Asianet Suvarna News Asianet Suvarna News

ಹಾಲಿವುಡ್ ಹ್ಯಾರಿ ಪಾಟರ್ ಚಿತ್ರದಲ್ಲಿ ಯುವರಾಜ್ ಸಿಂಗ್ ಪತ್ನಿ!

ಬಾಲಿವುಡ್‌ನ ಬಾಡಿಗಾರ್ಡ್ ಚಿತ್ರದ ಮೂಲಕ ಭಾರಿ ಸದ್ದು ಮಾಡಿದ ಬ್ರಿಟೀಷ್ ಮಾಡೆಲ್ ಹಝೆಲ್ ಕೀಚ್, ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಕೈಹಿಡದ ಮೇಲೆ ಹೆಚ್ಚು ಜನಪ್ರಿಯರಾದರು. ಯುವಿ ಪತ್ನಿ ಹಝೆಲ್ ಬಾಲಿವುಡ್ ಎಂಟ್ರಿಗೂ ಮೊದಲು ಹಾಲಿವುಡ್ ಚಿತ್ರದಲ್ಲೂ ನಟಿಸಿದ್ದಾರೆ. ಇಲ್ಲಿದೆ ವಿವರ.

Yuvraj Singh wife Hazel Keech has acted in 3 Harry Potter movies
Author
Bengaluru, First Published Sep 25, 2018, 10:06 PM IST
  • Facebook
  • Twitter
  • Whatsapp

ಮುಂಬೈ(ಸೆ.25): ಟೀಂ ಇಂಡಿಯಾ ಅಲ್ರೌಂಡರ್ ಯುವರಾಜ್ ಸಿಂಗ್ ಪತ್ನಿ ಹಝೆಲ್ ಕೀಚ್ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಕೆಲ ಚಿತ್ರಗಳಲ್ಲಿ ನಟಿಸಿರುವುದನ್ನ ಗಮನಿಸಿದ್ದೇವೆ. ಕೀಚ್ ಐಟಂ ಹಾಡು, ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ಕರೀನಾ ಕಪೂರ್ ಗೆಳತಿಯಾಗಿ ಅಭಿನಯಿಸಿದ್ದೂ ಇನ್ನು ಯಾರು ಮರೆತಿಲ್ಲ.

ಇದೇ ಹಝೆಲ್ ಕೀಚ್ ಭಾರತದ ಚಿತ್ರರಂಗಕ್ಕೆ ಕಾಲಿಡೋ ಮೊದಲೇ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್‌ನ ಖ್ಯಾತ ಹ್ಯಾರಿ ಪಾಟರ್ ಚಿತ್ರದಲ್ಲಿ ಹಝೆಲ್ ಕೀಚ್ ನಟಿಸಿದ್ದಾರೆ. ಇದನ್ನ ಸ್ವತಃ ಹಝೆಲ್ ಕೀಚ್ ಬಹಿರಂಗ ಪಡಿಸಿದ್ದಾರೆ.

Yuvraj Singh wife Hazel Keech has acted in 3 Harry Potter movies

ಗೌರವ್ ಕಪೂರ್ ನಡೆಸಿಕೊಡುವ ಖಾಸಿಗ ಕಾರ್ಯಕ್ರಮದಲ್ಲಿ ಹಝೆಲ್ ಕೀಚ್ ತಮ್ಮ ಹಾಲಿವುಡ್ ಜರ್ನಿಯನ್ನ ಮೆಲುಕು ಹಾಕಿದ್ದಾರೆ.  ಹ್ಯಾರಿ ಪಾಟರ್‌ನ ಮೂರು ಚಿತ್ರಗಳಲ್ಲಿ ಕೀಚ್ ಕಾಣಿಸಿಕೊಂಡಿದ್ದಾರೆ. 

Follow Us:
Download App:
  • android
  • ios