ಈ ಸಮಾರಂಭಕ್ಕೆ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾದರು.

ಮುಂಬೈ(ಮೇ.24): ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಕ್ ದೇ ಇಂಡಿಯಾ ಚಿತ್ರದ ನಟಿಯಾಗಿರುವ ಘಾಟ್ಕೆ ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಮಾರಂಭಕ್ಕೆ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾದರು.

ಆದರೆ ನಿಶ್ಚಿತಾರ್ಥದಲ್ಲಿ ಗಮನ ಸೆಳೆದಿದ್ದು ಮಾತ್ರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ. ಕಾರ್ಯಕ್ರಮದಲ್ಲಿ ಕಪ್ಪು ಬಿಳುಪು ಬಣ್ಣದ ಉಡುಗೆಯಲ್ಲಿ ಬಂದಿದ್ದ ವಿರಾಟ್-ಅನುಷ್ಕಾ ನೆರೆದಿದ್ದ ಜನರ ಗಮನಸೆಳೆದರು. ಜಹೀರ್ ನಿಶ್ಚಿತಾರ್ಥಕ್ಕೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಪತ್ನಿ ಅಂಜಲಿ ಜೊತೆಗೆ, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಬಾಲಿವುಡ್ ನಟ-ನಟಿಯರು ಆಗಮಿಸಿ ಜಹೀರ್-ಸಾಗರಿಕಾ ಜೋಡಿಗೆ ಶುಭ ಕೋರಿದರು.