Asianet Suvarna News Asianet Suvarna News

Teachers Recruitment: 15,000 ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ: 54,342 ಮಂದಿ ಪಾಸ್‌

ನೊಂದಾಯಿಸಿದ್ದ 1.16 ಲಕ್ಷ ಮಂದಿ ಪೈಕಿ ಪರೀಕ್ಷೆ ಬರೆದಿದ್ದ 74923 ಅಭ್ಯರ್ಥಿಗಳು, ಶೀಘ್ರ ಹುದ್ದೆಗೆ ಆಯ್ಕೆ ಪಟ್ಟಿ

15000 Teacher Recruitment Exam Result Announced in Karnataka grg
Author
Bengaluru, First Published Aug 18, 2022, 9:25 AM IST

ಬೆಂಗಳೂರು(ಆ.18):  ರಾಜ್ಯ ಸರ್ಕಾರಿ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಖಾಲಿ ಇರುವ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಕಳೆದ ಮೇ ತಿಂಗಳಲ್ಲಿ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಇಲಾಖೆ ಬುಧವಾರ ರಾತ್ರಿ ಪ್ರಕಟಿಸಿದೆ.

ಕಳೆದ ಮೇ 21, 22ರಂದು ನಡೆದ ಪರೀಕ್ಷೆಗೆ ನೋಂದಾಯಿಸಿದ್ದ 1.16 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಎಲ್ಲ ವಿಷಯಗಳಿಂದ 74,923 ಅಭ್ಯರ್ಥಿಗಳ ಹಾಜರಾಗಿದ್ದರು. ಪೈಕಿ 54,342 ಮಂದಿ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿದ್ದು ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷಾ ಫಲಿತಾಂಶ, ಬಿಇಡಿ, ಡಿಇಡಿ ಸೇರಿದಂತೆ ಶಿಕ್ಷಕರ ಶಿಕ್ಷಣದ ಫಲಿತಾಂಶ ಹಾಗೂ ಶಿಕ್ಷಕರ ಅರ್ಹತಾ ಫಲಿತಾಂಶದ ನಿರ್ಧಿಷ್ಟಫಲಿತಾಂಶವನ್ನು ನಿಯಮಾನುಸಾರ ಪರಿಗಣಿಸಿ 15 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೋಸ್ಟ್ ಆಫೀಸ್‌ನಲ್ಲಿ 1 ಲಕ್ಷ ಉದ್ಯೋಗ ನೇಮಕಾತಿಗೆ ಅಧಿಸೂಚನೆ, ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ!

ಇಲಾಖೆಯ ವೆಬ್‌ಸೈಟ್‌ www.schooleducation.kar.nic.in ನಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ದಾಖಲಿಸಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಪರೀಕ್ಷಾ ನಿಯಮ ಉಲ್ಲಂಘನೆ ಹಾಗೂ ಇನಿತರೆ ಕಾರಣಗಳಿಂದ 61 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಇಬ್ಬರು ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದಾಖಲೆ ತಿದ್ದುಪಡಿಗೆ ಅವಕಾಶ:

ಅಲ್ಲದೆ, ಅಭ್ಯರ್ಥಿಗಳ ದಾಖಲಾತಿ ತಿದ್ದುಪಡಿಗೆ ಇದೇ ವೇಳೆ ಅವಕಾಶ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ಅರ್ಜಿಯಲ್ಲಿನ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆ ತಾಯಿ ಹೆಸರು, ಜನ್ಮ ದಿನಾಂಕ, ಪದವಿ, ಬಿಇಡಿ, ಡಿಎಲ್‌ಇಡಿ ಮತ್ತು ಟಿಇಟಿ ಅಂಕಗಳಿಗೆ ಸಂಬಂಧ ದಾಖಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಆ.18ರಿಂದ 24 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿ ಅಗತ್ಯವಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಮನವಿಯನ್ನು ಅಗತ್ಯ ದೃಢೀಕೃತ ಪ್ರಮಾಣ ಪತ್ರಗಳೊಂದಿಗೆ ವಿಶೇಷಾಧಿಕಾರಿ, ಕೇಂದ್ರೀಯ ದಾಖಲಾತಿ ಘಟಕ, ಕೆ.ಜಿ.ರಸ್ತೆ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್‌.ವಿಶಾಲ್‌ ತಿಳಿಸಿದ್ದಾರೆ.

UIDAI Bengaluru Recruitment 2022: ಬೆಂಗಳೂರಿನ ಆಧಾರ್​ ಕೇಂದ್ರದಲ್ಲಿ ಉದ್ಯೋಗವಕಾಶ

ವಿಷಯವಾರು ಹಾಗೂ ಮಾಧ್ಯಮವಾರು ಖಾಲಿ ಹುದ್ದೆ ಮತ್ತು ಅರ್ಹತೆ ಪಡೆದವರ ಸಂಖ್ಯೆ
ವಿಷಯ ಖಾಲಿ ಹುದ್ದೆ ಅರ್ಹತೆ ಪಡೆದವರು

ಇಂಗ್ಲೀಷ್‌ ಭಾಷೆ 1,807 9,190
ಸಮಾಜ ವಿಜ್ಞಾನ (ಕನ್ನಡ) 4,331 32,995
ಸಮಾಜ ವಿಜ್ಞಾನ (ಉರ್ದು) 261 278
ಸಮಾಜ ವಿಜ್ಞಾನ (ಮರಾಠಿ) 99 93
ಸಮಾಜ ವಿಜ್ಞಾನ (ತೆಲುಗು) 2 0
ಗಣಿತ ಮತ್ತು ವಿಜ್ಞಾನ (ಕನ್ನಡ) 6,013 8,712
ಗಣಿತ ಮತ್ತು ವಿಜ್ಞಾನ (ಉರ್ದು) 411 286
ಗಣಿತ ಮತ್ತು ವಿಜ್ಞಾನ (ಮರಾಠಿ) 74 50
ಗಣಿತ ಮತ್ತು ವಿಜ್ಞಾನ (ತೆಲುಗು) 2 2
ಜೈವಿಕ ವಿಜ್ಞಾನ (ಕನ್ನಡ) 1,900 2,635
ಜೈವಿಕ ವಿಜ್ಞಾನ (ಉರ್ದು) 83 75
ಜೈವಿಕ ವಿಜ್ಞಾನ (ಮರಾಠಿ) 17 26
ಒಟ್ಟು 15,000 54,342

Follow Us:
Download App:
  • android
  • ios