ಧೋನಿ ಓರ್ವ ಅನುಭವಿ ಆಟಗಾರನಾಗಿದ್ದು ಎದುರಾಳಿ ತಂಡದ ಬ್ಯಾಟ್ಸ್'ಮನ್'ಗಳ ತಂತ್ರವನ್ನು ಅರ್ಥಮಾಡಿಕೊಳ್ಳಬಲ್ಲ ಚಾಣಾಕ್ಷ. ಜೊತೆಗೆ ಯುವ ಆಟಗಾರರಿಗೆ ಸೂಕ್ತ ಸಲಹೆ ಸಹಕಾರ ನೀಡುತ್ತಾರೆ ಎಂದು ಚಾಹಲ್ ತಿಳಿಸಿದ್ದಾರೆ.

ಮುಂಬೈ(ಅ.22): ಟೀಂ ಇಂಡಿಯಾಗೆ ಈಗಲೂ ಧೋನಿಯೇ ನಾಯಕ ಎಂದು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಧೋನಿ ನಾಯಕತ್ವ ತ್ಯಜಿಸಿರಬಹುದು. ಆದರೆ, ಈಗಲೂ ಅವರೇ ತಂಡದ ನಾಯಕ. ಹಲವು ಸಂದರ್ಭಗಳಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕ್ಷೇತ್ರರಕ್ಷಣೆ ಬದಲಾವಣೆಗಳನ್ನು ಧೋನಿಯೇ ನೋಡಿಕೊಳ್ಳುತ್ತಾರೆ. ‘ನೀನು ಚಿಂತಿಸಬೇಡ, ನಾನು ನೋಡಿಕೊಳ್ಳುತ್ತೇನೆ ಎಂದು ಕೊಹ್ಲಿಗೆ ಧೋನಿ ಧೈರ್ಯ ತುಂಬುತ್ತಾರೆ’ ಎಂದಿದ್ದಾರೆ.

ಧೋನಿ ಓರ್ವ ಅನುಭವಿ ಆಟಗಾರನಾಗಿದ್ದು ಎದುರಾಳಿ ತಂಡದ ಬ್ಯಾಟ್ಸ್'ಮನ್'ಗಳ ತಂತ್ರವನ್ನು ಅರ್ಥಮಾಡಿಕೊಳ್ಳಬಲ್ಲ ಚಾಣಾಕ್ಷ. ಜೊತೆಗೆ ಯುವ ಆಟಗಾರರಿಗೆ ಸೂಕ್ತ ಸಲಹೆ ಸಹಕಾರ ನೀಡುತ್ತಾರೆ ಎಂದು ಚಾಹಲ್ ತಿಳಿಸಿದ್ದಾರೆ.