Asianet Suvarna News Asianet Suvarna News

ಕೆಎಸ್‌ಆರ್‌ಟಿಸಿಯಲ್ಲಿ ಭಾರಿ ವಾಹನ ತರಬೇತಿಗೆ ಅರ್ಜಿ ಆಹ್ವಾನ

ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತವಾಗಿ 30 ದಿನಗಳಲ್ಲಿ ಭಾರಿ, ಲಘು ವಾಹನ ಚಾಲನಾ ತರಬೇತಿ ನೀಡಲು ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ ವಿಭಾಗವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

Applications for heavy vehicle training at KSRTC gow
Author
Bengaluru, First Published Jun 22, 2022, 1:40 AM IST

ಬೆಂಗಳೂರು (ಜೂನ್ 22): ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತವಾಗಿ 30 ದಿನಗಳಲ್ಲಿ ಭಾರಿ, ಲಘು ವಾಹನ ಚಾಲನಾ ತರಬೇತಿ ನೀಡಲು ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ ವಿಭಾಗವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೋಲಾರದ ಮಾಲೂರಿನ ಕೆಎಸ್‌ಆರ್‌ಟಿಸಿ ಕೇಂದ್ರೀಯ ತರಬೇತಿ ಕೇಂದ್ರದಲ್ಲಿ ಉಚಿತ ಭಾರೀ, ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ (ವಸತಿ ಮತ್ತು ಊಟ ಸೇರಿ) ನೀಡಲಾಗುತ್ತದೆ. ತರಬೇತಿಯ ಅವಧಿ 30 ದಿನಗಳು ಎಂದು ತರಬೇತಿ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲ ಅವಕಾಶ ನೀಡಲಾಗುತ್ತದೆ.

ಬೇಕಾದ ದಾಖಲೆಗಳು: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ(ಉತ್ತೀರ್ಣ, ಅನುತ್ತೀರ್ಣ) ಅಂಕಪಟ್ಟಿಸಲ್ಲಿಸಬೇಕು. ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು. ನಾಲ್ಕು ಪಾಸ್‌ಪೋರ್ಟ್  ಅಳತೆಯ ಭಾವಚಿತ್ರ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆರ್ಧಾ ಕಾರ್ಡ್‌ ಸಲ್ಲಿಸಬೇಕು.

Yoga Hall in chickpet ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ

ಭಾರೀ ವಾಹನ ತರಬೇತಿಗೆ ಅರ್ಜಿ ಸಲ್ಲಿಸುವವರು ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು. ಭಾರೀ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 21, ಗರಿಷ್ಠ 35 ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳು 30 ದಿನಗಳು ತರಬೇತಿ ಪಡೆಯಲಿದ್ದು, ಊಟ ಮತ್ತು ಉಚಿತ ವಸತಿ ಸೌಲಭ್ಯ ದೊರೆಯುತ್ತದೆ.

IBPS Recruitment 2022; ಬರೋಬ್ಬರಿ 8106 ಹುದ್ದೆಗಳಿಗೆ ನೇಮಕಾತಿ

ತಾಂತ್ರಿಕ ತರಬೇತಿ ವಿವರ: ಟೈರ್‌ ಫಿಟ್ಟರ್‌, ಆಟೋ ಮೆಕ್ಯಾನಿಕ್‌, ವೆಲ್ಡರ್‌ ತರಬೇತಿ ಸಹಿತ ತಾಂತ್ರಿಕ ತರಬೇತಿಯ ಅವಧಿ 90 ದಿನವಾಗಿದೆ. ಎಸ್‌ಎಸ್‌ಎಲ್‌ಸಿ ಪಾಸ್‌/ಫೇಲ… ಆಗಿದ್ದವರು ಅರ್ಜಿ ಸಲ್ಲಿಸಬಹುದು. ಆರ್ಧಾ ಕಾರ್ಡ್‌, ಬ್ಯಾಂಕ್‌ ಪಾಸ್‌ಪುಸ್ತಕ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಾಲ್ಕು ಪಾಸ್‌ ಪೋರ್ಚ್‌ ಅಳತೆಯ ಭಾವಚಿತ್ರ ಸಲ್ಲಿಸುವುದು.

ಅರ್ಜಿ ಸಲ್ಲಿಸುವ ವಿಳಾಸ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೇಂದ್ರೀಯ ತರಬೇತಿ ಕೇಂದ್ರ, ಕೋಲಾರ ಮುಖ್ಯ ರಸ್ತೆ, ಬಸ್‌ ಡಿಪೋ ಹತ್ತಿರ, ಮಾಲೂರು -563130 ಇಲ್ಲಿಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760990133, 7760992539ಗೆ ಕರೆ ಮಾಡಬಹುದು. 

ಹುಬ್ಬಳ್ಳಿ-ಧಾರವಾಡ ಅವಳಿ‌ನಗರದಲ್ಲಿ ಪಾರ್ಕಿಂಗ್ ಪರದಾಟ! 

5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇನ್ನೂ 5 ಸಾವಿರ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಶನಿವಾರ ಆದೇಶ ಮಾಡಿದೆ. ರಾಜ್ಯದ 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಇರುವ 30 ಸಾವಿರ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 22 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದೀಗ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳದ ಆದೇಶದ ಬೆನ್ನಲ್ಲೇ ಇನ್ನೂ 5 ಸಾವಿರ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಆದೇಶಿಸಲಾಗಿದೆ.

ಜೂ.24ರಂದು ಶಿಕ್ಷಕರ ನೇಮಕಕ್ಕೆ ಕೌನ್ಸೆಲಿಂಗ್‌:  2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಲಾಗಿದೆ.

Follow Us:
Download App:
  • android
  • ios