹಾಯಕ ಮತ್ತು ಸಂಶೋಧನಾ ವಿಜ್ಞಾನಿಗಳ 8 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಇಸ್ರೋದ ರಿಮೋಟ್ ಸೆನ್ಸಿಂಗ್ ನಲ್ಲಿ ನೇರ ಸಂದರ್ಶನವನ್ನು ಆಹ್ವಾನಿಸಲಾಗಿದೆ. 

ಈ ನೇಮಕಾತಿ ಪ್ರಕ್ರಿಯೆಯಲ್ಲಿ 3 ಕಿರಿಯ ಸಂಶೋಧನಾ ಸಹಾಯಕ ಹುದ್ದೆ ಹಾಗೂ 5 ಸಂಶೋಧನಾ ವಿಜ್ಞಾನಿಗಳ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಟ್ಮೊಸ್ಪಿಯರ್ ಸೈನ್ಸ್ನಲ್ಲಿ / ಮೆಟಿಯೊರಾಲಜಿಯಲ್ಲಿ ಎಂಟೆಕ್/ ಅಟ್ಮೊಸ್ಪಿಯರ್ ಸೈನ್ಸ್‌ನಲ್ಲಿ ಆರ್ ಎಸ್ & ಜಿಐಎಸ್ ಅಪ್ಲಿಕೇಷನ್ಸ್ ಪೂರೈಸಿರುವ ಅಭ್ಯರ್ಥಿಗಳು ಕಿರಿಯ ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಫಾರ್ಮ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

458 ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ರಕ್ಷಣಾ ಸಚಿವಾಲಯ, ಅರ್ಜಿ ಹಾಕಿ
 
ಪಿಸಿಕ್ಸ್/ಮ್ಯಾಥಮೆಟಿಕ್ಸ್/ಅಟಮೊಸ್ಪಿಯರ್ ಸೈನ್ಸ್/ಮೆಟಿಯೊರಾಲಜಿ ನಲ್ಲಿ ಎಂಎಸ್ಸಿ ಪದವಿ ಗಳಿಸಿರಬೇಕು. ಅಭ್ಯರ್ಥಿಗಳು ಡಿಗ್ರಿಯಲ್ಲಿ ಪಿಸಿಕ್ಸ್/ಮ್ಯಾಥಮೆಟಿಕ್ಸ್ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು. ಈ ಹುದ್ದೆಗಳ ನೇಮಕ್ಕೆಸಂಬಂಧಿಸಿದ ಅಧಿಸೂಚನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಅಗ್ರಿಕಲ್ಚರಲ್ ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್/ರಿಮೋಟ್ ಸೆನ್ ಸಿಂಗ್ ಹಾಗೂ ಜಿಐಎಸ್ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಹೈಡ್ರೊಲಜಿ/ ಜಿಯೊಲಾಜಿ/ ಅಟೊಮೊಸ್ಪೆರಿಕ್ ಸೈನ್ಸ್/ ಫಿಸಿಕ್ಸ್/ ಮ್ಯಾಥಮೆಟಿಕ್ಸ್/ ಜಿಯೊಲಜಿ/ ಜಿಯೋಗ್ರಫಿಯಲ್ಲಿ ಎಂಎಸ್ಸಿ ಮಾಡಿರಬೇಕು. ಈ ನೇಮಕಾತಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು https://www.iirs.gov.in/ ಭೇಟಿ ನೀಡಿ.

ಇನ್ನು ಸಂಶೋಧನಾ ವಿಜ್ಞಾನಿಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ ಪದವಿ ಹೊಂದಿರುವುದು ಕಡ್ಡಾಯ. ಜಿಯೋಇನ್ಫಾರ್ಮೆಟಿಕ್ಸ್, ರಿಮೋಟ್ ಸೆನ್ಸಿಂಗ್ ಆಂಡ್ ಜಿಐಎಸ್‌ನಲ್ಲಿ ಎಂ ಟೆಕ್ ಮಾಡಿರಬೇಕು. ಬಿಇ ಅಥವಾ ಬಿಟೆಕ್ ಆಗಿದ್ದರೂ ಅರ್ಜಿ ಸಲ್ಲಿಸಬಹುದು. ಅಥವಾ ಅಗ್ರಿಕಲ್ಚರ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಎಂಇ, ಎಂಟೆಕ್ ಪದವಿ ಮುಗಿಸಿದ್ದವರೂ ಅರ್ಜಿ ಸಲ್ಲುಸಬಹುದು. ಮೇಲಿನ ಎಲ್ಲ ಅರ್ಹತೆಗಳಿದ್ರೂ, ಅಭ್ಯರ್ಥಿಗಳು ಇಎನ್ಇಟಿ, ಐಐಆರ್ ಎಸ್-ಜೆಟ್, ಜಿಎಟಿಒ/ಯಾವುದಾದರೂ ಒಂದು ವಿಷಯದಲ್ಲಿ ತತ್ಸಮಾನ ಅರ್ಹತೆ ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಸಂದರ್ಶನ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ವಾಕ್-ಇನ್-ಸಂದರ್ಶನದ ದಿನಾಂಕದಂದು ತಮ್ಮ ಎಲ್ಲಾ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರದ ಪ್ರತಿ ಮತ್ತು ಪದವಿಗಳ ಸ್ವಯಂ-ದೃಢೀಕರಿಸಿದ ಪ್ರತಿಗಳ ಮುದ್ರಣವನ್ನು ತರಬೇಕಾಗುತ್ತದೆ.

DRDO ನೇಮಕಾತಿ: 68 ಎಂಜಿನಿಯರ್ ಹುದ್ದೆಗಳಿಗೆ 70,000 ರೂ. ಮಾಸಿಕ ಸ್ಟೈಫಂಡ್

ಕಿರಿಯ ಸಂಶೋಧನಾ ಸಹವರ್ತಿ ಹುದ್ದೆಗಳಿಗೆ  ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 31,000 ರೂ. ವೇತನ ಪಾವತಿಸಲಾಗುತ್ತದೆ. ಹಾಗೇ ಸಂಶೋಧನಾ ವಿಜ್ಞಾನಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರಿಂದ 1,77,500 ರೂ.ವರೆಗೆ ವೇತನ ನೀಡಲಾಗುತ್ತದೆ.ಭಾರತೀ ಪ್ರಜೆಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಆಗಸ್ಟ್ 2 ರಿಂದ ಆಗಸ್ಟ್ 6೬ ರವರೆಗೂ‌ ನೇರ ಸಂದರ್ಶನ ನಡೆಸಲಾಗುತ್ತದೆ.

ಕೇಂದ್ರ ರೈಲ್ವೆಯಲ್ಲಿ ಸಂದರ್ಶನದ ಮೂಲಕ ನೇಮಕಾತಿ
ಕೇಂದ್ರ ರೈಲ್ವೆ ವಿಭಾಗವು, ಪೀಡಿಯಾಟ್ರಿಕ್ಸ್, ಆರ್ಥೋಪೆಡಿಕ್, ಇಎನ್‌ಟಿ, ಆಬ್ಸ್ಟ್ ಆಂಡ್ ಗೈನಕಾಲಜಿ ಮತ್ತು ಮೆಡಿಕಲ್ ಆಂಕೊಲಾಜಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ವ್ಯಕ್ತಿಗಳು ಜುಲೈ 15, 2021 ರಂದು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬಹುದು.    

ಕೇಂದ್ರ ರೇಲ್ವೆ ವಲಯವು, ಜುಲೈ 15ರಂದು ನೇರ ಸಂದರ್ಶನ ಆಯೋಜಿಸಿದ್ದು, ವೈದ್ಯಕೀಯ ನಿರ್ದೇಶಕರ ಕಚೇರಿ, ಡಾ.ಬಿಎಎಂ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು.  ಮುಂಬೈನ ಬೈಕುಲಾದಲ್ಲಿರೋ ಕೇಂದ್ರ ರೇಲ್ವೆಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮೂಲ ದಾಖಲಾತಿಗಳ ಸಮೇತ ವಾಕ್ ಇನ್ ಇಂಟರ್‌ವ್ಯೂಗೆ ಹಾಜರಾಗಬಹುದು. ಅರ್ಜಿ ಮಾದರಿಯನ್ನು ಭರ್ತಿ ಮಾಡಬಹುದು.

ಆದಾಯ ತೆರಿಗೆ ಇಲಾಖೆ 155 ಹುದ್ದೆಗೆ ನೇಮಕಾತಿ: ಕ್ರೀಡಾಪಟುಗಳಿಗೆ ಅವಕಾಶ

ಈ ನೇಮಕಾತಿ ಪ್ರಕ್ರಿಯೆ ಮೂಲಕ ಕೇಂದ್ರ ರೇಲ್ವೆಯಲ್ಲಿ ಒಂದು ಪೆಡಿಯಾಟ್ರಿಕ್ಸ್ ಹುದ್ದೆ, ಒಂದು ಆರ್ಥೋಪೆಡ್ರಿಕ್, 2 ಇಎನ್‌ಟಿ ಹುದ್ದೆ, 2 ಆಬ್ಸ್ ಅಂಡ್ ಗೈನೆ ಹುದ್ದೆ, ಒಂದು ಮೆಡಿಕಲ್ ಅಂಕೊಲಾಜಿ ಹುದ್ದೆಯನ್ನ ನೇಮಕ ಮಾಡಿಕೊಳ್ಳಲಾಗುವುದು.

ISRO is recruiting for research junior and scientist and walk in interview

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರಾಜ್ಯ / ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ / ಡಿಎಂ / ಡಿಎನ್‌ಬಿ ಅಥವಾ ಡಿಪ್ಲೊಮ್ಯಾಟ್ ಕೋರ್ಸ್ ಮಾಡಿರಬೇಕು. ಇನ್ನು ಹಿರಿಯ ವೈದ್ಯರ ಅಧಿಕಾರಾವಧಿ ಕನಿಷ್ಟ ಒಂದು ವರ್ಷ ಇರಲಿದ್ದು, ಗರಿಷ್ಠ ಮೂರು ವರ್ಷಗಳವರೆಗೆ ಅನುಮತಿ ಸಿಗಲಿದೆ. ಕಾಲಕಾಲಕ್ಕೆ ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಹಿರಿಯ ವೈದ್ಯರು ಸ್ನಾತಕೋತ್ತರ ಪದವಿ ಪಡೆದಿದ್ರೆ, ವೇತನ ರೂ .26,950(ಮೂಲ) + ರೂ .6600 / - (ಗ್ರೇಡ್ ಪೇ), ಪೇ ಬ್ಯಾಂಡ್ -3 (15600-39100) + ಎನ್‌ಪಿಎ ಮತ್ತು ಇತರ ಸಂಬಂಧಿತ ಭತ್ಯೆಗಳು ದೊರೆಯಲಿವೆ. 

Follow Us:
Download App:
  • android
  • ios