Asianet Suvarna News Asianet Suvarna News

ಪೋಕ್ಸೋ ಪ್ರಕರಣದಲ್ಲಿ 14 ತಿಂಗಳಿಂದ ಜೈಲಿನಲ್ಲಿದ್ದ ಮುರುಘಾ ಸ್ವಾಮೀಜಿ ಬಿಡುಗಡೆ

ಕಳೆದ 14 ತಿಂಗಳಿಂದ ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದ ಚಿತ್ರದುರ್ಗ ಶ್ರೀ ಮರುಘರಾಜೇಂದ್ರ ಮಠದ ಮುರುಘಾ ಶಿವ ಶರಣರು ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.

Chitradurga Murugha Swamiji was released from jail after 14 months in the POCSO case sat
Author
First Published Nov 16, 2023, 12:45 PM IST

ಚಿತ್ರದುರ್ಗ (ನ.16): ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗ ಶ್ರೀ ಮರುಘರಾಜೇಂದ್ರ ಮಠದ ಮುರುಘಾ ಶಿವ ಶರಣರು ಕಳೆದ 14 ತಿಂಗಳಿಂದ ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದರು. ಆದರೆ, ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರಿಂದ ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಮಠದ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರದ ಪೋಕ್ಸೋ ಪ್ರಕರಣ ಕಳೆದ ಎರಡು ದಿನಗಳ ಹಿಂದೆ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, ಇನ್ನೊಂದು ಅಟ್ರಾಸಿಟಿ ಪ್ರಕರಣದಲ್ಲಿ ಅವರಿಗೆ ಬಾಡಿ ವಾರೆಂಟ್‌ ನೀಡಲಾಗಿತ್ತೇ ವಿನಃ ಜೈಲು ಶಿಕ್ಷೆ ಆಗಿರಲಿಲ್ಲ. ಆದ್ದರಿಂದ, ಮೊನ್ನೆ ಪೋಕ್ಸೋ ಪ್ರಕರಣದ ಕುರಿತ ಜಾಮೀನು ಸಿಕ್ಕಿದ ಆಧಾರದಲ್ಲಿ ಗುರುವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇಂದು ಬೆಳಗ್ಗೆ ಮುರುಘಾ ಶಸ್ವಾಮೀಜಿ ಪರ ವಕೀಲರು ನ್ಯಾಯಾಧೀಶರ ಮುಂದೆ ಬಿಡುಗಡೆಗೆ ಮನವಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. 

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಜಾಮೀನು ಮಂಜೂರು: ಆದ್ರೂ ಬಿಡುಗಡೆ ಭಾಗ್ಯವಿಲ್ಲ

ದಾವಣಗೆರೆಯತ್ತ ಹೊರಟ ಸ್ವಾಮೀಜಿ: ಮುರುಘಾ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾದ ನಂತರ ಚಿತ್ರದುರ್ಗದ ಮಠಕ್ಕೆ ಹೋಗಿ ಸಾಕ್ಷ್ಯ ನಾಶ ಮಾಡುವ ಹಾಗೂ ಆಡಳಿತಾಧಿಕಾರಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮುರುಘಾ ಸ್ವಾಮೀಜಿಗೆ ಚಿತ್ರದುರ್ಗ ಮುರುಘಾ ಮಠಕ್ಕೆ ಹೋಗದಂತೆ ಷರತ್ತು ವಿಧಿಸಲಾಗಿದೆ. ಆದ್ದರಿಂದ ಜೈಲಿನಿಂದ ಬಿಡುಗಡೆಯಾದ ಮುರುಘಾ ಶಿವಮೂರ್ತಿ ಶರಣರು ತಮ್ಮ ಬೆಂಬಲಿಗರ ನಡುವೆ ದಾವಣಗೆರೆಯತ್ತ ಹೊರಟಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ, ಅವರ ಮುಂದಿನ ನಡೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. 

ಜೈಲಿನಿಂದ ಬಿಡುಗಡೆ ಮಾಡುವ ಮುನ್ನ ಮುರುಘಾ ಶ್ರೀಗಳಿಗೆ ನ್ಯಾಯಾಲಯವು ಕೆಲವೊಂದು ಷರತ್ತುಗಳನ್ನು ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇನ್ನು 7 ಷರತ್ತುಗಳನ್ನು ಒಡ್ಡಲಾಗಿದ್ದು, ಇವುಗಳನ್ನು ಪಾಲನೆ ಮಾಡುವಂತೆ ಜಿಲ್ಲಾ ನ್ಯಾಯಾಲಯದಿಂದ ಸೂಚನೆ ನೀಡಲಾಗಿದೆ.

ಏಳು ಷರತ್ತುಗಳನ್ನ ವಿಧಿಸಿ ಜಾಮೀನು ನೀಡಿದ ಹೈಕೋರ್ಟ್

  1. ನ್ಯಾಯಾಲಯ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು..
  2. ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಮಾಡುವಂತಿಲ್ಲ
  3. ಜಾಮೀನು ಪಡೆಯುವ ಮೊದಲು ಇಬ್ಬರ ಶ್ಯೂರಿಟಿ ನೀಡಬೇಕು.
  4. ವಿದೇಶಕ್ಕೆ ಹೋಗದಂತೆ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು.
  5. 2 ಲಕ್ಷ ರೂ. ಬೆಲೆಬಾಳುವ ಬೇಲ್ ಬಾಂಡ್ ನೀಡಬೇಕು.
  6. ವಿಚಾರಣಾ ನ್ಯಾಯಾಲಯ ಹೈಕೋರ್ಟ್ ನ ಜಾಮೀನು ಅರ್ಜಿ ಆದೇಶ ಮೇಲೆ ಪ್ರಭಾವಗೊಳ್ಳಬಾರದು.
  7. ಇದೇ ರೀತಿ ಅಪರಾಧವಾದ ಎಸಗುವಂತಿಲ್ಲ.
Follow Us:
Download App:
  • android
  • ios