ಲಂಡನ್(ಜು.15): ಲಾರ್ಡ್ಸ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲು ಅಭಿಮಾನಿಗಳಿಗೆ ಮಾತ್ರವಲ್ಲ ಟೀಂ ಇಂಡಿಯಾಗೂ ನೋವು ತರಿಸಿದೆ.  ಇದೀಗ 3ನೇ ಪಂದ್ಯದ ಗೆಲುವಿಗೆ ಕೊಹ್ಲಿ ಸೈನ್ಯ ತಯಾರಿ ಆರಂಭಿಸಿದೆ.

2ನೇ ಏಕದಿನದಲ್ಲಿ ಭಾರತ ಸೋಲಿನತ್ತ ಮುಖಮಾಡುತ್ತಿದ್ದಂತೆ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 48ನೇ ಓವರ್ ವೇಳೆಗೆ ಟೀಂ ಇಂಡಿಯಾ ಸೋಲು ಖಚಿತವಾಗಿತ್ತು. ಯಾಕೆಂದರೆ ಯಜುವೆಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್  ಕ್ರೀಸ್‌ನಲ್ಲಿದ್ದರು. ಹೀಗಾಗಿ ಬೃಹತ್ ಮೊತ್ತ ಬೆನ್ನಟ್ಟೋದು ಸಾಧ್ಯವಿಲ್ಲ ಅನ್ನೋದು ತಂಡಕ್ಕೂ ಖಚಿತವಾಗಿತ್ತು.

ಡ್ರೆಸ್ಸಿಂಗ್ ರೂಂ ನಲ್ಲಿ ಎಲ್ಲರು ತಂಡ ಸೋಲುತ್ತಿರವ ನೋವಿನಲ್ಲಿದ್ದರು. ಆದರೆ ಈ ವೇಳೆ ಕ್ರೀಸ್‌ನಲ್ಲಿದ್ದ ಚಾಹಲ್ , ಡ್ರೆಸ್ಸಿಂಗ್ ರೂಂನಲ್ಲಿದ್ದ ಆತಂಕವನ್ನ ದೂರಮಾಡಿ ಹೀರೋ ಆಗಿದ್ದಾರೆ. 48ನೇ ಓವರ್‌ನಲ್ಲಿ ಡೇವಿಡ್ ವಿಲೆ ಎಸೆತದಲ್ಲಿ ಯಜುವೇಂದ್ರ ಚಾಹಲ್ ಬೌಂಡರಿ ಸಿಡಿಸಿದರು. ಬಳಿಕ ಬ್ಯಾಟ್ ಎತ್ತಿ ಸಂಭ್ರಮಿಸಿದರು. ಈ ಘಟನೆ ಆತಂಕದಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ನಗು ತರಿಸಿತ್ತು.

 

 

ಚಾಹಲ್ ಸಂಭ್ರಮಾಚರಣೆ ವೀಡಿಯೋ ಇದೀಗ ವೈರಲ್ ಆಗಿದೆ. ಚೆಹಾಲ್ ಸಂಭ್ರಮಕ್ಕೆ ಟೀಂ ಇಂಡಿಯಾ ಸಹ ಆಟಗಾರರು ಖುಷಿಯಾಗಿದ್ದಾರೆ. ಜೊತೆಗೆ ಡ್ರೆಸ್ಸಿಂಗ್ ರೂಂನಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದರು.