Asianet Suvarna News Asianet Suvarna News

ಹಳ್ಳಿಯಿಂದ ಬೆಂಗಳೂರಿಗೆ ಬಂದ ಹುಡ್ಗೀರೇ ಹುಷಾರ್‌: ಸರ್ಕಾರಿ ಕೆಲಸದ ಆಮಿಷವೊಡ್ಡಿ ವಂಚಿಸುವ ಗ್ಯಾಂಗ್‌ನಿಂದ ದೂರವಿರಿ!

ಬೆಂಗಳೂರಿಗೆ ದುಡಿಯಲು ಬರುವ ಹುಡಿಗಿಯರನ್ನೇ ಟಾರ್ಗೆಟ್‌ ಮಾಡಿಕೊಂಡು, ನಿಮಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡುವ ಗ್ಯಾಂಗ್‌ ಸಕ್ರಿಯವಾಗಿದೆ. 

Bengaluru comes village girls are beware government jobs lure and cheating network is active sat
Author
First Published Nov 16, 2023, 2:14 PM IST | Last Updated Nov 16, 2023, 2:14 PM IST

ಬೆಂಗಳೂರು (ನ.16): ರಾಜ್ಯ ಹಾಗೂ ಹೊರ ರಾಜ್ಯಗಳ ಹಳ್ಳಿಗಳಿಂದ ಬೆಂಗಳೂರಿಗೆ ದುಡಿಯಲು ಬರುವ ಹುಡಿಗಿಯರನ್ನೇ ಟಾರ್ಗೆಟ್‌ ಮಾಡಿಕೊಂಡು, ನಿಮಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡುವ ಗ್ಯಾಂಗ್‌ ಸಕ್ರಿಯವಾಗಿದೆ. 

ಗ್ರಾಮೀಣ ಭಾಗದಲ್ಲಿ ಕಾಲೇಜು ಹಂತದವರೆಗೆ ಓದಿಕೊಂಡು ಮನೆಯಲ್ಲಿರುವ ಬಡತನವನ್ನು ನೀಗಿಸಲು ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕಂಪನಿಗಳು ಹಾಗೂ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನ ನಡೆಸುವಂತಹ ಹುಡುಗಿಯರು ಹಾಗೂ ಹೆಣ್ಣು ಮಕ್ಕಳೇ ಹುಷಾರಾಗಿರಿ. ಕಾರಣ ನಿಮ್ಮಂತಹ ದುಡಿಮೆಗೆ ಬಂದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್‌ ಮಾಡಿಕೊಂಡು ನಿಮಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಬಣ್ಣ ಬಣ್ಣದ ಮಾತನಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುವ ಹಾಗೂ ಕೆಲಸದ ಆಮಿಷವೊಡ್ಡಿ ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಗ್ಯಾಂಗ್‌ ಸಕ್ರಿಯವಾಗಿದೆ. ಹೀಗೆ, ಹಳ್ಳಿ ಹುಡುಗಿಯರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಬ್ಯಾಂಕಾಕ್‌ಗೆ ಹೋಗಿ ಮಜಾ ಉಡಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.

ಹಾಸನಾಂಬ ದರ್ಶನದ ಟಿಕೆಟ್‌, ಲಾಡು ಮಾರಾಟದಿಂದಲೇ 6 ಕೋಟಿ ಸಂಗ್ರಹ: ಹುಂಡಿ ಎಣಿಕೆ ಈಗಷ್ಟೇ ಆರಂಭ

ಹೌದು, ಬಣ್ಣ ಬಣ್ಣದ ಮಾತನಾಡಿ ಲಕ್ಷಾಂತರ ರೂ. ಹಣವನ್ನು ಪಡೆದು ಮೋಸ ಮಾಡಿ ತಾನು ಬ್ಯಾಂಕಾಕ್‌ಗೆ ಹೋಗಿ ಮಜಾ ಮಾಡುತ್ತಿದ್ದ ಆರೋಪಿ ಮೋಹನ್ ಕುಮಾರ್ (53) ಎಂಬಾತನನ್ನ ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗೆ ಬಣ್ಣ, ಬಣ್ಣದ ಮಾತುಗಳೇ ಬಂಡವಾಳ ಆಗಿದೆ. ತನಗೆ ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರದ ಎಲ್ಲ ಸಚಿವರು ಗೊತ್ತು ಎಂದು ಹೇಳಿಕೊಂಡು ಹಳ್ಳಿಯಿಂದ ಬಂದ ಯುವತಿಯರು ಹಾಗೂ ಮಹಿಳೆಯರಿಗೆ ತೋರಿಸುತ್ತಿದ್ದನು. ತಾಲೂಕು ಕಚೇರಿ ಹಾಗೂ ಬಿಬಿಎಂಪಿ ಕಚೇರಿಗಳಲ್ಲಿನ ಸಣ್ಣಪುಟ್ಟ ಪ್ರಮಾಣಪತ್ರಗಳನ್ನು ಮಾಡಿಸಿಕೊಟ್ಟು ನಂಬಿಕೆ ಗಿಟ್ಟಿಸಿಕೊಳ್ಳುವ ಈ ವ್ಯಕ್ತಿ ನಂತರ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಹಣವನ್ನು ಪಡೆದು ಪಂಗನಾಮ ಹಾಕುತ್ತಿದ್ದನು.

