Bidar District Court recruitment 2022: ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ
ಬೀದರ್ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುವ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 07 ಕೊನೆಯ ದಿನವಾಗಿದೆ.
ಬೀದರ್ (ಜೂನ್ 19): ಬೀದರ್ (Bidar) ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ (Court) ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುವ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಮಾತ್ರ ಅವಕಾಶ ಇದ್ದು, ಬೀದರ್ ಪ್ರಧಾನ ಜಿಲ್ಲಾ ನ್ಯಾಯಾಲಯ ಹಾಗೂ ಸತ್ರ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ವಿವರಗಳು: ಬೀದರ್ ಜಿಲ್ಲಾ ನ್ಯಾಯಾಲಯವು (Bidar District Court ) ಒಟ್ಟು 32 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಈ ಪೈಕಿ ಬೆರಳಚ್ಚು ನಕಲುಗರರು ಹುದ್ದೆ 03, ಆದೇಶ ಜಾರಿಕಾರರು 14 ಹುದ್ದೆಗಳು ಹಾಗೂ ಜವಾನರು 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮೇಲೆ ನಮೂದಿಸಲಾಗಿರುವ ಹುದ್ದೆಗಳಿಗೆ ವಿದ್ಯಾರ್ಜತೆಯನ್ನು ನಿಗದಿ ಮಾಡಲಾಗಿದೆ.
5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ, ಗೌರವ ಧನ ಹೆಚ್ಚಳಕ್ಕೆ ಸರಕಾರ ಆದೇಶ
ಬೆರಳಚ್ಚು ನಕಲುಗಾರರು ಹುದ್ದೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಕಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ATMA Kodagu Recruitment 2022; ವ್ಯವಸ್ಥಾಪಕ, ಆಶಾ ಕಾರ್ಯಕರ್ತೆ ಹುದ್ದೆಗೆ ನೇಮಕಾತಿ
ಆದೇಶ ಜಾರಿಕಾರರು ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಾಹನ ಚಾಲನಾ ಪರವಾನಿಗೆ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಜವಾನರು ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಕನ್ನಡ ಓದಲು, ಬರೆಯಲು ತಿಳಿದಿರಬೇಕು.
Western Railway Recruitment 2022; ಬರೋಬ್ಬರಿ 3612 ಹುದ್ದೆಗಳ ನೇಮಕಾತಿ
ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾದರೂ ಆಗಿರಬೇಕಿದ್ದು, ಗರಿಷ್ಠವೆಂದರೆ 35ರ ಒಳಗಿರಬೇಕಿದೆ. ಇನ್ನು ಒಬಿಸಿ ವರ್ಗಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 38ರ ಒಳಗಿರಬೇಕು. ಎಸ್ಸಿ/ಎಸ್ಟಿವರ್ಗಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷದೊಳಗಿರಬೇಕು.
VPN Banned Govt Employees; ಸರಕಾರಿ ನೌಕರರು ಇನ್ಮುಂದೆ ವಿಪಿಎನ್ ಬಳಸುವಂತಿಲ್ಲ
ವೇತನ ಶ್ರೇಣಿ : ಅಧಿಸೂಚನೆಯಲ್ಲಿ ವೇತನವನ್ನೂ ತಿಳಿಸಲಾಗಿದೆ. ಬೆರಳಚ್ಚು ನಕಲುಗರರ ಹುದ್ದೆಗೆ 21,400 ರು. ಇಂದ 42,000 ರು.ವರೆಗೆ ಮಾಸಿಕ ವೇತನ ನೀಡಲಾಗುವುದು. ಆದೇಶ ಜಾರಿಕಾರರಿಗೆ 19,950ರಿಂದ 28,950 ರು.ವರೆಗೆ ಹಾಗೂ ಜವಾನರು ಹುದ್ದೆಗೆ 17,000ರಿಂದ 28,950 ರು.ವರೆಗೆ ಪಾವತಿಸಲಾಗುತ್ತದೆ. ಈ ಮೂರು ಹುದ್ದೆಗಳಿಗೆ ವಿಶೇಷ ಭತ್ಯೆಗಳನ್ನೂ ನೀಡಲಾಗುವುದು.
Karnataka Teachers Recruitment; ಜೂ.24ರಂದು ಶಿಕ್ಷಕರ ನೇಮಕಕ್ಕೆ ಕೌನ್ಸೆಲಿಂಗ್
ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅರ್ಜಿ ಶುಲ್ಕ 200 ರು. ನಿಗದಿ ಮಾಡಲಾಗಿದ್ದು, ಇದೇ ದರವು ಒಬಿಸಿ ವರ್ಗಕ್ಕೂ ಅನ್ವಯವಾಗಲಿದೆ. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ಫಿಕ್ಸ್ ಮಾಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಜೊತೆಗೆ 10ನೇ ತರಗತಿ ಹಾಗೂ ಪಿಯುಸಿ, ಪದವಿಯ ಅಂಕಪಟ್ಟಿ, ಅರ್ಹತಾ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ(ಲಭ್ಯ ಇದ್ದಲ್ಲಿ) ಪ್ರತಿ, ಸಹಿ ಮಾಡಿದ ಭಾವಚಿತ್ರದ ಸ್ಕಾನ್ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಜುಲೈ 07ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೀದರ್ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ಗೆ https://districts.ecourts.gov.in/bidar-onlinerecruitment ಲಾಗಿನ್ ಆಗಿ ಪರಿಶೀಲಿಸಬಹುದು.