ಕಳೆದ ತಿಂಗಳಷ್ಟೇ ಚಕ್ ದೇ ಇಂಡಿಯಾ ಚಿತ್ರ ಖ್ಯಾತಿಯ ಸಾಗರಿಕಾ ಘಾಟ್ಗೆಯೊಂದಿಗೆ ಜ್ಯಾಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಟ್ರಿನಿಡಾಡ್(ಜೂ.26): ಭಾರತ-ವೆಸ್ಟ್‌ಇಂಡೀಸ್ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ತಮ್ಮ ಪ್ರೇಯಸಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನೂ ವಿಂಡೀಸ್‌ಗೆ ಕರೆದುಕೊಂಡು ಹೋಗಿದ್ದು, ಅವರೊಂದಿಗೆ ಈದ್ ಹಬ್ಬವನ್ನು ಆಚರಿಸಿದ್ದಾರೆ.

ಕಳೆದ ತಿಂಗಳಷ್ಟೇ ಚಕ್ ದೇ ಇಂಡಿಯಾ ಚಿತ್ರ ಖ್ಯಾತಿಯ ಸಾಗರಿಕಾ ಘಾಟ್ಗೆಯೊಂದಿಗೆ ಜ್ಯಾಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಹಲವು ಪಾರ್ಟಿಗಳಲ್ಲಿ ಜಾಕ್-ಘಾಟ್ಗೆ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮಾಧ್ಯಮಗಳಿಗೆ ಆಹಾರವಾಗಿದ್ದರು.

ಜ್ಯಾಕ್ ಜೊತೆಗಿರುವ ಫೋಟೋವೊಂದನ್ನು ಘಾಟ್ಗೆ ಸಾಮಾಜಿಕ ತಾಣ ಇನ್‌'ಸ್ಟಾಗ್ರಾಂನಲ್ಲಿ ಹಾಕಿದ್ದು, ಫೋಟೋ ಬಹಳಷ್ಟು ಅಭಿಮಾನಿಗಳನ್ನು ಆಕರ್ಷಿಸಿದೆ.