ಬೆಂಗಳೂರಿನಲ್ಲಿ ಹಳ್ಳಿಗಳಿಂದ ಬಂದು ವಾಸ ಮಾಡಿವ ಯುವತಿಯರು, ಮಹಿಳೆಯರಿಗೆ ಸರ್ಕಾರ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳನ್ನು ಕೊಡೊಸುವುದಾಗಿ ಹೇಳಿ ಏಣಿಯಿಲ್ಲದೇ ಆಕಾಶಕ್ಕೆ ಹತ್ತಿಸುತ್ತಿದ್ದನು. ಇನ್ನು ಮಹಿಳೆಯರು ತಾವು ದುಡಿದ ಹಣವನ್ನು ಈತನಿಗೆ ಕೊಟ್ಟರೆ, ಹೊಸದಾಗಿ ಬೆಂಗಳೂರಿಗೆ ಬಂದ ಯುವತಿಯರು ಊರಲ್ಲಿರುವ ಪೋಷಕರಿಗೆ ಜಮೀನು ಮಾರಿಸಿ, ಅಥವಾ ಮದುವೆಗೆ ಕೂಡಿಟ್ಟ ಹಣವನ್ನು ಪಡೆದು ಈತನಿಗೆ ಕೊಡುತ್ತಿದ್ದರು. ಈ ಎಲ್ಲ ಹಣವನ್ನು ಪಡೆದು ಒಂದೆರಡು ಬಾರಿ ವಿಧಾನಸೌಧದ ಮುಂದೆ ಹೋಗಿ ಫೋಟೋ ತೆಗೆಸಿಕೊಂಡು ಬಂದು ನಿಮ್ಮ ಫೈಲ್‌ ರಿಜಿಸ್ಟರ್‌ ಆಗಿದೆ ಎಂತೇಳಿ ಮತ್ತಷ್ಟು ಹಣ ವಸೂಲಿ ಮಾಡುತ್ತಿದ್ದನು. 

ಪೋಕ್ಸೋ ಪ್ರಕರಣದಲ್ಲಿ 14 ತಿಂಗಳಿಂದ ಜೈಲಿನಲ್ಲಿದ್ದ ಮುರುಘಾ ಸ್ವಾಮೀಜಿ ಬಿಡುಗಡೆ

ಇನ್ನು ಕೆಲಸ ಕೊಡಿಸುವ ಬಗ್ಗೆ ಮಹಿಳೆಯರು ಹೆಚ್ಚು ದುಂಬಾಲು ಬಿದ್ದ ನಂತರ ತನ್ನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿ ಆಗುತ್ತಿದ್ದನು. ಹೀಗೆ, ಅನೇಕ ಯುವತಿಯರು ಹಾಗೂ ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಆರೋಪಿ, ತನ್ನನ್ನು ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದು ವಾರ ಅಥವಾ 15 ದಿನಗಳ ಕಾಲ ಬೆಂಗಳೂರು ಬಿಟ್ಟು ಹೊರ ರಾಜ್ಯ ಅಥವಾ ವಿದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದನು. ಹೀಗೆ, ಕೆಲವು ಏರಿಯಾಗಳಲ್ಲಿ ಯುವತಿಯರ ನಂಬಿಕೆ ಗಿಟ್ಟಿಸಿ ಹಣ ವಸೂಲಿ ಮಾಡಿದ ನಂತರ ಈತ ಬ್ಯಾಂಕಾಕ್‌ ಸೇರಿ ವಿವಿಧ ದೇಶಗಳಿಗೆ ಹೋಗಿ ಮಜಾ ಮಾಡುತ್ತಿದ್ದನು.

Latest Videos
Follow Us:
Download App:
  • android
  • ios