ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತಾ ಆ ಒಂದು ಘಟನೆ?

First Published 15, Jul 2018, 3:22 PM IST
Yuzvendra Chahal believes Virat Kohli's wicket was the turning point of the match
Highlights

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಶರಣಾಗಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಈ ಸೋಲಿಗೆ ಕಾರಣವೇನು? ಇಂತಹ ಹಲವು ಪ್ರಶ್ನೆಗಳು ಈಗ ಎಲ್ಲರನ್ನ ಕಾಡ್ತಿದೆ. ಹಾಗಾದರೆ ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡದ ಸೋಲಿಗೆ ಇಲ್ಲಿದೆ ಕಾರಣ.

ಲಂಡನ್(ಜು.15):  ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸೋ ಮೂಲಕ ಸರಣಿ 1-1 ಅಂತರದಲ್ಲಿ ಸಮಭಲಗೊಂಡಿದೆ. ಹೀಗಾಗಿ ಅಂತಿಮ ಪಂದ್ಯ ಇದೀಗ ಭಾರಿ ಕುತೂಹಲ ಮೂಡಿಸಿದೆ.

ಲಾರ್ಡ್ಸ್‌ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿರೋದು ಸೋಲಿಗೆ ಪ್ರಮುಖ ಕಾರಣ. ಆದರೆ ಗೆಲುವಿನ ಹಾದಿಯಲ್ಲಿದ್ದ ಟೀಂ ಇಂಡಿಯಾ ದಿಢೀರ್ ಆಗಿ ಸೋಲಿನತ್ತ ವಾಲಿರೋದು ಯಾಕೆ ಅನ್ನೋದನ್ನ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚೆಹಾಲ್ ಬಹಿರಂಗ ಪಡಿಸಿದ್ದಾರೆ.

ಪಂದ್ಯದ ಬಳಿಕ ಮಾಧ್ಯಮ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಚೆಹಾಲ್, ಭಾರತದ ಸೋಲಿಗೆ ವಿರಾಟ್ ಕೊಹ್ಲಿ ವಿಕೆಟ್ ಪತನವೇ ಕಾರಣವಾಯಿತು ಎಂದಿದ್ದಾರೆ. ಕೊಹ್ಲಿ ಔಟಾದ ಬಳಿಕ ಟೀಂ ಇಂಡಿಯಾದ ಒತ್ತಡ ಹೆಚ್ಚಾಯಿತು. ಹೀಗಾಗಿ ಉಳಿದ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಜೋ ರೂಟ್ ಶತಕ, ಹಾಗೂ ಟೀಂ ಇಂಡಿಯಾ ಡೆತ್ ಓವರ್‌ನಲ್ಲಿ ದುಬಾರಿಯಾಯಿತು. ಮುಂದಿನ ಪಂದ್ಯದಲ್ಲಿ ಇವೆಲ್ಲವನ್ನೂ ಸರಿದೂಗಿಸಿಕೊಂಡು ಕಣಕ್ಕಿಳಿಯಲಿದ್ದೇವೆ ಎಂದು ಚೆಹಾಲ್ ಹೇಳಿದ್ದಾರೆ.

loader