ಶಾರ್ಜಾದಲ್ಲಿ ಆರಂಭವಾಗಲಿರುವ 2ನೇ ಆವೃತ್ತಿ ಟಿ10 ಲೀಗ್ ಟೂರ್ನಿಯಾಡಲು ಜಹೀರ್ ಖಾನ್, ಆರ್.ಪಿ.ಸಿಂಗ್ ಸೇರಿದಂತೆ 8 ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಟಿ10 ಕಣದಲ್ಲಿರುವ ಭಾರತೀಯರು ಯಾರು? ಇಲ್ಲಿದೆ.

ಮುಂಬೈ(ಅ.24): ಇದೇ ನ.21ರಿಂದ ಶಾರ್ಜಾದಲ್ಲಿ ಆರಂಭ ಗೊಳ್ಳಲಿರುವ 2ನೇ ಆವೃತ್ತಿಯ ಟಿ10 ಲೀಗ್‌ನಲ್ಲಾಡಲು ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್, ಆರ್.ಪಿ.ಸಿಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಪ್ರವೀಣ್ ಕುಮಾರ್, ಎಸ್.ಬದ್ರಿನಾಥ್, ರೀತೇಂದರ್ ಸಿಂಗ್ ಸೋಧಿ ಸಹ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. 

Scroll to load tweet…

ಇವರೆಲ್ಲರೂ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಹೊಸ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವೀರೇಂದ್ರ ಸೆಹ್ವಾಗ್ ಹಾಗೂ ಶಾಹೀದ್ ಅಫ್ರಿದಿ ಟೂರ್ನಿಯ ಐಕಾನ್‌ಗಳಾಗಿದ್ದು, ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಮೊದಲ ಆವೃತ್ತಿಯಲ್ಲಿ 6 ತಂಡಗಳಿದ್ದವು.

Scroll to load tweet…

Scroll to load tweet…