Asianet Suvarna News Asianet Suvarna News

ESIC Recruitment 2021: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿ

 • ಖಾಲಿ ಇರುವ ಹುದ್ದೆ ಭರ್ತಿಗೆ ನೌಕರರ ರಾಜ್ಯ ವಿಮಾ ನಿಗಮ  ನೋಟಿಫಿಕೇಶನ್
 • 4 ಸೀನಿಯರ್ ರೆಸಿಡೆಂಟ್ ಹುದ್ದೆ ಭರ್ತಿಗೆ ನೇರ ಸಂದರ್ಶನ
 • ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ
   
esic recruitment apply for senior resident posts gow
Author
Bengaluru, First Published Dec 13, 2021, 2:54 PM IST
 • Facebook
 • Twitter
 • Whatsapp

ಬೆಂಗಳೂರು(ಡಿ.13): ನೌಕರರ ರಾಜ್ಯ ವಿಮಾ ನಿಗಮ ದಲ್ಲಿ(Employees State Insurance Corporation- ESIC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 4 ಸೀನಿಯರ್ ರೆಸಿಡೆಂಟ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 17,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ https://www.esic.nic.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಇಎಸ್‌ಐಸಿ  ನೇಮಕಾತಿಯ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಪಿಜಿ ಡಿಪ್ಲೋಮಾ/ಡಿಎನ್‌ಬಿ/ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಮತ್ತು ವೇತನ: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 17,2021ರ ಅನ್ವಯ ಗರಿಷ್ಟ 37 ವರ್ಷ ವಯಸ್ಸಾಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 67,700/-ರೂ ವೇತನ ನಿಗದಿಯಾಗಿದೆ.

AFCAT RECRUITMENT 2022: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.  ಡಿಸೆಂಬರ್ 17,2021ರಂದು ನೇರ ಸಂದರ್ಶನ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸಿಗಲಿದೆ.

CSG Karnataka Recruitment 2022: ಖಾಲಿ ಇರುವ 81 ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ

NABARD Recruitment 2021: ನಬಾರ್ಡ್ ವಿವಿಧ ಹುದ್ದೆಗಳ ಭರ್ತಿಗೆ   ಅರ್ಜಿ ಸಲ್ಲಿಸಲು ಕೊನೆ ದಿನ ಡಿ.19: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD), ಸ್ಪೆಷಲಿಸ್ಟ್ ಕನ್ಸಲ್ಟೆಂಟ್ (specialist consultants) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಬಾರ್ಡ್‌ ಸ್ಪೆಷಿಯಲಿಸ್ಟ್‌ ಕನ್ಸಲ್‌ಟಂಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ನಡೆಯಲಿದ್ದು, ಆಯ್ಕೆಯಾದವರು ಮುಂಬೈ (Mumbai) ಹೆಡ್‌ ಆಫೀಸ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಟ್ಟು 6 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ www.nabard.org ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 19.

Anganwadi Recruitment 2022: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು

ಚೀಫ್ ಟೆಕ್ನಾಲಜಿ ಆಫೀಸರ್-1,  ಚೀಫ್ ರಿಸ್ಕ್‌ ಮ್ಯಾನೇಜರ್-1, ಡಾಟಾ ಡಿಸೈನರ್ -1,  ಲೀಡ್ ಬಿಐ ಡಿಸೈನರ್-1, ಇಟಿಎಲ್ ಡಿಸೈನರ್-1,  ಸ್ಪೆಷಿಯಲಿಸ್ಟ್‌ ಆಫೀಸರ್ - (ಲೀಗಲ್) -1 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್/ ಬಿಸಿಎ / ಎಂಸಿಎ / ಎಲ್‌ಎಲ್‌ಎಂ ಅನ್ನು ಪ್ರಥಮ ದರ್ಜೆಯಲ್ಲಿ ಸರ್ಕಾರಿ ಅಂಗೀಕೃತ ವಿಶ್ವ ವಿದ್ಯಾಲಯಗಳಿಂದ ಪಡೆದಿರಬೇಕು. 

ಡಿಸೆಂಬರ್ 01, 2021 ಕ್ಕೆ 62 ವರ್ಷ ವಯೋಮಿತಿ ಮೀರದವರು, ಕನಿಷ್ಠ 5 ವರ್ಷಗಳ ಅನುಭವ ಇರುವವರು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್‌ www.nabard.org ನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್‌ಸಿ / ಎಸ್‌ಟಿ / PWBD ಅಭ್ಯರ್ಥಿಗಳು ಇಂಟಿಮೇಷನ್‌ ಚಾರ್ಜ್‌ ರೂ.50 ಪಾವತಿಸಬೇಕು. ಇತರೆ ಎಲ್ಲ ವರ್ಗದ ಅಭ್ಯರ್ಥಿಗಳು ರೂ.800 ಪಾವತಿಸಬೇಕು.

Follow Us:
Download App:
 • android
 • ios