458 ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ರಕ್ಷಣಾ ಸಚಿವಾಲಯ, ಅರ್ಜಿ ಹಾಕಿ
ಭಾರತೀಯ ರಕ್ಷಣಾ ಸಚಿವಾಲಯವು 458 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ೪೪ ಅಮ್ಯೂನಿಷನ್ ಡಿಪಾರ್ಟ್ಮೆಂಟ್‌ನ ಒಟ್ಟು 444 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿದೆ.
ದೇಶ ರಕ್ಷಣೆ ವಿಚಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರುವ ಕನಸು ನಿಮಗಿದ್ಯಾ? ಕೇಂದ್ರ ಸರ್ಕಾರ ಪ್ರಮುಖ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ಆಸೆ ಇದ್ದರೆ, ತಡಮಾಡದೇ ಅರ್ಜಿ ಸಲ್ಲಿಸಿ. ಯಾಕಂದ್ರೆ ಈಗಾಗಲೇ ರಕ್ಷಣಾ ಸಚಿವಾಲಯವು 2021ರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
ಈ ಸಲ ಸಚಿವಾಲಯವು 458 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳು ಮತ್ತು ನಮೂನೆಯ ವಿವರಗಳಿಗಾಗಿ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್ indianarmy.nic.inಗೆ ಭೇಟಿ ನೀಡಿ ಪರಿಶೀಲಿಸಬಹುದು. ವಿವರವಾದ ಅರ್ಹತಾ ಮಾನದಂಡಗಳು ಮತ್ತು ಅರ್ಜಿ ನಮೂನೆಗಳು ವೆಬ್‌ಸೈಟ್‌ನಲ್ಲೂ ಲಭ್ಯ ಇವೆ. ಅಂದಹಾಗೇ ಎಲ್ಲಾ ಹುದ್ದೆಗಳಿಗೆ ಅರ್ಜಿದಾರರು ಆಗಸ್ಟ್ 9ರೊಳಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
DRDO ನೇಮಕಾತಿ: 68 ಎಂಜಿನಿಯರ್ ಹುದ್ದೆಗಳಿಗೆ 70,000 ರೂ. ಮಾಸಿಕ ಸ್ಟೈಫಂಡ್
ಅಧಿಸೂಚನೆಯ ಪ್ರಕಾರ, 44 ಅಮ್ಯೂನಿಷನ್ ಡಿಪಾರ್ಟ್ಮೆಂಟ್‌ನ ಒಟ್ಟು 444 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 255 (I) ABOU ನಲ್ಲಿ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಭಾರತೀಯ ಪ್ರಜೆ ಆಗಿರಬೇಕು. ಕಮಾಂಡೆಂಟ್, 41 Field Ammunition Depot, PIN909741, C/o 56 APO ಗೆ ಭರ್ತಿ ಮಾಡಿದ ಅರ್ಜಿಯನ್ನು ಕಳುಹಿಸಬೇಕು.
ಟ್ರೇಡ್ಸ್ ಮನ್ ಮೇಟ್ (ಹಿಂದಿನ ಮಜ್ದೂರ್) 220 ಹುದ್ದೆಗಳು, ಜೆಒಎ ( ಹಿಂದಿನ ಎಲ್ ಡಿಸಿ) 20 ಹುದ್ದೆಗಳು, ಎಂಟಿಎಸ್ 11 ಹುದ್ದೆಗಳು, ಮೆಟಿರೀಯಲ್ ಅಸಿಸ್ಟೆಂಟ್ 19 ಹುದ್ದೆಗಳು, 64 ಅಗ್ನಿಶಾಮಕ ಸಿಬ್ಬಂದಿ ಹಾಗೂ 255 (I) ABOU ನಲ್ಲಿ 14 ಟ್ರೇಡ್ಸ್ ಮನ್ ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುವುದು.
ಮೆಟೀರಿಯಲ್ ಅಸಿಸ್ಟೆಂಟ್ ಹುದ್ದೆಗೆ, ಅಭ್ಯರ್ಥಿಗಳ ಕನಿಷ್ಠ ಶೈಕ್ಷಣಿಕ ಅರ್ಹತೆ ಪದವಿ ಅಥವಾ ಮೆಟಿರಿಯಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಪೂರೈಸಿರಬೇಕು. ಜೆಒಎ ಹುದ್ದೆಗೆ, ಕನಿಷ್ಠ ಶೈಕ್ಷಣಿಕ ಅರ್ಹತೆ 12 ನೇ ತರಗತಿ ಮುಗಿಸಿರಬೇಕು. ಇತರೆ ಹುದ್ದೆಗಳಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ 10 ನೇ ತರಗತಿ ಪಾಸ್ ಆಗಿರಲೇಬೇಕು.
ಆದಾಯ ತೆರಿಗೆ ಇಲಾಖೆ 155 ಹುದ್ದೆಗೆ ನೇಮಕಾತಿ: ಕ್ರೀಡಾಪಟುಗಳಿಗೆ ಅವಕಾಶ
ರಕ್ಷಣಾ ಸಚಿವಾಲಯದ ಈ ಹುದ್ದೆಗಳಿಗೆ ನೇಮಕಗೊಳ್ಳಲು, ಅಭ್ಯರ್ಥಿಯು ದೈಹಿಕ ಸಹಿಷ್ಣುತೆ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಪಾಸ್ ಆಗಿರಬೇಕು. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
ಎಲ್ಲಾ ವರ್ಗಗಳಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆಗಳು / ಲಿಖಿತ ಪರೀಕ್ಷೆಯ ದಿನಾಂಕಗಳನ್ನು ಕಮಾಂಡೆಂಟ್ ಮೂಲಕ ತಿಳಿಸಲಾಗುತ್ತದೆ. ಸಾಮಾನ್ಯ ಪೋಸ್ಟ್ / ನೋಂದಾಯಿತ ಪೋಸ್ಟ್ / ಸ್ಪೀಡ್ ಪೋಸ್ಟ್ ಮೂಲಕ ಸ್ವೀಕರಿಸಿದ ಅರ್ಜಿಗಳನ್ನು ಕಮಾಂಡೆಂಟ್ ಪರಿಶೀಲನೆ ಮಾಡಿದ ನಂತರ ಎಲ್ಲಾ ರೀತಿಯಲ್ಲೂ ಸರಿಯಾಗಿ ಕಂಡುಬರುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗಳ ದಿನಾಂಕವನ್ನು ತಿಳಿಸಲಾಗುತ್ತದೆ.
ಈ ಸಲ ಸಚಿವಾಲಯವು 458 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳು ಮತ್ತು ನಮೂನೆಯ ವಿವರಗಳಿಗಾಗಿ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ವಿವರವಾದ ಮಾಹಿತಿ ದೊರೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿದೆ. ಹಾಗಾಗಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಆತ್ಮನಿರ್ಭರ ತಾಂತ್ರಿಕ ಶಿಕ್ಷಣ; ಸ್ಥಳೀಯ ಭಾಷೆಗಳಲ್ಲೇ ಎಂಜಿನಿಯರಿಂಗ್ ಕೋರ್ಸು!