Asianet Suvarna News Asianet Suvarna News

VPN Banned Govt Employees; ಸರಕಾರಿ ನೌಕರರು ಇನ್ಮುಂದೆ ವಿಪಿಎನ್‌ ಬಳಸುವಂತಿಲ್ಲ

ಕೇಂದ್ರ ಸರಕಾರಿ ಉದ್ಯೋಗಿಗಳು ಇನ್ನು ಮುಂದೆ ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್ ಸೇವೆಗಳಲ್ಲಿ ಯಾವುದೇ ಗೌಪ್ಯ ಸರ್ಕಾರಿ ಫೈಲ್‌ಗಳನ್ನು ಉಳಿಸದಂತೆ ಆದೇಶ ಹೊರಡಿಸಲಾಗಿದೆ.

VPN services banned for government employees gow
Author
Bengaluru, First Published Jun 17, 2022, 5:06 PM IST

ನವದೆಹಲಿ (ಜೂನ್.17):  ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ನಂತಹ ಯಾವುದೇ ಸರ್ಕಾರೇತರ ಕ್ಲೌಡ್ ಸೇವೆಯಲ್ಲಿ ಯಾವುದೇ ಆಂತರಿಕ, ನಿರ್ಬಂಧಿತ ಅಥವಾ ಗೌಪ್ಯ ಸರ್ಕಾರಿ ಡೇಟಾ ಫೈಲ್‌ಗಳನ್ನು ಉಳಿಸದಂತೆ ಕೇಂದ್ರ ಸರಕಾರ ತನ್ನ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದೆ ಎಂದು ವರದಿಯಾಗಿದೆ. 

ದಿನದಿಂದ ದಿನಕ್ಕೆ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೋ ಬಾರಿ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿದೆ. ಮತ್ತು ಆಗುತ್ತಲೇ ಇದೆ. ಈ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ  ಮೂರನೇ ವ್ಯಕ್ತಿಯ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು (VPN) ಬಳಸುವುದನ್ನು ನಿಷೇಧಿಸುವಂತೆ ಹೇಳಿದೆ. Nord VPN, ExpressVPN ಮತ್ತು Tor ನಂತಹ ಕಂಪನಿಗಳು ನೀಡುವ ಯಾವುದೇ ಅನಾಮಧೇಯ ಸೇವೆಗಳನ್ನು ಬಳಸದಂತೆ  ಕೇಂದ್ರ ಸರಕಾರಿ ನೌಕರರಿಗೆ ನಿರ್ಬಂಧ ಹೇರಲಾಗಿದೆ.

ಜೊತೆಗೆ  ಉದ್ಯೋಗಿಗಳು ಇನ್ನು ಮುಂದೆ ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್ ಸೇವೆಗಳಲ್ಲಿ ಯಾವುದೇ ಗೌಪ್ಯ ಸರ್ಕಾರಿ ಫೈಲ್‌ಗಳನ್ನು ಉಳಿಸದಂತೆ ಸೂಚನೆ ಹೊರಡಿಸಿದೆ. 

Railway Recruitment 2022; ಈಶಾನ್ಯ ಗಡಿ ರೈಲ್ವೆಯಲ್ಲಿ 5636 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ  ( Ministry of Electronics and Information Technology) ಅಡಿಯಲ್ಲಿ  ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿಗದಿಪಡಿಸಿರುವ ಈ ನಿಯಮಗಳು ಸರ್ಕಾರದ ಭದ್ರತೆಯನ್ನು ಸುಧಾರಿಸುವ ಗುರಿ ಹೊಂದಿವೆ. ವಿಪಿಎನ್ ಸೇವೆಗಳನ್ನು ಭಯೋತ್ಪಾದಕ ಸಂಘಟನೆಗಳು ಬಳಸಿಕೊಳ್ಳಬಹುದು ಮತ್ತು ಅವುಗಳನ್ನು ಪತ್ತೆಹಚ್ಚಲು ಅಸಾಧ್ಯವಾಗುವುದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಭಾರತ ಸರ್ಕಾರವು ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ವಿಪಿಎನ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್-ಇನ್) ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ದೇಶದಲ್ಲಿ ತಮ್ಮ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಎಕ್ಸ್‌ಪ್ರೆಸ್‌ ವಿಪಿಎನ್, ಸರ್ಫ್‌ಶಾರ್ಕ್ ಮತ್ತು ನಾರ್ಡ್‌ ವಿಪಿಎನ್ ಹೇಳಿದ್ದವು. ಇದಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ.

ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ!

ಹೆಚ್ಚುವರಿಯಾಗಿ, ಇಲಾಖೆಯು ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು 'ಜೈಲ್ ಬ್ರೇಕ್' ಅಥವಾ 'ರೂಟ್' ಮಾಡದಂತೆ ಅಥವಾ "ಆಂತರಿಕ ದಾಖಲೆಗಳನ್ನು" ಸ್ಕ್ಯಾನ್ ಮಾಡಲು CamScanner ನಂತಹ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸ್ಕ್ಯಾನರ್ ಸೇವೆಗಳನ್ನು ಬಳಸದಂತೆ ಸೂಚಿಸಿದೆ.

ಜುಲೈ 2020ರಲ್ಲಿ ಸರ್ಕಾರ ನಿಷೇಧಿಸಿದ ಹಲವಾರು ಚೀನೀ ಅಪ್ಲಿಕೇಶನ್‌ಗಳಲ್ಲಿ CamScanner ಕೂಡ ಒಂದು. ನಿಷೇಧದ ಬಳಿಕವೂ ಇದು ಕೆಲವು ಆವೃತ್ತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಗಡಿ ಹಗೆತನ ಸೇರಿದಂತೆ ಅನೇಕ ರೀತಿಯ ಭದ್ರತಾ ಕಾಳಜಿಯ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರದ ಭದ್ರತೆಗೆ ಸಂಬಂಧಪಟ್ಟ ಗೌಪ್ಯತೆಯನ್ನ ಕಾಯ್ದುಕೊಳ್ಳಬೇಕೆಂದು ಎಂದು ನೌಕರರಿಗೆ ಸೂಚಿಸಿದೆ.

BBMP Night School; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ 

ಸರಕಾರದ ಸುತ್ತೋಲೆ ಈ ರೀತಿ ಇದೆ

  • ಸರ್ಕಾರದ ಗೌಪ್ಯ ಡೇಟಾವನ್ನು ಸಂಗ್ರಹಿಸಲು ಉದ್ಯೋಗಿಗಳು ಕ್ಲೌಡ್ ಸೇವೆಗಳನ್ನು ಬಳಸಬಾರದು.
  • VPN ಸೇವೆಗಳ ಬಳಕೆ  ಸಹ ನಿಷೇಧ.
  • ಸರ್ಕಾರಿ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಾದ ಕ್ಯಾಮ್‌ಸ್ಕ್ಯಾನರ್‌ನಂತಹ ಯಾವುದೇ ಆಪ್ ಬಳಸಬಾರದು.
  • ಉದ್ಯೋಗಿಗಳು ತಮ್ಮ ಸಾಧನಗಳನ್ನು 'ರೂಟ್' ಅಥವಾ 'ಜೈಲ್ ಬ್ರೇಕ್' ಮಾಡಬಾರದು.
  • ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು.
  • ತಮ್ಮ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರ ದಾಖಲೆಯನ್ನು ನಿರ್ವಹಿಸುವಂತೆ Cert-In ಈ ಹಿಂದೆ VPN ಕಂಪನಿಗಳಿಗೆ ನಿರ್ದೇಶಿಸಿತ್ತು.
  • ಮಾರ್ಗಸೂಚಿಗಳನ್ನು ಅನುಸರಿಸಲು ಇಚ್ಛಿಸದ ಕಂಪನಿಗಳು ಭಾರತದಿಂದ ದೂರ ಹೋಗಲು ಸ್ವತಂತ್ರರು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Follow Us:
Download App:
  • android
  • ios