ಶ್ರೀಲಂಕಾ ನೀಡಿದ್ದ 203ರನ್'ಗಳ ಸುಲಭ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 3 ವಿಕೆಟ್'ಗಳ ಅಂತರದ ಜಯಭೇರಿ ಬಾರಿಸಿದೆ. 8 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಜಿಂಬಾಬ್ವೆ ಸರಣಿ ಜಯದ ರುಚಿ ಸವಿದಿದೆ.

ಹಂಬನ್'ಟೋಟ(ಜು.10): ಆರಂಭಿಕ ಬ್ಯಾಟ್ಸ್'ಮನ್ ಹ್ಯಾಮಿಲ್ಟನ್ ಮಸಕಜಾ ಆಕರ್ಷಕ ಬ್ಯಾಟಿಂಗ್ ಹಾಗೂ ಸಿಕಂದರ್ ರಾಜಾ ಚಾಣಾಕ್ಷ ಬೌಲಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ಪ್ರವಾಸಿ ಜಿಂಬಾಬ್ವೆ ತಂಡ ಐತಿಹಾಸಿಕ ಸರಣಿ ಜಯಿಸಿದೆ.

ಶ್ರೀಲಂಕಾ ನೀಡಿದ್ದ 203ರನ್'ಗಳ ಸುಲಭ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 3 ವಿಕೆಟ್'ಗಳ ಅಂತರದ ಜಯಭೇರಿ ಬಾರಿಸಿದೆ. 8 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಜಿಂಬಾಬ್ವೆ ಸರಣಿ ಜಯದ ರುಚಿ ಸವಿದಿದೆ.

ಜಿಂಬಾಬ್ವೆಯ ಅಗ್ರ ಪಂಕ್ತಿಯ ಬ್ಯಾಟ್ಸ್'ಮನ್'ಗಳಾದ ಮಸಕಜಾ ಆಕರ್ಷಕ ಆಕರ್ಷಕ ಅರ್ಧಶತಕ(73) ಹಾಗೂ ಸೋಲೋಮನ್ ಮಿರೆ(43) ಮತ್ತು ತ್ರಿಸಾಯಿ ಮುಸಕಂದಾ(37) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಇನ್ನೂ 71 ಎಸೆತಗಳು ಬಾಕಿಯಿರುವಂತೆಯೇ ಸರಣಿ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 3-2 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿದೆ.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ತಂಡದ ಮೊತ್ತ 78 ರನ್'ಗಳಾಗುವಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆರಂಭಿಕ ನಿರ್ಶಾನ್ ಡಿಕ್'ವಾಲಾ ಮತ್ತು ಆಸೀಲ್ ಗುಣರತ್ನೆ ಹೊರತುಪಡಿಸಿ ಮತ್ಯಾವ ಬ್ಯಾಟ್ಸ್'ಮನ್ ಕೂಡಾ ಜವಬ್ದಾರಿಯುತ ಆಟ ಪ್ರದರ್ಶಿಸಲಿಲ್ಲ. ಕೊನೆಯಲ್ಲಿ ದುಶ್ಮಂತ್ ಚಮೀರಾ(18*) ಬ್ಯಾಟಿಂಗ್ ಸಹಾಯದಿಂದ ಶ್ರೀಲಂಕಾ ಇನ್ನೂರರ ಗಡಿದಾಟಿತು.

ಜಿಂಬಾಬ್ವೆ ಪರ ಶಿಸ್ತಿನ ದಾಳಿ ನಡೆಸಿದ ಸಿಕಂದರ್ ರಾಜಾ 3 ಹಾಗೂ ಗ್ರೇಮ್ ಕ್ರೀಮರ್ 2 ವಿಕೆಟ್ ಪಡೆದು ಲಂಕಾ ರನ್ ಬೇಟೆಗೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ : 203/8

ಅಸೀಲಾ ಗುಣರತ್ನೆ: 59

ನಿರ್ಶಾನ್ ಡಿಕ್'ವಾಲಾ : 52

ಸಿಕಂದರ್ ರಾಜಾ : 21/3

ಜಿಂಬಾಬ್ವೆ: 204/7

ಹ್ಯಾಮಿಲ್ಟನ್ ಮಸಕಜಾ : 73

ಸೋಲೋಮನ್ ಮಿರೆ : 43

ಅಕಿಲಾ ಧನಂಜಯ : 47/4

ಪಂದ್ಯ ಪುರುಷೋತ್ತಮ : ಸಿಕಂದರ್ ರಾಜಾ

ಸರಣಿ ಪುರುಷೋತ್ತಮ : ಹ್ಯಾಮಿಲ್ಟನ್ ಮಸಕಜಾ